ಬದಲಾಗಲಿದೆ ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಹೆಸರು..! ಏನಂತ ಗೊತ್ತಾ..?

|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್, ಈ ವಾರ ತನ್ನ ಫೋಟೋ ಶೇರಿಂಗ್‌ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಂನ ಕೆಲವು ಕಡೆ ತನ್ನ ಹೆಸರನ್ನು ಪ್ರದರ್ಶಿಸಲು ಪ್ರಾರಂಭಿಸಿದೆ. ಈ ಮೂಲಕ ಅಧಿಕೃತವಾಗಿ ತನ್ನ ಇತರ ಪ್ಲಾಟ್‌ಫಾರ್ಮ್‌ಗಳಿಗೂ ಫೇಸ್‌ಬುಕ್‌ ಪ್ರವೇಶ ಮಾಡಲಿದೆ. ಇದು ಜನಪ್ರಿಯ ಪ್ಲಾಟ್‌ಫಾರ್ಮ್‌ ಮಾಲೀಕತ್ವದ ಬಗ್ಗೆ ಬಳಕೆದಾರರಿಗೆ ನೀಡಿದ ಮೊದಲ ಲಿಂಕ್‌ ಆಗಿದೆ.

ಬದಲಾಗಲಿದೆ ಇನ್‌ಸ್ಟಾಗ್ರಾಂ, ವಾಟ್ಸ್‌ಆಪ್‌ ಹೆಸರು..! ಏನಂತ ಗೊತ್ತಾ..?

ಫೇಸ್‌ಬುಕ್‌ ಡೇಟಾ ಗೌಪ್ಯತೆ ನಿಯಮಗಳ ಬಗ್ಗೆ ಜಾಗತಿಕವಾಗಿ ನಿಯಂತ್ರಕರಿಂದ ಹೆಚ್ಚಿನ ಪರಿಶೀಲನೆಗೆ ಒಳಪಡುತ್ತಿದ್ದು, ಹೆಚ್ಚು ಪಾರದರ್ಶಕತೆಗೆ ಕಂಪನಿ ತೆರೆದುಕೊಂಡಿದೆ. ಮತ್ತು ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ ಹೇಗೆ ಮತ್ತು ಯಾರೊಂದಿಗೆ ಹಂಚಿಕೊಳ್ಳುತ್ತದೆ ಎಂಬುದರ ಕುರಿತು ಕೂಡ ಪರಿಶೀಲನೆಯಾಗುತ್ತಿದೆ.

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್

ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರಿಗೆ ತಕ್ಷಣವೇ ಫೇಸ್‌ಬುಕ್‌ ಗೋಚರಿಸದಿದ್ದರೂ, ಕೆಲವು ಐಒಎಸ್ ಸಾಧನಗಳಲ್ಲಿರುವ ಇನ್‌ಸ್ಟಾಗ್ರಾಮ್ ಆಪ್‌ನ ಸೆಟ್ಟಿಂಗ್ಸ್ ಪುಟದ ಕೆಳಭಾಗದಲ್ಲಿ "ಫೇಸ್‌ಬುಕ್‌ನಿಂದ ಇನ್‌ಸ್ಟಾಗ್ರಾಮ್" ಎಂಬುದನ್ನು ಕಾಣಬಹುದಾಗಿದೆ. ಫೇಸ್‌ಬುಕ್‌ನ ಭಾಗವಾಗಿರುವ ಉತ್ಪನ್ನ ಮತ್ತು ಸೇವೆಗಳ ಬಗ್ಗೆ ನಾವು ಸ್ಪಷ್ಟವಾಗಿರಲು ಬಯಸುತ್ತೇವೆ ಎಂದು ಕಂಪನಿಯ ವಕ್ತಾರ ಹೇಳಿದ್ದಾರೆ.

ಅಮೆರಿಕ ನಾಯಕರ ಒತ್ತಡ

ಅಮೆರಿಕ ನಾಯಕರ ಒತ್ತಡ

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಎಲಿಜಬೆತ್ ವಾರೆನ್ ಸೇರಿ ಅಮೆರಿಕದ ಕೆಲ ನಾಯಕರು ಫೇಸ್‌ಬುಕ್, ಅಮೆಜಾನ್ ಮತ್ತು ಗೂಗಲ್‌ನ್ನು ವಿಭಜಿಸಲು ಕ್ರಮ ಕೈಗೊಂಡಿದ್ದಾರೆ. ಫೇಸ್‌ಬುಕ್‌ನ ಸಹ ಸಂಸ್ಥಾಪಕ ಕ್ರಿಸ್ ಹ್ಯೂಸ್ ಮೇ ತಿಂಗಳಲ್ಲಿ ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಯುಎಸ್ ಸರ್ಕಾರ ಕಂಪನಿಯನ್ನು ಮೂರರಲ್ಲಿ ವಿಭಜಿಸುವಂತೆ ಒತ್ತಾಯಿಸಿದೆ ಎಂದು ಹೇಳಿದ್ದಾರೆ.

ವಾಟ್ಸ್‌ಆಪ್‌ನಲ್ಲಿಯೂ ಬರಲಿದೆ

ವಾಟ್ಸ್‌ಆಪ್‌ನಲ್ಲಿಯೂ ಬರಲಿದೆ

ಇನ್ನು, ವಾಟ್ಸ್‌ಆಪ್‌ನಲ್ಲಿಯೂ ಕೂಡ ಫೇಸ್‌ಬುಕ್ ತನ್ನ ಹೆಸರನ್ನು ಬಳಸಲಿದೆ ಎಂಬುದು ಕೂಡ ವರದಿಯಾಗಿದೆ. 2012ರಲ್ಲಿ ಇನ್‌ಸ್ಟಾಗ್ರಾಮ್ ಹಾಗೂ 2014ರಲ್ಲಿ ವಾಟ್ಸ್‌ಆಪ್‌ನ್ನು ಫೇಸ್‌ಬುಕ್‌ ಖರೀದಿಸಿತ್ತು. ಸದ್ಯ ಎರಡು ಆಪ್‌ಗಳನ್ನು ಒಂದು ಬಿಲಿಯನ್‌ಗಿಂತಲೂ ಹೆಚ್ಚಿನ ಜನ ಬಳಸುತ್ತಿದ್ದಾರೆ.

ಆದಾಯದ ಮೂಲ ಇನ್‌ಸ್ಟಾಗ್ರಾಂ

ಆದಾಯದ ಮೂಲ ಇನ್‌ಸ್ಟಾಗ್ರಾಂ

ಫೇಸ್‌ಬುಕ್‌ನ ಗೌಪ್ಯತೆ ಹಗರಣಗಳಿಂದ ದೂರವಿರುವ ಇನ್‌ಸ್ಟಾಗ್ರಾಂ ಕಂಪನಿಗೆ ಆದಾಯ ತರುವಲ್ಲಿ ಪ್ರಮುಖವಾಗಿದೆ. ಇನ್‌ಸ್ಟಾಗ್ರಾಂ ಯುವ ಬಳಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಜಾಹೀರಾತುದಾರರನ್ನು ತನ್ನತ್ತ ಸೆಳೆಯುತ್ತಿದೆ. ಬಳಕೆದಾರರ ಗೌಪ್ಯತೆ ರಕ್ಷಿಸಲು ತರುತ್ತಿರುವ ಹೊಸ ನಿಯಮಗಳು ಮತ್ತು ಬದಲಾವಣೆಗಳು ಮುಂದಿನ ವರ್ಷದಲ್ಲಿ ಆದಾಯದ ಪ್ರಗತಿ ಮೇಲೆ ಪರಿಣಾಮ ಬೀರುತ್ತೆ ಎಂದು ಫೇಸ್‌ಬುಕ್ ಜುಲೈನಲ್ಲಿ ಹೇಳಿದೆ.

ಫೇಸ್‌ಬುಕ್‌ ಮೇಲೆ ತನಿಖೆ

ಫೇಸ್‌ಬುಕ್‌ ಮೇಲೆ ತನಿಖೆ

ಡೇಟಾ ಗೌಪ್ಯತೆ ಪ್ರಕರಣದಲ್ಲಿ ಫೇಸ್‌ಬುಕ್‌ ಸಾಕಷ್ಟು ತನಿಖೆಗೆ ಒಳಗಾಗಿದೆ. ಇನ್ನು, ಡೇಟಾ ಗೌಪ್ಯತೆ ಪ್ರಕರಣ ಇತ್ಯರ್ಥಕ್ಕಾಗಿ ಯುಎಸ್ ಫೆಡರಲ್ ಟ್ರೇಡ್ ಕಮಿಷನ್‌ಗೆ 5 ಬಿಲಿಯನ್ ಡಾಲರ್‌ ಪಾವತಿಸಲು ಫೇಸ್‌ಬುಕ್‌ ಒಪ್ಪಿಕೊಂಡಿದೆ. ಇದರ ಜೊತೆ ಸ್ಪರ್ಧಾತ್ಮಕ ವಿರೋಧಿ ವರ್ತನೆಗಾಗಿ ಎಫ್‌ಟಿಸಿ ಕೂಡ ಫೇಸ್‌ಬುಕ್‌ ವಿರುದ್ಧ ತನಿಖೆ ನಡೆಸುತ್ತಿದೆ.

Best Mobiles in India

English summary
Instagram And WhatsApp To Soon Get 'Facebook' Branding To Their Names

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X