Subscribe to Gizbot

ಇನ್ ಸ್ಟಗ್ರಾಮ್ ಬಳಕೆದಾರರಿಗೆ ಹೊಸ ಆಯ್ಕೆ: ಹ್ಯಾಷ್ ಟ್ಯಾಗ್ ಫಾಲೋ ಮಾಡಿ.!

Written By: Lekhaka

ದಿನೇ ದಿನೇ ಭಾರತದಲ್ಲಿ ಫೇಸ್ ಬುಕ್ ಒಡೆತನಕ್ಕೆ ಸೇರಿರುವ ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಬಳಕೆಯೂ ಅಧಿವಾಗುತ್ತಿದೆ. ಇದೇ ಮಾದರಿಯಲ್ಲಿ ಇನ್ ಸ್ಟಾಗ್ರಮ್ ಬಳಕೆದಾರ ಸಂಖ್ಯೆಯೂ ಒಂದೇ ಸಮನೆ ಏರಿಕೆಯಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಇನ್ ಸ್ಟಾಗ್ರಾಮ್ ವಾರಕ್ಕೊಂದು ಹೊಸ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಹೊಸ ಆಪ್ ಡೇಟ್ ಬಿಡುಗಡೆ ಮಾಡಿದೆ.

ಇನ್ ಸ್ಟಗ್ರಾಮ್ ಬಳಕೆದಾರರಿಗೆ ಹೊಸ ಆಯ್ಕೆ: ಹ್ಯಾಷ್ ಟ್ಯಾಗ್ ಫಾಲೋ ಮಾಡಿ.!

ಈಗಾಗಲೇ ಇನ್ ಸ್ಟಾಗ್ರಮ್ ನಲ್ಲಿ ಹ್ಯಾಷ್ ಟ್ಯಾಗ್ ಗಳು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಹ್ಯಾಷ್ಯಾಗ್ ಗಳ ಮೂಲಕವೇ ಫಾಲೋ ಮಾಡಿವ ಅವಕಾಶವನ್ನು ಮಾಡಿಕೊಟ್ಟಿದೆ. ಹೇಗೆ ವ್ಯಕ್ತಿಗಳನ್ನು ಪಾಲೋ ಮಾಡುವ ರೀತಿಯಲ್ಲಿ ತಮಗೆ ಇಷ್ಟವಾದ ಹಾಗೂ ಹೆಚ್ಚು ಬಳಕೆ ಮಾಡಿಕೊಳ್ಳುವ ಹ್ಯಾಷ್ ಟ್ಯಾಗ್ ಗಳನ್ನು ಫಾಲೋ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಈಗಾಗಲೇ ಹ್ಯಾಷ್ ಟ್ಯಾಗ್ ಫಾಲೋ ಮಾಡುವ ಅವಕಾಶವನ್ನು ಕೆಲವೇ ಮಂದಿಗೆ ಮಾತ್ರವೇ ಬಳಕೆಗೆ ನೀಡಿದ್ದು, ಶೀಘ್ರವೇ ಎಲ್ಲಾ ಬಳಕೆದಾರರಿಗೆ ಈ ಹೊಸ ಆಯ್ಕೆಯೂ ಶೀಘ್ರವೇ ದೊರೆಯಲಿದ್ದು, ಹ್ಯಾಷ್ ಟ್ಯಾಗ್ ಮೂಲಕವೇ ಫಾಲೋವನ್ನು ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಈ ಮೂಲಕ ಇನ್ ಸ್ಟಾಗ್ರಮ್ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

ಮಾರುಕಟ್ಟೆಗೆ ಬಂದಿದೆ ಆಂಡ್ರಾಯ್ಡ್ ಐಫೋನ್ X: ನೋಡಲು ಮಾತ್ರವಲ್ಲ, ವಿಶೇಷತೆಗಳು ಕಾಪಿ..!

ನೀವು ಫಾಲೋ ಮಾಡುವ ಹಾಷ್ ಟ್ಯಾಗ್ ಅನ್ನು ಬಳಸಿಕೊಂಡು ಮಾಡುವ ಪ್ರತಿ ಪೋಸ್ಟ್ ಗಳನ್ನು ನೀವು ನೋಡಬಹುದಾಗಿದೆ. ನಿಮ್ಮ ಆಸಕ್ತಿಗಳನ್ನು ಇಲ್ಲಿ ಗುರುತಿಸಿಕೊಳ್ಳಬಹುದಾಗಿದೆ. ಅಲ್ಲದೇ ಅದೇ ಹ್ಯಾಷ್ ಟ್ಯಾಗ್ ಗಳಲ್ಲಿ ನಿಮ್ಮ ನೆಚ್ಚಿನ ಪೋಸ್ಟ್ ಗಳನ್ನು ಮಾಡಬಹುದಾಗಿದೆ.

ವ್ಯಕ್ತಿಗಳನ್ನು ಫಾಲೋ ಮಾಡುವ ಮಾದರಿಯಲ್ಲಿಯೇ ಹ್ಯಾಷ್ ಟ್ಯಾಗ್ ಗಳನ್ನು ಫಾಲೋ ಮಾಡಬಹುದಾಗಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎನ್ನಲಾಗಿದೆ. ಇದು ಇನ್ ಸ್ಟಾಗ್ರಮ್ ಬಳಕೆದಾರರಿಗೆ ಬಹು ಉಪಯೋಗವಾಗಲಿದೆ ಎನ್ನಲಾಗಿದೆ. ಇದರಿಂದಾಗಿ ಇನ್ ಸ್ಟಾಗ್ರಾಮ್ ಹ್ಯಾಷ್ ಟ್ಯಾಗ್ ಮತ್ತಷ್ಟು ಖ್ಯಾತಿಯನ್ನು ಪಡೆದುಕೊಳ್ಳಲಿದೆ.

English summary
The ability to follow hashtags will be really helpful for Instagram users to keep up with topics they are interested in.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot