ಇನ್ ಸ್ಟಾಗ್ರಾಮ್ ಬಳಕೆದಾರಿಗೆ ಹೊಸ ಆಯ್ಕೆ: ಕೆಟ್ಟ ಕಾಮೆಂಟ್ ಗಳನ್ನು ಬ್ಲಾಕ್ ಮಾಡಬಹುದು..!!

ಬಳಕೆದಾರರಿಗೆ ಬೇಡದಿರುವಂತಹ ಕಾಮೆಂಟ್ ಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದಲ್ಲದೆ ಕಳ ದರ್ಜೆಯ ಭಾಷೆಯ ಬಳಕೆಯನ್ನು ತಡೆಹಿಡಿಯುವ ಫಿಲ್ಟರ್ ಅನ್ನುನೀಡಿದೆ.

By Precilla Dias
|

ಇನ್ ಸ್ಟಾಗ್ರಾಮ್ ಬಳಕೆದಾರರಿಗೆ ಹೊಸದೊಂದು ಆಯ್ಕೆಯನ್ನು ನೀಡಿದ್ದು, ಇದು ಬಳಕೆದಾರರಿಗೆ ಮತ್ತಷ್ಟು ಸುರಕ್ಷತೆಯನ್ನು ನೀಡಲಿದೆ. ಇದಕ್ಕಾಗಿಯೇ ಎರಡು ಫಿಚರ್ ಗಳನ್ನು ಬಿಡುಗಡೆ ಮಾಡಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸಲಿದೆ ಎನ್ನಲಾಗಿದೆ.

ಇನ್ ಸ್ಟಾಗ್ರಾಮ್ ಬಳಕೆದಾರಿಗೆ ಹೊಸ ಆಯ್ಕೆ

ಹೊಸದಾಗಿ ನೀಡಿರುವ ಆಯ್ಕೆಯಲ್ಲಿ ಬಳಕೆದಾರರಿಗೆ ಬೇಡದಿರುವಂತಹ ಕಾಮೆಂಟ್ ಗಳನ್ನು ಡಿಲೀಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದಲ್ಲದೆ ಕಳ ದರ್ಜೆಯ ಭಾಷೆಯ ಬಳಕೆಯನ್ನು ತಡೆಹಿಡಿಯುವ ಫಿಲ್ಟರ್ ಅನ್ನುನೀಡಿದೆ. ಇದು ಮುಂದಿನ ದಿನಗಳಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವುದನ್ನು ತಡೆ ಹಿಡಿಯಲಿದೆ ಎನ್ನಲಾಗಿದೆ.

ಕೆಟ್ಟದಾದಂತಹ ಕಾಮೆಂಟ್ ಗಳನ್ನು ಬ್ಲಾಕ್ ಮಾಡಲಿದೆ:

ಇನ್ ಸ್ಟಾಗ್ರಾಮ್ ನಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಟ್ಟಪದಗಳನ್ನು ಬಳಸಿ ಕಾಮೆಂಟ್ ಮಾಡುವುದನ್ನು ತಡೆಯುವ ಸಲುವಾಗಿ ಹೊಸ ಫಿಲ್ಟರ್ ನೀಡಿದೆ. ಇದು ನಿಮ್ಮ ಪೋಸ್ಟ್ ಮತ್ತು ಲೈವ್ ವಿಡಿಯೋದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವುದನ್ನು ತಡೆಯಲಿದೆ. ಇದಕ್ಕಾಗಿ ಬ್ಲಾಕ್ ಮಾಡುವ ಇಲ್ಲವೇ ಬಿಡುವ ಆಯ್ಕೆಯನ್ನು ನಿಮಗೆ ಬಿಡಲಿದೆ.

ಕೆಟ್ಟ ಭಾಷೆಯನ್ನು ಬಳಕೆಯನ್ನು ತಡೆಯಲಿದೆ:

ಇದಲ್ಲದೇ ಸ್ಪಾಮ್ ಫಿಟ್ಟರ್ ನಿಮ್ಮ ಪೋಸ್ಟ್ ಮತ್ತು ಕಾಮೆಂಟ್ ಗಳಲ್ಲಿ ಬಳಸುವ ಕೆಟ್ಟ ಭಾಷೆಯನ್ನು ತಡೆ ಹಿಡಿಯಲಿದೆ. ಇದು ಒಟ್ಟು 9 ಭಾಷೆಗಳಲ್ಲಿ ಬರೆಯುವ ಕಾಮೆಂಟ್ ಗಳನ್ನು ಗುರುತಿಸಿ, ಅದರಲ್ಲಿ ಕೀಳು ಮಟ್ಟದ ಭಾಷೆಯನ್ನು ಬಳಕೆ ಮಾಡಿದ್ದರೆ ಅವುಗಳನ್ನು ಪೋಸ್ಟ್ ಮಾಡದಂತೆ ತಡೆಯಲಿದೆ. ಇದು ಇಂಗ್ಲಿಷ್, ಸ್ಪಾನಿಶ್, ಪ್ರೋರ್ಚುಗೀಸ್, ಅರೆಬಿಕ್, ಫ್ರೆಂಚ್, ಜರ್ಮನಿ, ರಷ್ಯನ್, ಜಪಾನಿಸ್ ಮತ್ತು ಚೈನಿಸ್ ಭಾಷೆಯನ್ನು ಗುರುತಿಸಲು ಶಕ್ತವಾಗಿದೆ.

ನೋಡಲು ಈ ಫಿಲ್ಟರ್ ಗಳು ಒಂದೇ ಮಾದರಿಯಲ್ಲಿ ಕಂಡರು ಬೇರೆ ಬೇರೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ. ಈ ಹೊಸ ಫಿಲ್ಟರ್ ಗಳು ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಭಾಷೆಗಳನ್ನು ಸಫೋರ್ಟ್ ಮಾಡಲಿದ್ದು, ದಿನದಿಂದ ದಿನಕ್ಕೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಇನ್ ಸ್ಟಾಗ್ರಾಮ್ ಶ್ರಮಿಸುವುದಾಗಿ ತಿಳಿಸಿದೆ.

Best Mobiles in India

Read more about:
English summary
Instagram has just added two new features to help keep the platform a safe place for self-expression.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X