TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ಒಡೆತನ ಆಪ್ ಗಳು ದಿನಕ್ಕೊಂದು ಹೊಸ ಆಯ್ಕೆಗಳನ್ನು ಪಡೆದುಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಈಗಾಗಲೇ ವಾಟ್ಸ್ ಆಪ್ ನಲ್ಲಿ ಪೇಮೆಂಟ್ ಸೇವೆಯನ್ನು ನೀಡಿದ ಮಾದರಿಯಲ್ಲಿ, ಪೋಟೋ ಪೋಸ್ಟಿಂಗ್ ತಾಣ ಇನ್ ಸ್ಟಾಗ್ರಮ್ ನಲ್ಲಿಯೂ ಇದೇ ಮಾದರಿಯ ಸೇವೆಯನ್ನು ನೀಡಲಿದೆ ಎನ್ನಲಾಗಿದೆ. ಇನ್ನು ಮುಂದೆ ಇನ್ ಸ್ಟಾಗ್ರಾಮ್ ನಲ್ಲಿ ಪೇಮೆಂಟ್ ಸೇವೆಯನ್ನು ದೊರೆಯಲಿದೆ ಎನ್ನಲಾಗಿದೆ.
ಮೊದಲಿಗೆ ಈ ಸೇವೆಯೂ ಅಮೇರಿಕಾದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ವಿವಿಧ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇನ್ ಸ್ಟಾಗ್ರಾಮ್ ಸೆಟ್ಟಿಂಗ್ಸ್ ನಲ್ಲಿ ಇದು ಹೊಸದಾಗಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾದರಿಯಲ್ಲಿಯೇ ಕಾಣಿಸಿಕೊಳ್ಳಲಿದೆ. ಕ್ರೆಡಿಡ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಪೇಮೆಂಟ್ ಮಾಡಬಹುದಾಗಿದೆ.
ಇನ್ನು ಮುಂದೆ ಇನ್ ಸ್ಟಾಗ್ರಮ್ ಬಳಕೆದಾರರು ಬೇರೆ ಬೇರೆ ಆಪ್ ಬಳಕೆ ಮಾಡಿಕೊಂಡು ಪೇಮೆಂಟ್ ಮಾಡುವ ಬದಲಿಗೆ ಇನ್ ಸ್ಟಾಗ್ರಮ್ ನಲ್ಲಿಯೇ ಪೇಮೆಂಟ್ ಮಾಡಬಹುದಾಗಿದೆ. ಇದರಿಂದಾಗಿ ಫೇಸ್ ಬುಕ್ ತನ್ನ ಒಡೆತನದ ಎಲ್ಲಾ ಆಪ್ ಗಳಲ್ಲಿಯೂ ಪೇಮೆಂಟ್ ಸೇವೆಯನ್ನು ನೀಡುವುದಾಗಿ ಈ ಹಿಂದೆಯೇ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಇನ್ ಸ್ಟಾಗ್ರಮ್ ಪೇಮೆಂಟ್ ಸೇವೆಯನ್ನು ಪಡೆದುಕೊಳ್ಳಲಿದೆ.
ಈ ಕುರಿತು ಮಾಹಿತಿಯನ್ನು ಫೇಸ್ ಬುಕ್ F8 ಸಮಾವೇಶದಲ್ಲಿ ಮಾಹಿತಿಯನ್ನು ನೀಡಲಾಗಿದೆ. ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಇನ್ ಸ್ಟಾಗ್ರಮ್ ಬಳಕೆದಾರರು ಶೀಘ್ರವೇ ಈ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಶೀಘ್ರವೇ ಆಪ್ ಡೇಟ್ ದೊರೆಯಲಿದೆ.
