ಇನ್ ಸ್ಟಾಗ್ರಮ್ ನಲ್ಲಿ ಮಾಡಬೇಕಾದ್ದೇನು.? ಮಾಡಬಾರದೇನು..?
ಇಂದಿನ ದಿನದಲ್ಲಿ ಫೇಸ್ ಬುಕ್ ಮಾಲೀಕತ್ವದ ಇನ್ ಸ್ಟಾಗ್ರಮ್ ಸಾಕಷ್ಟು ಖ್ಯಾತಿಯನ್ನು ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಇನ್ ಸ್ಟಾಗ್ರಮ್ ನಲ್ಲಿ ಮಾಡಬೇಕಾದ್ದೇನು.? ಮಾಡಬಾರದೇನು ಎಂಬುದನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನವು ಇದಾಗಿದೆ. ಇದರಿಂದಾಗಿ ನೀವು ನಿಮ್ಮ ಇನ್ ಸ್ಟಾಗ್ರಮ್ ಖಾತೆಯನ್ನು ಉತ್ತಮವಾಗಿ ನೋಡಿಕೊಳ್ಳಬಹುದಾಗಿದೆ.

ಮಾಡಬೇಕಾದ್ದು:
ಹೆಚ್ಚು ಫೋಸ್ಟ್:
ನೀವು ಇರುವುದನ್ನು ಖಚಿತ ಪಡಿಸಿ ಹೆಚ್ಚಿನ ಜನರನ್ನು ಫಾಲೋ ಮಾಡಲು ನೀವು ಹೆಚ್ಚು ಫೋಸ್ಟ್ ಗಳನ್ನು ಹಾಕುತ್ತಿರಬೇಕಾಗಿದೆ. ಇದರಿಂದಾಗಿ ಹೆಚ್ಚಿನ ಸದ್ದು ಮಾಡುವಿರಿ.

ಬ್ಯಾನ್ ಹ್ಯಾಷ್ ಟ್ಯಾಷ್ ಬೇಡ:
ಇನ್ ಸ್ಟಾಗ್ರಮ್ ಬ್ಯಾನ್ ಮಾಡಿರುವ ಹ್ಯಾಷ್ ಟ್ಯಾಗ್ ಬಳಕೆ ಮಾಡಿಕೊಳ್ಳುವುದು ಬೇಡ, ಇದರಿಂದ ರೀಚ್ ಕಡಿಮೆಯಾಗಲಿದೆ.


ಕ್ರೆಡಿಟ್ ನೀಡಿ:
ಬೇರೆ ಯಾರದ್ದೋ ಫೋಟೋಗಳನ್ನು ಆಪ್ ಲೋಡ್ ಮಾಡುವ ಮುನ್ನ ಅವರಿಗೆ ಕ್ರೆಡಿಟ್ ಕೊಡುವುದನ್ನು ಮರೆಯಬೇಡಿರಿ. ಇದರಿಂದಲೂ ನಿಮ್ಮ ಫಾಲೋ ಸಂಖ್ಯೆ ಜಾಸ್ತಿಯಾಗಲಿದೆ.

ಕ್ರಿಯೇಟ್ ಥಿಮ್:
ನಿಮ್ಮ ಪ್ರೋಫೈಲ್ ಸುಂದರವಾಗಿ ಕಾಣುವಂತೆ ಮಾಡಲು ಥಿಮ್ ಗಳನ್ನು ಕ್ರಿಯೇಟ್ ಮಾಡಿಕೊಳ್ಳಿರಿ. ಇದರಿಂದ ಅಂದವು ಹೆಚ್ಚಾಗಲಿದೆ.

ಮಾಡಬಾರದು:
ಬೇಡಿಕೊಳ್ಳುವುದು:
ಯಾರನ್ನು ಫಾಲೋ ಮಾಡುವಂತೆ ಬೇಡಿಕೊಳ್ಳಬೇಡಿ, ಇದರಿಂದ ನಿಮ್ಮ ಪ್ರೋಫೈಲ್ ಕ್ರೆಡಿಬಲಿಟಿ ಬದಲಾಗಲಿದೆ. ಇದನ್ನು ನೀವು ಮಾಡಬೇಡಿ.

ಯಾವುದೇ ಕಟ್ಟ ಪ್ರಚಾರ ಮಾಡಬೇಡಿ:
ಕಾನೂನಿನ ದೃಷ್ಟಿಯಿಂದ ಸರಿಯಲ್ಲದ ವಿಷಯಗಳು ಇಲ್ಲವೇ ಜಾಹಿರಾತುಗಳನ್ನು ಪ್ರಸಾರ ಮಾಡಲು ಬೇಡಿ. ಇದರಿಂದ ಅಪಾಯ ಹೆಚ್ಚು.

ಕಾಮೆಂಟ್ ಇಗ್ನೋರ್ ಮಾಡಬೇಡಿ:
ಇದಲ್ಲದೇ ನಿಮ್ಮ ಫೋಟೋಗಳಿಗೆ ಬಂದ ಕಾಮೆಂಟ್ ಗಳನ್ನು ಇಗ್ನೋರ್ ಮಾಡಲು ಬೇಡಿ. ಇದರಿಂದ ಸಮಸ್ಯೆಯೂ ಹೆಚ್ಚಾಗಲಿದೆ. ಇಂಟರಾಕ್ಟ್ ಮಾಡಿರೆ ಅಭಿವೃದ್ದಿ ಹೆಚ್ಚು.

ಕೆಟ್ಟ ಫೋಟೋ ಆಪ್ ಲೋಡ್:
ಉತ್ತಮವಲ್ಲದ ಫೋಟೋಗಳನ್ನು ಆಪ್ ಲೋಡ್ ಮಾಡುವುದನ್ನು ಕಡಿಮೆ ಮಾಡಿ. ಇದರಿಂದಲೂ ನೀವು ಫಾಲೋ ಗಳನ್ನು ಕಳೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ ಎನ್ನಲಾಗಿದೆ.


Click it and Unblock the Notifications








