ಇನ್ಸ್ಟಾಗ್ರಾಂನಲ್ಲಿ ಎಷ್ಟು ಸಮಯ ಕಳಿದಿರಿ ಎಂಬುದನ್ನು ತಿಳಿಸುವ ಹೊಸ ಫೀಚರ್

|

ಫೋಟೋ ಮೆಸೇಜಿಂಗ್ ಆಪ್ ಇನ್ಸ್ಟಾಗ್ರಾಂ ಹೊಸ ಫೀಚರ್ ವೊಂದನ್ನು ಬಿಡುಗಡೆಗೊಳಿಸಿದ್ದು, ಅದು ಬಳಕೆದಾರರು ಎಷ್ಟು ಸಮಯವನ್ನು ಇನ್ಸ್ಟಾಗ್ರಾಂ ಆಪ್ ನಲ್ಲಿ ಕಳೆಯುತ್ತಿದ್ದಾರೆ ಎಂಬುದನ್ನು ತಿಳಿಸುತ್ತದೆ. ಆ ಫೀಚರ್ ನ ಹೆಸರು 'Your Activity’.

ಬಳಕೆಯ ಸರಾಸರಿ ಲೆಕ್ಕ ನೀಡುವ ಫೀಚರ್:

ಬಳಕೆಯ ಸರಾಸರಿ ಲೆಕ್ಕ ನೀಡುವ ಫೀಚರ್:

ಈ ವೈಶಿಷ್ಟ್ಯತೆಯು ಬಳಕೆದಾರರಿಗೆ ಪ್ರತಿದಿನದ ಬಳಕೆಯ ಲಿಮಿಟ್ ನ್ನು ಸೆಟ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತದೆ. ಹೊಸ ಫೀಚರ್ ನ್ನು ಪ್ರೊಫೈಲ್ ಪೇಜಿನ ಮೇಲ್ಬಾಗದ ಬಲ ಬದಿಯಲ್ಲಿರುವ ಹ್ಯಾಮ್ ಬರ್ಗರ್ ಐಕಾನ್ ನ್ನು ಆಕ್ಸಿಸ್ ಮಾಡುವುದರ ಮೂಲಕ ಬಳಸಬಹುದು. ಯುವರ್ ಆಕ್ಟಿವಿಟಿ ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕ ಪ್ರತಿದಿನ ಇನ್ಸ್ಟಾಗ್ರಾಂ ಆಪ್ ನಲ್ಲಿ ಏಳು ದಿನಗಳ ಅವಧಿಯಲ್ಲಿ ಕಳೆದ ಒಟ್ಟಾರೆ ಸಮಯದ ಸರಾಸರಿಯನ್ನು ತಿಳಿದುಕೊಳ್ಳಬಹುದು.

ಅಗಸ್ಟ್ ನಲ್ಲೇ ಮಾಹಿತಿ ನೀಡಲಾಗಿತ್ತು:

ಅಗಸ್ಟ್ ನಲ್ಲೇ ಮಾಹಿತಿ ನೀಡಲಾಗಿತ್ತು:

ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಎರಡೂ ಕೂಡ ಈ ವರ್ಷದ ಅಗಸ್ಟ್ ನಲ್ಲಿ ಈ ಬಗ್ಗೆ ಪ್ರಕಟಣೆಯನ್ನು ನೀಡಿದ್ದವು. ತಮ್ಮ ಆಪ್ ನಲ್ಲಿ ಬಳಕೆದಾರರು ಎಷ್ಟು ಸಮಯ ಕಳೆಯುತ್ತಾರೆ ಎಂದು ಟ್ರ್ಯಾಕ್ ಮಾಡಿಕೊಳ್ಳುವುದಕ್ಕೆ ಇನ್ನು ಮುಂದೆ ನಾವು ನೆರವಾಗಲಿದ್ದೇವೆ ಎಂದು ತಿಳಿಸಿದ್ದವು.

ಇದೀಗ ಇನ್ಸ್ಟಾಗ್ರಾಂ ಫೇಸ್ ಬುಕ್ ನಲ್ಲೂ ಸೇಮ್ ಫೀಚರ್:

ಇದೀಗ ಇನ್ಸ್ಟಾಗ್ರಾಂ ಫೇಸ್ ಬುಕ್ ನಲ್ಲೂ ಸೇಮ್ ಫೀಚರ್:

ಈ ಹೊಸ ಫೀಚರ್ ನ್ನು ಬಿಡುಗಡೆಗೊಳಿಸಿದ್ದು ಮುಂದಿನ ದಿನಗಳಲ್ಲಿ ಫೇಸ್ ಬುಕ್ ನಲ್ಲೂ ಕೂಡ ಈ ವೈಶಿಷ್ಟ್ಯತೆ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಫೇಸ್ ಬುಕ್ ನಲ್ಲಿ ಈ ಫೀಚರ್ ನ್ನು " ಯುವರ್ ಟೈಮ್ ಆನ್ ಫೇಸ್ ಬುಕ್" ಎಂಬ ಹೆಸರಿನಲ್ಲಿ ಇರಲಿದೆ ಎಂದು ತಿಳಿಸಲಾಗಿದೆ.

ರಿಮೈಂಡರ್ ಸೆಟ್ ಮಾಡಲು ಅವಕಾಶ:

ರಿಮೈಂಡರ್ ಸೆಟ್ ಮಾಡಲು ಅವಕಾಶ:

ಹೊಸ ಅಪ್ ಡೇಟ್ ಮೂಲಕ ಇನ್ಸ್ಟಾಗ್ರಾಂ ಬಳಕೆದಾರರು ತಮ್ಮ ಬಳಕೆಯ ಲಿಮಿಟ್ ನ್ನು ಸೆಟ್ ಮಾಡಿಕೊಂಡು ರಿಮೈಂಡರ್ ಇಟ್ಟುಕೊಳ್ಳಬಹುದು. ಫುಶ್ ನೋಟಿಫಿಕೇಷನ್ ಮೆಸೇಜ್ ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿಕೊಳ್ಳುವುದಕ್ಕೂ ಅವಕಾಶವಿದೆ.

ಹಿಂದಿ ಭಾಷೆಯಲ್ಲಿ ಇನ್ಸ್ಟಾಗ್ರಾಂ:

ಹಿಂದಿ ಭಾಷೆಯಲ್ಲಿ ಇನ್ಸ್ಟಾಗ್ರಾಂ:

ಇನ್ನೊಂದು ಇನ್ಸ್ಟಾಗ್ರಾಂ ಸಂಬಂಧಿತ ಸುದ್ದಿಯ ಪ್ರಕಾರ ಫೇಸ್ ಬುಕ್ ಮಾಲೀಕತ್ವದ ಕಂಪೆನಿ ಹಿಂದಿ ಬೆಂಬಲಿತ ಆಪ್ ಗಾಗಿ ಕೆಲಸವನ್ನು ಮಾಡುತ್ತಿದೆ ಎಂದು ತಿಳಿದುಬಂದಿದೆ. ಆಪ್ ನ ರೀಸರ್ಚರ್ ಆಗಿರುವ ಜಾನೇ ಮ್ಯಾನ್ಚುನ್ ವಾಂಗ್ ಹೊಸ ಸ್ಕ್ರೀನ್ ಶಾಟ್ ನ್ನು ಈ ನಿಟ್ಟಿನಲ್ಲಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದ ಕಾರಣದಿಂದಾಗಿ ಈ ಸುದ್ದಿ ತಿಳಿದುಬಂದಿದೆ. ಈಗಾಗಲೇ ಇನ್ಸಾಗ್ರಾಂ ಹಲವು ಭಾಷೆಗಳಿಗೆ ಬೆಂಬಲ ನೀಡುತಿದ್ದು ಅದರಲ್ಲಿ ಫ್ರೆಂಚ್, ಜರ್ಮನ್, ಅರೇಬಿಕ್, ಕೊರಿಯನ್ ಮತ್ತು ವಿಯಟ್ನಾಮೀಸ್ ಮತ್ತು ಹಲವು ಸೇರಿದೆ.

ಭಾಷೆಗೆ ಪ್ರಾಮುಖ್ಯತೆ:

ಭಾಷೆಗೆ ಪ್ರಾಮುಖ್ಯತೆ:

ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಎರಡೂ ಕೂಡ ಹಿಂದಿ ಭಾಷೆಗೆ ಬೆಂಬಲ ನೀಡುತ್ತದೆ. ಪಂಜಾಬಿ, ಮರಾಠಿ, ಬೆಂಗಾಳಿ ಹಾಗು ಇತರೆ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲೂ ಕೂಡ ಬೆಂಬಲ ನೀಡಲಿದೆ. ಇದೇ ಸಮಯದಲ್ಲಿ ಇನ್ಸ್ಟಾಗ್ರಾಂ ಥರ್ಡ್ ಪಾರ್ಟಿ ಅಥೆಂಟಿಕೇಷನ್ ಸಪೋರ್ಟ್ ನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದೆ. ಥರ್ಡ್ ಪಾರ್ಟಿ ಆಪ್ ನಿಂದ ಅಕೌಂಟಿಗೆ ಲಾಗಿನ್ ಆಗುವುದಕ್ಕೆ ಈ ವೈಶಿಷ್ಟ್ಯತೆಯು ಅವಕಾಶ ನೀಡುತ್ತದೆ.

ಆಪ್ ನ ಐಓಎಸ್ ಬಳಕೆದಾರರಿಗೆ ಈ ಅವಕಾಶವನ್ನು ಮೊದಲು ನೀಡಲಾಗಿತ್ತು. ಇದೀಗ ಹೊಸ ಹೊಸ ಅಪ್ ಡೇಟ್ ಗಳು ಇನ್ಸ್ಟಾಗ್ರಾಂನಲ್ಲಿ ನಡೆಯುತ್ತಿದ್ದು ಇದು ಗ್ರಾಹಕ ಸ್ನೇಹಿಯಾಗಿರಲಿದೆ ಎಂಬ ನಂಬಿಕೆ ಗ್ರಾಹಕರದ್ದಾಗಿದೆ.

Best Mobiles in India

English summary
Instagram’s new ‘Your Activity’ feature tells how much time you spend on the app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X