ಇನ್ಸ್ಟಾಗ್ರಾಂನಲ್ಲಿ ಸಮಯ ಉಳಿತಾಯ ಮಾಡುವ ಮತ್ತೊಂದು ಫೀಚರ್
ಫೇಸ್ ಬುಕ್ ಮಾಲೀಕತ್ವದ ಇನ್ಸ್ಟಾಗ್ರಾಂ ಇದೀಗ ಮಲ್ಟಿಪಲ್ ಅಕೌಂಟ್ ನಿಂದ ಒಂದೇ ಸಮಯಕ್ಕೆ ಪೋಸ್ಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಟೆಕ್ ಕ್ರಂಚ್ ಇದನ್ನು ವರದಿ ಮಾಡಿದ್ದು ಇನ್ನು ಮುಂದೆ ಇನ್ಸ್ಟಾಗ್ರಾಂ ಬಳಕೆದಾರರು ಒಂದೇ ಕಂಟೆಂಟ್ ನ್ನು ಒಂದೇ ಸಮಯಕ್ಕೆ ತಮ್ಮೆಲ್ಲಾ ಫೀಡ್ ನಲ್ಲಿ ಪೋಸ್ಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಸದ್ಯ ಈ ಫೀಚರ್ ಐಓಎಸ್ ನಲ್ಲಿ ಮಾತ್ರವೇ ಲಭ್ಯವಿದೆ. ಆಂಡ್ರಾಯ್ಡ್ ನಲ್ಲಿ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ.

ಹಿಂದೆ ಹೇಗಿತ್ತು?
ಈ ಹಿಂದೆ ಬಳಕೆದಾರರು ವಿಭಿನ್ನ ಅಕೌಂಟ್ ಗಳಿಂದ ಪೋಸ್ಟ್ ಮಾಡಲು ಇಚ್ಛಿಸಿದಾಗ ಥರ್ಡ್ ಪಾರ್ಟಿ ಆಪ್ ಗಳ ಮೊರೆ ಹೋಗಬೇಕಿತ್ತು ಅಥವಾ ಮಾನ್ಯುವಲ್ ಆಗಿ ಒಂದಾದ ಮೇಲೆ ಒಂದರಲ್ಲಿ ಕಂಟೆಂಟ್ ಗಳನ್ನು ಪೋಸ್ಟ್ ಮಾಡಬೇಕಿತ್ತು. ಆದರೆ ಇದೀಗ ಹೊಸ ಫೀಚರ್ ಲಭ್ಯವಿರುವುದರಿಂದಾಗಿ ಈ ಕೆಲಸವನ್ನು ಸರಳಗೊಳಿಸಿದ್ದು ಮಲ್ಟಿಪಲ್ ಅಕೌಂಟ್ ಗಳನ್ನು ನಿಭಾಯಿಸುವುದಕ್ಕೆ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.

ಸಮಯದ ಉಳಿತಾಯ:
ಪೋಸ್ಟ್ ಮಾಡುವ ಸಂದರ್ಬದಲ್ಲಿ ಬಳಕೆದಾರರಿಗೆ self-regram' ಅನ್ನೋ ಆಯ್ಕೆಯೊಂದು ಕಾಣುತ್ತದೆ. ಈ ಆಯ್ಕೆಯು ಬಳಕೆದಾರರು ಹೊಸ ಪೋಸ್ಟ್ ನ್ನು ಹಾಕುವ ಸಂದರ್ಬದಲ್ಲಿ ಮಾತ್ರವೇ ಕಾಣಿಸುತ್ತದೆ. ಈ ಹೊಸ ಫೀಚರ್ ಖಂಡಿತ ಸಮಯವನ್ನು ಬಳಕೆದಾರರಿಗೆ ಉಳಿಸುತ್ತದೆ.ಈ ಫ್ಲ್ಯಾಟ್ ಫಾರ್ಮ್ ನಲ್ಲಿ ಯಾರು ಮಲ್ಟಿಪಲ್ ಬ್ಯುಸಿನೆಸ್ ಅಕೌಂಟ್ ನ್ನು ಹೊಂದಿದ್ದಾರೋ ಖಂಡಿತ ಅವರಿಗೆ ಅನುಕೂಲಕರವಾಗಿರುವ ಫೀಚರ್ ಇದಾಗಿದೆ.

ದೃಷ್ಟಿಹೀನರಿಗಾಗಿ ಫೀಚರ್ :
ಕಳೆದ ವರ್ಷ ಇನ್ಸ್ಟಾಗ್ರಾಂ ದೃಷ್ಟಿಹೀನತೆ ಹೊಂದಿರುವ ಬಳಕೆದಾರರಿಗೆ ಹೊಸ ಫೀಚರ್ ನ್ನು ಪರಿಚಯಿಸಿತ್ತು. ಆಲ್ಟರ್ ನೇಟಿವ್ ಟೆಕ್ಸ್ಟ್ ಮತ್ತು ಕಸ್ಟಮ್ ಆಲ್ಟರ್ ನೇಟಿವ್ ಟೆಕ್ಸ್ಟ್ ಫೀಚರ್ ಗಳನ್ನು ಪರಿಚಯಿಸಿತ್ತು.

285 ಮಿಲಿಯನ್ ದೃಷ್ಟಿಹೀನರಿಗೆ ಅನುಕೂಲ:
ಈ ಫೀಚರ್ ದೃಷ್ಟಿಹೀನತೆ ಇರುವವರು ಫೋಟೋದಲ್ಲೇನಿದೆ ಎಂಬುದನ್ನು ಕೇಳಿಸಿಕೊಳ್ಳುವುದಕ್ಕೆ ಅವಕಾಶ ಮಾಡುತ್ತಿತ್ತು. ಅಧಿಕೃತ ಬ್ಲಾಗ್ ಪೋಸ್ಟ್ ನಲ್ಲಿ ಕಂಪೆನಿಯು ವಿಶ್ವದಾದ್ಯಂತ ಇರುವ ಸುಮಾರು 285 ಮಿಲಿಯನ್ ಗೂ ಅಧಿಕ ದೃಷ್ಟಿಹೀನ ಬಳಕೆದಾರರು ಇದರಿಂದ ಉಪಯೋಗ ಪಡೆಯಲಿದ್ದು ಇನ್ಸ್ಟಾಗ್ರಾಂ ಬಳಸಬಹುದಾಗಿದೆ ಎಂದು ತಿಳಿಸಿತ್ತು.

ಎರಡೂ ಫಾರ್ಮೆಟ್ ನಲ್ಲೂ ಲಭ್ಯ:
ಅಟೋಮ್ಯಾಟಿಕ್ ಆಲ್ಟರ್ ನೇಟಿವ್ ಟೆಕ್ಸ್ಟ್ ಫೀಚರ್ ಇನ್ಸ್ಟಾಗ್ರಾಂನಲ್ಲಿರುವ ಫೋಟೋದ ವಿವರಣೆಯನ್ನು ಕೇಳಿಸಿಕೊಳ್ಳುವಂತೆ ಮಾಡುತ್ತಿತ್ತು. ಇದು ನ್ಯೂಸ್ ಫೀಡ್, ಎಕ್ಸ್ ಫ್ಲೋರ್, ಪ್ರೊಫೈಲ್ ಸೆಕ್ಷನ್ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಿದೆ.


Click it and Unblock the Notifications