Just In
- 16 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 45 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯಪಡೆ ಯುದ್ಧ ವಿಮಾನಗಳ ಡಿಕ್ಕಿ, ಪತನ
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇನ್ಸ್ಟಾಗ್ರಾಂ ಮತ್ತು ವಾಟ್ಸ್ ಆಪ್ ಗೆ “ಹೊಸ ಹೆಸರುಗಳು” ಸೇರ್ಪಡೆ- ಯಾಕೆ ಗೊತ್ತಾ?
ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಜಾಲತಾಣವಾಗಿರುವ ಫೇಸ್ ಬುಕ್ ತನ್ನ ಹೆಸರನ್ನು ವಾಟ್ಸ್ ಆಪ್ ಮತ್ತು ಇನ್ಸ್ಟಾಗ್ರಾಂ ಎರಡರಲ್ಲೂ ಸೇರಿಸುವ ಬಗ್ಗೆ ತಿಳಿಸಿತ್ತು ಮತ್ತು ಇದೀಗ ನೂತನವಾದ ವಾಟ್ಸ್ ಆಪ್ ನ ಬೇಟಾ ವರ್ಷನ್ ನಲ್ಲಿ ಇದು ಕಾಣಿಸುವುದಕ್ಕೆ ಪ್ರಾರಂಭವಾಗಿದೆ.

ಎಲ್ಲಿ ಕಾಣಿಸುತ್ತದೆ ಹೊಸ ಟ್ಯಾಗ್:
ವಾಟ್ಸ್ ಆಪ್ ನೂತನ ಬೇಟಾ ವರ್ಷನ್ ನ ಸೆಟ್ಟಿಂಗ್ಸ್ ಪೇಜಿನ ಕೆಳಭಾಗದಲ್ಲಿ ರೀಬ್ರ್ಯಾಂಡಿಂಗ್ ಟ್ಯಾಗ್ ಕಾಣಿಸುವುದಕ್ಕೆ ಪ್ರಾರಂಭವಾಗಿದೆ. ನಾವಿದನ್ನು ವಾಟ್ಸ್ ಆಪ್ ವರ್ಷನ್ 2.19.228 ನಲ್ಲಿ ಗಮನಿಸಿದ್ದೇವೆ.
ಈ ಹೆಜ್ಜೆಯ ಬಗ್ಗೆ ಫೇಸ್ ಬುಕ್ ಪ್ರಕಟ ಪಡಿಸಿದಾಗ ಕಂಪೆನಿಯ ವಕ್ತಾರರು " ನಾವು ಫೇಸ್ ಬುಕ್ ನ ಭಾಗವಾಗಿರುವ ನಮ್ಮ ಪ್ರೊಡಕ್ಟ್ ಮತ್ತು ಸೇವೆಗಳ ಬಗ್ಗೆ ಸಂಪೂರ್ಣ ವಿವರ ನೀಡಲು ಬಯಸುತ್ತೇವೆ" ಎಂದು ತಿಳಿಸಿದ್ದರು.

ಇನ್ಸ್ಟಾಗ್ರಾಂನಲ್ಲೂ ಲಭ್ಯ:
ಫೋಟೋ ಶೇರಿಂಗ್ ಆಪ್ ಇನ್ಸ್ಟಾಗ್ರಾಂನಲ್ಲೂ ಕೂಡ " ಇನ್ಸ್ಟಾಗ್ರಾಂ ಫ್ರಮ್ ಫೇಸ್ ಬುಕ್" ಎಂಬ ಟ್ಯಾಗ್ ಸೆಟ್ಟಿಂಗ್ಸ್ ಪೇಜಿನ ಕೆಳಭಾಗದಲ್ಲಿ ಗಮನಿಸಬಹುದಾಗಿದೆ. ಇದು ಆಪ್ ನ ವರ್ಷನ್ 106.0.0.24.118 ನಲ್ಲಿ ಗಮನಿಸಬಹುದು.

ವಾಟ್ಸ್ ಆಪ್, ಇನ್ಸ್ಟಾಗ್ರಾಂ ಪ್ರಾರಂಭವಾದದ್ದು ಯಾವಾಗ?
ನಿಮಗೆ ಪುನಃ ನೆನಪಿಸುವುದಾದರೆ ಫೇಸ್ ಬುಕ್ ಇನ್ಸ್ಟಾಗ್ರಾಂನ್ನು 2012 ರಲ್ಲಿ ಮತ್ತು ವಾಟ್ಸ್ ಆಪ್ ನ್ನು 2014 ರಲ್ಲಿ ಪರಿಚಯಿಸಿತು. ಎರಡೂ ಫ್ಲ್ಯಾಟ್ ಫಾರ್ಮ್ ಗಳಲ್ಲೂ ಕೂಡ ಜಗತ್ತಿನಾದ್ಯಂತ ಅಂದಾಜು ಬಿಲಿಯನ್ ಬಳಕೆದಾರರಿದ್ದಾರೆ.

ಫಿಂಗರ್ ಪ್ರಿಂಟ್ ಲಾಕ್ ಫೀಚರ್:
ಇತ್ತೀಚೆಗೆ ವಾಟ್ಸ್ ಆಪ್ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ನ್ನು ಆಪ್ ಬೇಟಾ ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದೆ ಮತ್ತು ತನ್ನೆಲ್ಲಾ ಬಳಕೆದಾರರಿಗೆ ಕೆಲವೇ ದಿನಗಳಲ್ಲಿ ಈ ವೈಶಿಷ್ಟ್ಯತೆಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.ಐಫೋನ್ ನಲ್ಲಿ ಲಭ್ಯವಾದ ಏಳು ತಿಂಗಳ ನಂತರ ಇದೀಗ ಈ ಫೀಚರ್ ನ್ನು ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯಗೊಳಿಸುವ ಪ್ರಯತ್ನ ನಡೆದಿದೆ.ಈ ಫೀಚರ್ ಬಳಸಿ ವಾಟ್ಸ್ ಆಪ್ ಗೆ ಆಂಡ್ರಾಯ್ಡ್ ಬಳಕೆದಾರರು ಕೂಡ ಮತ್ತೊಂದು ಹಂತದ ಬಯೋಮೆಟ್ರಿಕ್ ದೃಢೀಕರಣವನ್ನು ಸೇರಿಸಿ ತಮ್ಮ ವಾಟ್ಸ್ ಆಪ್ ಚಾಟ್ ಗಳಿಗೆ ಭದ್ರತೆ ಒದಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ವಾಟ್ಸ್ ಆಪ್ ನ ಸೆಟ್ಟಿಂಗ್ಸ್ ವಿಭಾಗದಲ್ಲಿ ಈ ಫೀಚರ್ ನ್ನು ಅನೇಬಲ್ ಮಾಡಿಕೊಳ್ಳುವುದಕ್ಕೆ ವಾಟ್ಸ್ ಆಪ್ ಬಳಕೆದಾರರಿಗೆ ಅವಕಾಶವಿರುತ್ತದೆ.ಅಲ್ಲಿಂದ ಅಕೌಂಟ್ ಸೆಕ್ಷನ್ ಗೆ ಸ್ಕ್ರೋಲ್ ಡೌನ್ ಮಾಡಬೇಕು ಮತ್ತು ಪ್ರೈವೆಸಿಗೆ ತೆರಳಿ ಸೆಟ್ಟಿಂಗ್ಸ್ ಮಾಡಬೇಕು. ಹೊಸ ಆಯ್ಕೆಯಾಗಿರುವ ಫಿಂಗರ್ ಪ್ರಿಂಟ್ ಲಾಕ್ ನಿಮಗಲ್ಲಿ ಲಭ್ಯವಾಗುತ್ತದೆ.

ನೋಟಿಫಿಕೇಷನ್ ನಲ್ಲೇ ಉತ್ತರಿಸಲು ಅವಕಾಶ:
ಫಿಂಗರ್ ಪ್ರಿಂಟ್ ಲಾಕ್ ಫೀಚರ್ ಅನೇಬಲ್ ಮಾಡಿದ ನಂತರ ಕೂಡ ಆಂಡ್ರಾಯ್ಡ್ ಬಳಕೆದಾರರು ವಾಟ್ಸ್ ಆಪ್ ಕರೆಗಳಿಗೆ ಉತ್ತರಿಸುವುದಕ್ಕೆ ಮತ್ತು ನೋಟಿಫಿಕೇಷನ್ ನಲ್ಲೇ ಮೆಸೇಜ್ ಗಳಿಗೆ ರಿಪ್ಲೈ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಇನ್ಸೆಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಬಗ್ಗೆ ಎಲ್ಲಾ ಮಾಹಿತಿಗಳನ್ನು ಟ್ರ್ಯಾಕ್ ಮಾಡುವ ಆನ್ ಲೈನ್ ಫ್ಲ್ಯಾಟ್ ಫಾರ್ಮ್ ವಾಬೇಟಾಇನ್ಫೋ ಮಾಹಿತಿ ನೀಡಿದೆ.ಈ ಫಿಂಗರ್ ಪ್ರಿಂಟ್ ದೃಢೀಕರಣವು ಯಾವಾಗ ನೀವು ವಾಟ್ಸ್ ಆಪ್ ತೆರೆಯಬೇಕು ಎಂದು ಬಯಸುತ್ತೀರೋ ಆಗ ಮಾತ್ರ ಬಳಕೆಗೆ ಬರುತ್ತದೆ. ಈ ಫೀಚರ್ ನಲ್ಲಿ ಮೂರು ಆಟೋಮ್ಯಾಟಿಕ್ ಲಾಕ್ ಕಾನ್ಫಿಗರೇಷನ್ ಮಾಡುವುದಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಅವಕಾಶವಿರುತ್ತದೆ.ಅವುಗಳೆಂದರೆ ‘immediately' ಅಂದರೆ " ತತ್ ಕ್ಷಣ", ‘after 1 minute' ಅಂದರೆ "ಒಂದು ನಿಮಿಷದ ನಂತರ" ಮತ್ತು ‘after 30 minutes' ಅಂದರೆ "ಮೂವತ್ತು ನಿಮಿಷದ ನಂತರ". ನಿಮ್ಮ ಇಚ್ಛೆಗೆ ಅನುಸಾರವಾಗಿ ಸೆಟ್ ಮಾಡಿಕೊಳ್ಳಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470