Home
Apps

ಇನ್‌ಸ್ಟಾಗ್ರಾಂಗೆ ಸೇರುತ್ತಿದೆ 6 ಹೊಸ ಸೂಪರ್ ಝೂಮ್ ಎಫೆಕ್ಟ್‌ಗಳು..!

By Gizbot Bureau

ಇನ್ಸ್ಟಾಗ್ರಾಂ ತನ್ನ ಸ್ಟೋರೀಸ್ ಗೆ 6 ಹೊಸ ಸೂಪರ್ ಝೂಮ್ ಎಫೆಕ್ಟ್ ಗಳನ್ನು ಸೇರಿಸುತ್ತಿದೆ. ಇದು ಬಳಕೆದಾರರಿಗೆ ಝೂಮ್ ಮಾಡುವುದಕ್ಕೆ ಮತ್ತು ಎಫೆಕ್ಟ್ ಗಳನ್ನು ಸೇರಿಸಿ ಮತ್ತು ಮ್ಯೂಸಿಕ್ ಟ್ರ್ಯಾಕ್ ಗಳನ್ನು ಸೇರಿಸಿ ಯಾವುದೇ ಸನ್ನಿವೇಶವನ್ನು ಕ್ಯಾಪ್ಚರ್ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ.

ಇನ್ಸ್ಟಾಗ್ರಾಂ ತನ್ನ ಹೊಸ ಅಪ್ ಡೇಟ್ ಆಪ್ ನ್ನು ಬಿಡುಗಡೆಗೊಳಿಸಿದೆ (#63.0.0.0.26). ಇನ್ಸ್ಟಾಗ್ರಾಂ ತನ್ನ ಮೂರು ಸೆಕೆಂಡ್ ಗಳ ವೀಡಿಯೋ ಬಿಡುಗಡೆಗೊಳಿಸಿದ್ದು ಅದರಲ್ಲಿ ಸೂಪರ್ ಝೂಮ್ ನ 10 ಎಫೆಕ್ಟ್ ಗಳನ್ನು ಬಳಸಲಾಗಿದೆ. ಅದರಲ್ಲಿ ನಾವು ಈಗಾಗಲೇ ಡ್ರಾಮಾಟಿಕ್, ಬೌನ್ಸ್, ಬೀಟ್ಸ್ ಮತ್ತು ಟಿವಿ ಶೋ ಗಳನ್ನು ನೋಡಬಹುದಾಗಿದೆ.

ಇನ್‌ಸ್ಟಾಗ್ರಾಂಗೆ ಸೇರುತ್ತಿದೆ 6 ಹೊಸ ಸೂಪರ್ ಝೂಮ್ ಎಫೆಕ್ಟ್‌ಗಳು..!

ಆದರೆ ಈಗ ಹೊಸದಾಗಿ ಹಾರ್ಟ್ಸ್, ಪಾಪರಾಜ್ಜಿ, ಫೈಯರ್ ( ಮೆಟಲ್ ಮ್ಯೂಸಿಕ್ ಮತ್ತು ಫ್ಲೇಮ್ಸ್), ನೋಪೆ, ಬಮ್ಮರ್ (ಶೀತ ಮತ್ತು ಮೇಪಲ್ ಎಲೆಗಳು) ಮತ್ತು ಸಪ್ರೈಸ್ (ಕಾರ್ಟೂನ್ ಸ್ಟ್ರಿಪ್ ನಂತೆ ನಿಮ್ಮ ಫ್ರೇಮ್ ಟರ್ನ್ ಮಾಡುವುದಕ್ಕೆ ಇದು ಅವಕಾಶ ನೀಡುತ್ತದೆ. ಕೆಲವು ಪ್ರಮುಖ ಎಫೆಕ್ಟ್ ಗಳನ್ನು ಈ ಕೆಳಗೆ ನೀವು ಗಮನಿಸಬಹುದು.

ಮುಂದಿನ ದಿನಗಳಲ್ಲಿ ಬಳಸಲು ಇಚ್ಛಿಸುತ್ತಿರುವ ಫೈಯರ್ ಸೂಪರ್ ಝೂಮ್ ಎಫೆಕ್ಟ್ ನ ಜಿಐಎಫ್ ಇಲ್ಲಿದೆ ನೋಡಿ. ಇದರ ಜೊತೆಗೆ ಇನ್ಸ್ಟಾಗ್ರಾಂ ಪರ್ಸನಲೈಸ್ಡ್ ಎಮೋಜಿ ಶಾರ್ಟ್ ಕಟ್ ಗಳನ್ನು ಕಮೆಂಟ್ ಸೆಕ್ಷನ್ ನಲ್ಲಿ ಬಿಡುಗಡಗೊಳಿಸಿದೆ. ಇದು ಬಳಕೆದಾರರಿಗೆ ಹೆಚ್ಚು ಫ್ರೀಕ್ವೆಂಟ್ ಆಗಿ ಬಳಕೆ ಮಾಡುವ ಎಮೋಜಿಗಳಿಗೆ ಆಕ್ಸಿಸ್ ನ್ನು ನೀಡುತ್ತದೆ. ಇದು ಕಮೆಂಟ್ ಟೆಕ್ಸ್ಟ್ ಬಾಕ್ಸ್ ನ ಮೇಲ್ಬಾಗದ ಬಾರ್ ನಲ್ಲಿ ಇರುತ್ತದೆ. ಕಮೆಂಟ್ ಗಳ ಜೊತೆ ಕ್ಯೂಟ್ ಫೇಸ್ ಗಳನ್ನು, ಹಾರ್ಟ್ ಗಳನ್ನು ಅಥವಾ ಇನ್ನಿತರೆ ಸ್ಪೆಷಲ್ ಎಮೋಜಿಗಳನ್ನು ಹಾಕುವುದಕ್ಕೆ ಅವಕಾಶ ನೀಡುತ್ತದೆ.

ಇನ್‌ಸ್ಟಾಗ್ರಾಂಗೆ ಸೇರುತ್ತಿದೆ 6 ಹೊಸ ಸೂಪರ್ ಝೂಮ್ ಎಫೆಕ್ಟ್‌ಗಳು..!

ಎಮೋಜಿಗಳನ್ನು ಟ್ಯಾಪ್ ಮಾಡುವುದರಿಂದಾಗಿ ಸ್ವಯಂಚಾಲಿತವಾಗಿ ಕಮೆಂಟ್ ಆಗಿ ಪೋಸ್ಟ್ ಆಗುವುದಿಲ್ಲ.ಇದು ಕಮೆಂಟ್ ಬಾಕ್ಸ್ ನಲ್ಲಿ ಆಡ್ ಆಗುತ್ತದೆ. ಹಾಗಾಗಿ ನೀವು ರ್ಯಾಂಡಮ್ ರಿಪ್ಲೈಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

ಈ ಎಮೋಜಿ ಕಮೆಂಟ್ ಬಾರ್ ಕಳೆದ ಕೆಲವು ವಾರಗಳಿಂದ ಟೆಸ್ಟಿಂಗ್ ಪ್ರೊಸೆಸ್ ನಲ್ಲಿತ್ತು. ಈಗ ಅಂತಿಮವಾಗಿ ಎಲ್ಲರಿಗೂ ಲಭ್ಯವಾಗುತ್ತಿದೆ.ಇದು ಕೇವಲ ಫೀಡ್ ಗಳಲ್ಲಿ ಮಾತ್ರ ಲಭ್ಯವಿದೆ. ಸ್ಟೋರೀಸ್ ಗಳಲ್ಲಿ ಲಭ್ಯವಿಲ್ಲ( ಇದರಲ್ಲಿ ಈಗಾಗಲೇ ಎಮೋಜಿ ರಿಯಾಕ್ಷನ್ ಅಥವಾ ಡಿಎಮ್ ರಿಪ್ಲೈಗಳು ಲಭ್ಯವಿದೆ.

ಈ ಎರಡೂ ವೈಶಿಷ್ಟ್ಯತೆಗಳು ಮೆಮೊಗಳನ್ನು ಇಷ್ಟಪಡುವವರಿಗೆ ಹೆಚ್ಚು ಖುಷಿ ಕೊಡುತ್ತದೆ. ಇನ್ಸ್ಟಾಗ್ರಾಂ ನ ಸ್ಟೋರಿಗಳು ಈಗಾಗಲೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ಖಂಡಿತ ನಗೆಯನ್ನು ಹೆಚ್ಚಿಸುವ ಸಾಮರ್ಥ್ಯವುಳ್ಳ ವೈಶಿಷ್ಟ್ಯವಾಗಿದ್ದು ಇನ್ಸ್ಟಾಗ್ರಾಂ ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತದೆ. ನಿಮಗೂ ಈ ಸೂಪರ್ ಝೂಮ್ ಎಫೆಕ್ಟ್ ಇಷ್ಟವಾಗಿದ್ಯಾ? ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Best Mobiles in India

English summary
Instagram Adds Six New Superzoom Effects; Emoji Bar in Comments. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+