ಇನ್ ಸ್ಟಾಗ್ರಾಮ್ ಬಳಕೆದಾರರಿಗೆ ರಿಮೇಕ್ಸ್ ಆಪ್ಡೇಟ್
ಆಂಡ್ರಾಯ್ಡ್ ಬಳಕೆದಾರರಿಗೆ ಇನ್ ಸ್ಟಾಗ್ರಾಮ್ ಮತ್ತೊಂದು ಆಪ್ಡೇಟ್ ನೀಡಲು ಮುಂದಾಗಿದೆ. ಇದು 24ನೇ ಆಪ್ಡೇಟ್ ಆಗಲಿದೆ ಎನ್ನಲಾಗಿದೆ. ಈ ಆಪ್ಡೇಟ್ ನಲ್ಲಿ ಇನ್ ಸ್ಟಾಗ್ರಾಮ್ ಬಳಕೆದಾರರು ಹಲವು ಹೊಸ ಮಾದರಿಯ ಆಯ್ಕೆಗಳನ್ನು ಪಡೆದುಕೊಳ್ಳಿದ್ದಾರೆ. ಇದರಲ್ಲಿ ಪ್ರಮುಖವಾದದ್ದು 'ರಿಮಿಕ್ಸ್’.

ಈ ಬಾರಿ ದೊರೆಯುವ ಆಪ್ಡೇಟ್ ನ ಪ್ರಮುಖ ಆಯ್ಕೆ ಎಂದರೆ ಫೋಟೋ ರಿಮಿಕ್ಸ್, ನಿಮ್ಮ ಸ್ನೇಹಿತರು ಇನ್ ಸ್ಟಾಗ್ರಾಮ್ ನ ಡೈರೆಕ್ಟ್ ಮೇಸೆಜ್ ನಲ್ಲಿ ಫೋಟೋ ಸೆಂಡ್ ಮಾಡಿದ ಸಂದರ್ಭದಲ್ಲಿ ಅಲ್ಲಿಯೇ ನೀವು ಆ ಫೋಟೋಗೆ ಸ್ಟೀಕರ್ ಗಳನ್ನು ಆಡ್ ಮಾಡಿ ರಿಪ್ಲೇ ಮಾಡುವ ಆಯ್ಕೆಯನ್ನು ನೀಡಲಿದೆ.
ಅಲ್ಲದೇ ಮೇಸೆಜ್ ನಲ್ಲಿಯೇ ನೀವು ಚಿತ್ರವನ್ನು ಬಿಡಿಸುವ ಆಯ್ಕೆಯನ್ನು ಪಡೆದುಕೊಳ್ಳಲಿದ್ದು, ಅಲ್ಲದೇ ಅಲ್ಲಿ ನೀವು ಸ್ಟೀಕರ್, ಟೆಕ್ಸ್ಟ್ ಸೇರಿದಂತೆ ಏನನ್ನು ಬೇಕಾದರು ಬದಲಾಯಿಸುವ ಅವಕಾಶವನ್ನು ಪಡೆದುಕೊಳ್ಳುವಿರಿ ಎನ್ನಲಾಗಿದೆ. ಇದು ನಿಮ್ಮ ಇನ್ ಸ್ಟಾಗ್ರಾಮ್ ಚಾಟಿಂಗ್ ದಿಸೆಯನ್ನು ಬದಲಾಯಿಸಲಿದೆ.
ಈ ಆಯ್ಕೆಯಲ್ಲಿ ನೀವು ಫೋಟೋವನ್ನು ರೀ ಸೈಜ್ ಮಾಡಬಹುದಾದ ಅವಕಾಶವು ಇದೆ. ಅಲ್ಲದೇ ಬೇಕಾದ ರೀತಿಯಲ್ಲಿ ಎಡಿಟ್ ಸಹ ಮಾಡಬಹುದಾಗಿದೆ. ಇದಲ್ಲದೇ ಇನ್ನು ಅನೇಕ ಆಯ್ಕೆಗಳು ಈ ಬಾರಿಯ ಆಪ್ಡೇಟ್ ನಲ್ಲಿ ದೊರೆಯಲಿದೆ ಎನ್ನಲಾಗಿದ್ದು, ನಿಮ್ಮ ಫೋಟೋಗಳನ್ನು ವಿವ್ ಮಾಡುವ ಆಯ್ಕೆಯನ್ನು ನೀಡಲಿದೆ.
ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಶೇರ್ ಮಾಡುವ ಮುನ್ನವೇ ಸ್ನೇಹಿತರೊಂದಿಗೆ ಹಂಚಿಕೊಂಡು ಅಭಿಪ್ರಾಯವನ್ನು ಕೇಳುವ ಅವಕಾಶವನ್ನು ನೀಡಲಾಗಿದೆ. ಈ ಆಪ್ಡೇಟ್ ಪ್ಲೇ ಸ್ಟೋರಿನಲ್ಲಿ ಈಗಾಗಲೇ ಲಭ್ಯವಿದೆ ಎನ್ನಲಾಗಿದ್ದು, ಡೌನ್ ಲೋಡ್ ಮಾಡಿಕೊಂಡು ಎಂಜಾಯ್ ಮಾಡಿ.


Click it and Unblock the Notifications








