ನಿಮ್ಮ ಪೋಸ್ಟ್ ಗೆ ಎಷ್ಟು ಲೈಕ್ ಆಯ್ತೆಂದು ಇನ್ಮುಂದೆ ಇನ್ಸ್ಟಾಗ್ರಾಂ ನಲ್ಲಿ ಯಾರಿಗೂ ತಿಳಿಯುವುದಿಲ್ಲ!

By Gizbot Bureau
|

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಇನ್ಸ್ಟಾಗ್ರಾಂ ತನ್ನ ಪ್ರೈವೇಟ್ ಲೈಕ್ಸ್ ಕೌಂಟ್ ಟೆಸ್ಟ್ ನ್ನು ವಿಸ್ತರಿಸುವ ಬಗ್ಗೆ ಪ್ರಕಟಿಸಿದೆ. ಈ ಟೆಸ್ಟ್ ನಲ್ಲಿ , ಲೈಕರ್ ಲಿಸ್ಟ್ ನ್ನು ಟ್ಯಾಪ್ ಮಾಡುವ ಮೂಲಕ ನೀವು ನಿಮ್ಮ ಲೈಕ್ಸ್ ಗಳನ್ನು ನೋಡಬಹುದು ಆದರೆ ಇತರರು ನೋಡಲು ಸಾಧ್ಯವಿಲ್ಲ. ಅಂದರೆ ಇತರರಿಗೆ ನಿಮ್ಮ ಪೋಸ್ಟಿಗೆ ಎಷ್ಟು ಲೈಕ್ ಆಗಿದೆ ಎಂಬುದು ತಿಳಿಯುವುದಿಲ್ಲ. ಅದೇ ರೀತಿ ಇತರರ ಪೋಸ್ಟ್ ಗೆ ಎಷ್ಟು ಲೈಕ್ ಬಂದಿದೆ ಎಂಬುದನ್ನು ನೀವು ನೋಡುವುದಕ್ಕೆ ಅವಕಾಶವಿರುವುದಿಲ್ಲ.

ಇನ್ಸ್ಟಾಗ್ರಾಂ

ಇನ್ಸ್ಟಾಗ್ರಾಂ ನ ಉಪಾಧ್ಯಕ್ಷರಾಗಿರುವ ವಿಶಾಲ್ ಶಾ ಅವರು ಹೇಳಿರುವಂತೆ ನೀವು ಈ ಟೆಸ್ಟ್ ನಲ್ಲಿದ್ದರೆ ಫೀಡ್ ಗೆ ನಿಮ್ಮ ಸ್ವಂತದವರನ್ನು ಹೊರತು ಪಡಿಸಿ ಇತರರ ಫೋಟೋ ಮತ್ತು ವೀಡಿಯೋಗಳಿಗೆ ಎಷ್ಟು ಲೈಕ್ಸ್ ಆಗಿದೆ ಅಥವಾ ವ್ಯೂ ಆಗಿದೆ ಎಂಬ ಸಂಖ್ಯೆಯನ್ನು ನಿಮಗೆ ನೋಡುವುದಕ್ಕೆ ಅವಕಾಶವಿರುವುದಿಲ್ಲ.

ಟೆಸ್ಟಿಂಗ್

ಆರಂಭಿಕವಾಗಿ ಟೆಸ್ಟಿಂಗ್ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶಗಳು ದೊರೆತ ಹಿನ್ನೆಲೆಯಲ್ಲಿ ಇನ್ಸ್ಟಾಗ್ರಾಂನ ಮೂಲಭೂತ ಬದಲಾವಣೆಯಾಗಿರುವ ಇದನ್ನು ಮುಂದುವರಿಸಲಾಗುತ್ತಿದ್ದು, ತಮ್ಮ ಜಾಗತಿಕ ಸಮುದಾಯದಿಂದ ಇನ್ನಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ಇದನ್ನು ವಿಸ್ತರಿಸಲಾಗುತ್ತಿದ್ದು ಪರೀಕ್ಷೆಯನ್ನು ಮುಂದುವರಿಸಲಾಗುವುದು ಎಂದು ತಮ್ಮ ಹೇಳಿಕೆಯಲ್ಲಿ ಶಾ ತಿಳಿಸಿದ್ದಾರೆ.

ಇನ್ಸ್ಟಾಗ್ರಾಂ ಎಕ್ಸ್ ಪೀರಿಯನ್ಸ್

ಮೇ 2019 ರಲ್ಲಿ ಈ ಟೆಸ್ಟ್ ಮೊದಲು ಕೆನಡಾದಲ್ಲಿ ಪ್ರಾರಂಭವಾಯಿತು ಮತ್ತು ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್, ಜಪಾನ್, ಬ್ರೆಝಿಲ್, ಐರ್ ಲ್ಯಾಂಡ್, ಇಟಲಿಯಲ್ಲಿ ಈ ವರ್ಷದಲ್ಲಿ ಇದನ್ನು ವಿಸ್ತರಿಸಲಾಗಿದೆ.

ಇತ್ತೀಚೆಗೆ ಮುಂಬೈ ನಲ್ಲಿ ನಡೆಸಲಾದ "ಇನ್ಸ್ಟಾಗ್ರಾಂ ಎಕ್ಸ್ ಪೀರಿಯನ್ಸ್" ಕಾರ್ಯಕ್ರಮವು ಇದರ ಟೆಸ್ಟ್ ನ ಬಿಡುಗಡೆಯನ್ನು ಮತ್ತಷ್ಟು ಹತ್ತಿರವಾಗುವಂತೆ ಮಾಡಿತು.ಯುವ ಮಾಧ್ಯಮ ವೇದಿಕೆಯಾಗಿರುವ"ಯುವಾ" ಸಹಭಾಗಿತ್ವದಲ್ಲಿ "ಅನ್ ಲೇಬಲ್" ಕಂಟೆಂಟ್ ಸರಣಿಯನ್ನು ಪ್ರಕಟಿಸಲಾಯಿತು.ಇದು ಸ್ಟೀರಿಯೋಟೈಪ್ ಗಳನ್ನು ತಮ್ಮ ಅಧಿಕೃತ ವ್ಯಕ್ತಿಗಳೆಂದು ಸವಾಲು ಮಾಡುವ ಯುವ ಭಾರತೀಯರನ್ನು ಇದು ಒಳಗೊಂಡಿರುತ್ತದೆ. ಅನಗತ್ಯ ಸಂವಾದಗಳಿಂದ ನಿಮ್ಮ ಖಾತೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ರಿಸ್ಟ್ರಿಕ್ಟ್ ಕೂಡ ಇತ್ತೀಚೆಗೆ ಬಿಡುಗಡೆಗೊಂಡಿರುವ ಫೀಚರ್ ಗಳಲ್ಲಿ ಒಂದೆನಿಸಿದೆ.

Best Mobiles in India

Read more about:
English summary
Instagram Starts To Hide Number Of Likes Across The Globe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X