ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮ್ಯೂಸಿಕ್..! ಸಾಮಾಜಿಕ ಜಾಲತಾಣಕ್ಕೆ ಹೊಸ ಫೀಚರ್ ಎಂಟ್ರೀ..!

By GizBot Bureau
|

ಫೇಸ್ ಬುಕ್ ಮಾಲೀಕತ್ವದ ಆಪ್ ಗಳ ಸಾಲಿನಲ್ಲಿ ಫೋಟೋ ಶೇರಿಂಗ್ ಗಾಗಿಯೇ ರೂಪಿತವಾಗಿರುವ ಇನ್ ಸ್ಟಾಗ್ರಾಮ್ ಸಾಕಷ್ಟು ಹೊಸ ಆಯ್ಕೆಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಮೊದಲ ಬಾರಿಗೆ ಹೊಸದೊಂದು ಮಾದರಿಯ ಆಯ್ಕೆಯನ್ನು ನೀಡಲು ಮುಂದಾಗಿದ್ದು, ಜೂನ್ 28 ರಿಂದ ಈ ಆಯ್ಕೆಯೂ ಲೈವ್ ಆಗಲಿದೆ. ಇನ್ನು ಮುಂದೆ ಇನ್ ಸ್ಟಾಗ್ರಾಮ್ ಸ್ಟೋರಿಗಳನ್ನು ವಿಶೇಷವಾಗಿ ರೂಪಿಸಬಹುದಾಗಿದೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮ್ಯೂಸಿಕ್..!

ಈ ಹೊಸ ಆಪ್ ಡೇಟ್ iOS ಡಿವೈಸ್ ಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದು, ಇನ್ನು ಮುಂದೆ ಮ್ಯೂಸಿಕ್ ಸ್ಟೋರಿಗಳನ್ನು ಆಪ್ ಲೋಡ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಇಷ್ಟು ದಿನ ಫೋಟೋ ಮತ್ತು ವಿಡಿಯೋ ಸ್ಟೋರಿಗಳನ್ನು ಮಾತ್ರವೇ ಹಾಕುವಂತಹ ಆಯ್ಕೆಯನ್ನು ನೀಡಿದ್ದ ಇನ್ ಸ್ಟಾಗ್ರಾಮ್ ಇನ್ನು ಮುಂದಿನ ದಿನಗಳಲ್ಲಿ ಮ್ಯೂಸಿಕ್ ಸ್ಟೋರಿಗಳನ್ನು ಆಪ್ ಲೋಡ್ ಮಾಡಲು ಅವಕಾಶ ಮಾಡಿಕೊಡಲಿದೆ.

ಈ ಹೊಸ ಆಪ್ ಡೇಟ್ ಮೊದಲಿಗೆ ಆಪಲ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಇದಾದ ನಂತರದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೂ ದೊರೆಯಲಿದೆ ಎನ್ನಲಾಗಿದೆ. ಆಂಡ್ರಾಯ್ಡ್ ಬಳಕೆದಾರರು ಸಹ ಈ ಹೊಸ ಆಪ್ ಡೇಟ್ ಅನ್ನು ಸ್ವೀಕರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ಇನ್ ಸ್ಟಾಗ್ರಾಮ್ ಸ್ಟೋರಿಗಳು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದು, ದಿನಕ್ಕೆ ಸುಮಾರು 400 ಮಿಲಿಯನ್ ಸ್ಟೋರಿಗಳನ್ನು ಬಳಕೆದಾರರು ಆಪ್ ಡೇಟ್ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಳಕೆದಾರರು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಸ್ಟೋರಿಗಳನ್ನು ಆಪ್ ಲೋಡ್ ಮಾಡಲು ಅವಕಾಶ ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಮ್ಯೂಸಿಕ್ ಸ್ಟೋರಿಯನ್ನು ಆಪ್ ಲೋಡ್ ಮಾಡಲು ಹೊಸ ಆಯ್ಕೆಯು ಬಂದಿದೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮ್ಯೂಸಿಕ್..!

ಇದಲ್ಲದೇ ಇನ್ ಸ್ಟಾಗ್ರಾಮ್ ಹೊಸದಾಗಿ ಮ್ಯೂಸಿಕ್ ಸ್ಟೋರಿಗಳನ್ನು ಆಪ್ ಲೋಡ್ ಮಾಡುವ ಅವಕಾಶವನ್ನು ಸುಮಾರು 51 ದೇಶಗಳಲ್ಲಿ ಲಾಂಚ್ ಮಾಡಿದ್ದು, ಶೀಘ್ರವೇ ಎಲ್ಲಾ ದೇಶಗಳಲ್ಲಿಯೂ ಈ ಹೊಸ ಸೇವೆಯನ್ನು ವಿಸ್ತರಿಸಲು ಫೇಸ್ಬುಕ್ ಮುಂದಾಗಿದೆ. ಇದಲ್ಲದೇ ಮ್ಯೂಸಿಕ್ ಸ್ಟೋರಿಗಳನ್ನು ಆಪ್ ಲೋಡ್ ಮಾಡುವ ಅಲುವಾಗಿ ಸ್ಟೀಕರ್ ಗಳನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಈಗಾಗಲೇ ಫೇಸ್ ಬುಕ್ ಒಡೆತನದ ಆಪ್ ಗಳಲ್ಲಿ ಸ್ಟೋರಿ ಆಯ್ಕೆಯನ್ನು ಸಾಕಷ್ಟು ಕಡೆ ನೋಡಬಹುದಾಗಿದೆ. ಆದರೆ ಇನ್ ಸ್ಟಾಗ್ರಾಮ್ ನಲ್ಲಿ ಮಾತ್ರವೇ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಈ ಕಾರಣಕ್ಕಾಗಿಯೇ ಇನ್ ಸ್ಟಾಗ್ರಾಮ್ ಸ್ಟೋರಿಗಳು ಹೆಚ್ಚು ಪ್ರಮಾಣದಲ್ಲಿ ಆಪ್ ಡೇಟ್ ಅನ್ನು ಪಡೆದುಕೊಳ್ಳುತ್ತಿದೆ.

Best Mobiles in India

English summary
Instagram rolls out Music in Stories for iOS users. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X