Home
Apps

ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮೇಲ್: ಕಾಲೇಜು ಹುಡುಗನಿಂದ 6.4 ಲಕ್ಷ ದೋಚಿದ ಮೋಸದ ಗೆಳತಿ

By Gizbot Bureau

ಅಂತರ್ಜಾಲದಲ್ಲಿ 21 ವರ್ಷದ ಹುಡುಗನೊಬ್ಬ 7 ವರ್ಷದ ಕಾಲೇಜು ಹುಡುಗನನ್ನು ಟ್ರ್ಯಾಪ್ ಮಾಡಿ,ಆತನ ಬೆತ್ತಲೆ ಫೋಟೋವನ್ನು ಅಂತರ್ಜಾಲದಲ್ಲಿ ಹರಿಯಬಿಡುತ್ತೇನೆ ಎಂದು ಹೆದರಿಸಿ 6.4 ಲಕ್ಷ ಮತ್ತು ಆಭರಣಗಳನ್ನು ದೋಚಿರುವ ಘಟನೆ ನಡೆದಿದೆ.

ಮೋಸದ ಗೆಳತಿಯ ಜಾಲದಲ್ಲಿ ಬಿದ್ದ ಕಾಲೇಜು ಹುಡುಗ ಕದ್ದಿದ್ದು 6.4 ಲಕ್ಷ

ಬ್ಲಾಕ್ ಮೇಲ್ ಮಾಡಿದ ವ್ಯಕ್ತಿ ಸುಮಾರು ಎರಡು ತಿಂಗಳು ಈ ರೀತಿ ನಡೆಸಿಕೊಂಡಿದ್ದ/ಳು. ಬೆಂಗಳೂರಿನ ರಾಜಾಜಿನಗರ ಪೋಲೀಸ್ ಠಾಣೆಯಲ್ಲಿ ಈ ಕುರಿತು ಕೇಸು ದಾಖಲಾಗಿದೆ. ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಮತ್ತು ಇನ್ಸ್ಟಾಗ್ರಾಂ ಮೂಲಕ ಯಾರಾದರೂ ನಿಮಗೆ ಬ್ಲಾಕ್ ಮೇಲ್ ಮಾಡಿದ್ದಲ್ಲಿ ನೀವೇನು ಮಾಡಬೇಕು ಎಂಬ ಬಗ್ಗೆ ನಾವಿಲ್ಲಿ ನಿಮಗೆ ಹೇಳುತ್ತಿದ್ದೇವೆ.

ಬ್ಲಾಕ್ ಮೇಲ್

ಬ್ಲಾಕ್ ಮೇಲ್

ಬ್ಲಾಕ್ ಮೇಲ್ ಮಾಡಿದ ವ್ಯಕ್ತಿ ಕಳೆದ ವರ್ಷ ಹುಡುಗಿಯ ಹೆಸರಿನಲ್ಲಿ ಒಂದು ಫೇಕ್ ಇನ್ಸ್ಟಾಗ್ರಾಂ ಅಕೌಂಟ್ ನ್ನು ಕ್ರಿಯೇಟ್ ಮಾಡಿದ್ದ/ಳು.

ನಂತರ ಆ ಅಪರಿಚಿತ ವ್ಯಕ್ತಿ 17 ವರ್ಷದ ಕಾಲೇಜು ಹುಡುಗನ ಜೊತೆಗೆ ಇನ್ಸ್ಟಾಗ್ರಾಂನಲ್ಲಿ ಸಂಪರ್ಕಕ್ಕೆ ಸಿಗುತ್ತಾನೆ/ಳೆ.

ಕಾಲೇಜು ಹುಡುಗ ಆ ಫೇಕ್ ಅಕೌಂಟಿನ ವ್ಯಕ್ತಿಯನ್ನು ತನ್ನ ಆತ್ಮೀಯ ಗೆಳತಿಯೆಂದು ಭಾವಿಸುತ್ತಾನೆ. ಇನ್ಸ್ಟಾಗ್ರಾಂನಲ್ಲಿ ಚಾಟಿಂಗ್ ಆರಂಭಿಸುತ್ತಾರೆ.

ಕಾಲೇಜ್ ಹುಡುಗನೊಂದಿಗೆ ಸೋ ಕಾಲ್ಡ್ ಗರ್ಲ್ ಫ್ರೆಂಡ್ ಎನ್ನಿಸಿಕೊಂಡಿರುವ ವ್ಯಕ್ತಿ ಇಂಟಿಮೇಟ್ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಪ್ರಾರಂಭಿಸುತ್ತಾಳೆ.

ಇನ್ಸ್ಟಾಗ್ರಾಂ

ಇನ್ಸ್ಟಾಗ್ರಾಂ

ಇನ್ಸ್ಟಾಗ್ರಾಂನ ಗೆಳತಿಯೊಂದಿಗೆ ಕಾಲೇಜು ಹುಡುಗನೂ ಬೆರೆತುಬಿಡುತ್ತಾನೆ ಮತ್ತು ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸುವುದಕ್ಕೆ ಪ್ರಾರಂಬಿಸುತ್ತಾನೆ.

ನಂತರ ಆ ಹುಡುಗಿ ಮತ್ತೊಂದು ಇನ್ಸ್ಟಾಗ್ರಾಂ ಅಕೌಂಟ್ ನ್ನು ಸೃಷ್ಟಿಸಿ ಕಾಲೇಜು ಹುಡುಗನಿಗೆ ಆತನ ಬೆತ್ತಲೆ ಫೋಟೋಗಳನ್ನು ಮತ್ತು ವಯಕ್ತಿಕ ಫೋಟೋಗಳನ್ನು ಅಂತರ್ಜಾಲದಲ್ಲಿ ಹರಿಯಬಿಡುವುದಾಗಿ ಹೆದರಿಸಲು ಪ್ರಾರಂಭಿಸುತ್ತಾಳೆ.

ಆ "ಹುಡುಗಿ" ಫೇಕ್ ಇನ್ಸ್ಟಾಗ್ರಾಂ ಅಕೌಂಟಿನಿಂದ ಆ ಹುಡುಗನ ಬೆತ್ತಲೆ ಫೋಟೋಗಳನ್ನು ಆತನಿಗೆ ಪುನಃ ಕಳುಹಿಸಿ ಕಳೆದ ವರ್ಷದ ಡಿಸೆಂಬರ್ ಪರೀಕ್ಷೆಯ ವೇಳೆಯಲ್ಲಿ ಬ್ಲಾಕ್ ಮೇಲ್ ಮಾಡುವುದಕ್ಕೆ ಪ್ರಾರಂಭಿಸುತ್ತಾಳೆ.

ಕಾಲೇಜು ಹುಡುಗನ ಬಳಿ ಆ ಹುಡುಗಿ 10 ಲಕ್ಷ ಡಿಮಾಂಡ್ ಮಾಡುತ್ತಾಳೆ. ಒಂದು ವೇಳೆ ಹಣ ಕೊಡದೇ ಇದ್ದರೆ ಬೆತ್ತಲೆ ಫೋಟೋಗಳನ್ನು ಅಂತರ್ಜಾಲದಲ್ಲಿ ಹಾಕುವುದಾಗಿ ಬೆದರಿಸುತ್ತಾಳೆ.

ಕಾಲೇಜು ಹುಡುಗ ಕೈಲಾಗದವನಂತಾಗುತ್ತಾನೆ ಮತ್ತು ಹಣ ಕದಿಯಲು ಆರಂಭಿಸುತ್ತಾನೆ ಮತ್ತು ಅಷ್ಟೇ ಅಲ್ಲ ಆ ಹುಡುಗಿಗೆ ಪಾವತಿಸುವುದಕ್ಕೆ ಮುಂದಾಗುತ್ತಾನೆ.

ಬ್ಲಾಕ್ ಮೇಲ್ ಮಾಡಿದ ಹುಡುಗಿ

ಬ್ಲಾಕ್ ಮೇಲ್ ಮಾಡಿದ ಹುಡುಗಿ

ಕಾಲೇಜು ಹುಡುಗ ಒಟ್ಟು 6.4 ಲಕ್ಷ ಕದ್ದಿದ್ದಾನೆ ಮತ್ತು 17 ಬೆಳ್ಳಿಯ ಸಾಮಗ್ರಿಗಳನ್ನು ಮನೆಯಿಂದ ಕದ್ದಿದ್ದಾನೆ ಮತ್ತು ಅದನ್ನು ಆ ಬ್ಲಾಕ್ ಮೇಲ್ ಮಾಡಿದ ಹುಡುಗಿಗೆ ಕೊಟ್ಟಿದ್ದಾನೆ ಎಂದು ಪೋಲೀಸರ ಮಾಹಿತಿ ತಿಳಿಸಿದೆ.

ಮನೆಯಲ್ಲಿ ಕಳ್ಳತನವಾಗುತ್ತಿರುವುದರ ಬಗ್ಗೆ ಮನೆಯ ಮಂದಿ ಆ ಹುಡುಗನನ್ನು ಅನುಮಾನಿಸಲು ಪ್ರಾರಂಭಿಸಿದಾಗ ವಿಷಯ ಪತ್ತೆಯಾಗಿದ ಮತ್ತು ಆತ ತಾನೇ ಕದ್ದಿರುವುದಾಗಿ ಮನೆಯವರ ಬಳಿ ಒಪ್ಪಿಕೊಂಡಿದ್ದಾನೆ.

ಒಂದು ವೇಳೆ ಈ ರೀತಿ ಇನ್ಸ್ಟಾಗ್ರಾಂನಲ್ಲಿ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ಏನು ಮಾಡಬೇಕು?

ಒಂದು ವೇಳೆ ಈ ರೀತಿ ಇನ್ಸ್ಟಾಗ್ರಾಂನಲ್ಲಿ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ಏನು ಮಾಡಬೇಕು?

ಮೊದಲಿಗೆ ವರದಿ ಮಾಡಿ. ಕಾನೂನು ಅಧಿಕಾರಿಗಳಿಗೆ ವಿಷಯ ತಿಳಿಸಿ, ನಿಮ್ಮ ಫೋಟೋ ಮತ್ತು ಕಾಂಟ್ಯಾಕ್ಟ್ಸ್ ನ್ನು ಯಾರೂ ನೋಡಬಾರದು ಎಂಬುದು ನಿಮ್ಮ ಇಚ್ಛೆಯಾಗಿದ್ದರೆ ಕೂಡಲೇ ಅವರನ್ನು ಬ್ಲಾಕ್ ಮಾಡಿ.

ಈ ರೀತಿ ಅನಾಮದೇಯವಾಗಿ ನಿಮ್ಮ ಹೆಸರನ್ನು ಯಾರಾದರೂ ದುರ್ಬಳಕೆ ಮಾಡಿಕೊಂಡರೆ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿ. ಅದಕ್ಕಾಗಿ www.cybercrime.gov.in ಗೆ ತೆರಳಿ.

ಯಾರಾದರೂ ಇಂಟಿಮೇಟ್ ವೀಡಿಯೋ, ಮೆಸೇಜ್ ಅಥವಾ ಫೋಟೋಗಳಿಂದ ನಿಮ್ಮನ್ನ ಬ್ಲಾಕ್ ಮೇಲ್ ಮಾಡಿದರೆ ಏನು ಮಾಡುವುದು?

ನಿಮ್ಮ ವಯಕ್ತಿಕ ಮಾಹಿತಿಗಳು ನಿಮ್ಮದು ಮಾತ್ರ. ಅದನ್ನು ಹಂಚಿಕೊಳ್ಳುವುದು ಮತ್ತು ಅದರಿಂದ ಇನ್ನೊಬ್ಬರಿಗೆ ಬ್ಲಾಕ್ ಮೇಲ್ ಮಾಡುವುದು, ದೋಚುವುದು ಇತ್ಯಾದಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ನಿಮ್ಮ ಅನುಮತಿ ಇಲ್ಲದೇ ಅಂತಹ ವಿಚಾರಗಳನ್ನು ಯಾರೂ ಕೂಡ ಮೂರನೇ ವ್ಯಕ್ತಿಗಳ ಜೊತೆಗೆ ಹಂಚಿಕೊಳ್ಳುವಂತಿಲ್ಲ. ಒಂದು ವೇಳೆ ಇದು ಆಗಿದ್ದರೆ ಖಂಡಿತ ಅದು ನಿಮ್ಮ ಅಪರಾಧವಲ್ಲ. ಇಂತಹ ಸಂದರ್ಬದಲ್ಲಿ ನಿಮ್ಮನ್ನ ನೀವು ರಕ್ಷಿಸಿಕೊಳ್ಳಲು ಮುಂದಾಗಬೇಕು.ಅದಕ್ಕಾಗಿ ಅಸಾಯಕರಾಗಬೇಡಿ. ಅದಕ್ಕಾಗಿ ದೋಚುವ ವ್ಯಕ್ತಿ ನೀಡುವ ಬೇಡಿಕೆಗಳಿಗೆ ಬಗ್ಗಬೇಡಿ.

ನೆನಪಿಡಿ ಬ್ಲಾಕ್ ಮೇಲ್ ಮಾಡುವುದು ಕ್ರಿಮಿನಲ್ ಅಪರಾಧ. ಅಂತರ್ಜಾಲದಲ್ಲಿ ಹಣವನ್ನು ರಫ್ತು ಮಾಡುವಿಕೆಯಲ್ಲಿ ಸುಲಭದಲ್ಲಿ ಟ್ರ್ಯಾಕ್ ಮಾಡಬಹುದು ಮತ್ತು ಮರಳಿ ಪಡೆಯಬಹುದು.

Best Mobiles in India

English summary
Instagram blackmail: College boy steals Rs 6.4 lakh, ornaments to pay ‘female’ friend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+