ಇನ್ಸ್ಟಾಗ್ರಾಮ್ ಸ್ಟೋರಿಗಳನ್ನೀಗ ಶೇರ್ ಮಾಡಿ ಡೈರೆಕ್ಟ್ ಮೆಸೇಜ್ನಲ್ಲಿ!

ಇನ್ಸ್ಟಾಗ್ರಾಮ್ ನ ಹೊಸ ಅಪ್ಡೇಟ್ ತಂದಿದೆ ಇನ್ಸ್ಟಾಗ್ರಾಮ್ ಗೆ ಯಾವುದೇ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಡೈರೆಕ್ಟ್ ಮೆಸೇಜ್ ಮೂಲಕ ಗೆಳೆಯರೊಂದಿಗೆ ಹಂಚಿಕೊಳ್ಳುವ ಸಾಮರ್ಥ್ಯ.

By Tejaswini P G
|

ಇನ್ಸ್ಟಾಗ್ರಾಮ್ ನ ಹೊಸ ಅಪ್ಡೇಟ್ ತಂದಿದೆ ಇನ್ಸ್ಟಾಗ್ರಾಮ್ ಗೆ ಹೊಸ ಫೀಚರ್. ನೀವೀಗ ಇನ್ಸ್ಟಾಗ್ರಾಮ್ ಸ್ಟೋರಿಗಳನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು ಡೈರೆಕ್ಟ್ ಮೆಸೇಜ್ ಮೂಲಕ! ಈ ಫೀಚರ್ ಸಧ್ಯಕ್ಕೆ ಇನ್ಸ್ಟಾಗ್ರಾಮ್ ನ ಮೊಬೈಲ್ ಆಪ್ನಲ್ಲಿ ಮಾತ್ರವೇ ಲಭ್ಯವಿದ್ದು ಶೀಘ್ರದಲ್ಲಿಯೇ ಎಲ್ಲಾ ಕಡೆ ಲಭ್ಯವಾಗಲಿದೆ.

ಇನ್ಸ್ಟಾಗ್ರಾಮ್ ಸ್ಟೋರಿಗಳನ್ನೀಗ ಶೇರ್ ಮಾಡಿ ಡೈರೆಕ್ಟ್ ಮೆಸೇಜ್ನಲ್ಲಿ!

ನೆನಪಿರಲಿ, ಇನ್ಸ್ಟಾಗ್ರಾಮ್ ನ ಈ ಹೊಸ ಫೀಚರ್ ಅನ್ನು ಬಳಸಲು ನೀವು ಬಳಸುತ್ತಿರುವ ಇನ್ಸ್ಟಾಗ್ರಾಮ್ ಆಪ್ ನ ಆವೃತ್ತಿ 11.0 ಇರಬೇಕು. ಬನ್ನಿ, ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದು ಕೊಳ್ಳೋಣ. ನಿಮ್ಮ ಇನ್ಸ್ಟಾಗ್ರಾಮ್ ಆಪ್ ಗೆ ಈ ಹೊಸ ಅಪ್ಡೇಟ್ ಅನ್ನು ಹಾಕಿದ ನಂತರ, ಪ್ರತಿ ಇನ್ಸ್ಟಾಗ್ರಾಮ್ ಸ್ಟೋರಿಯ ಕೆಳಗೆ ಬಲಬದಿಯ ಮೂಲೆಯಲ್ಲಿ 'ಡೈರೆಕ್ಟ್' ಐಕಾನ್ ನಿಮಗೆ ಕಾಣ ಸಿಗುತ್ತದೆ.

ನೀವು ಯಾವುದೇ ಸ್ಟೋರಿಯನ್ನು ಖಾಸಗಿಯಾಗಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಬಯಸಿದರೆ, ಸ್ಟೋರಿಯ ಕೆಳ ಭಾಗದಲ್ಲಿ, ಬಲಬದಿಯಲ್ಲಿರುವ ಡೈರೆಕ್ಟ್ ಐಕಾನ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಇದನ್ನು ಹಂಚಿಕೊಳ್ಳಬಯಸುವ ಗೆಳೆಯರನ್ನು ಆಯ್ಕೆ ಮಾಡಿ.

ನೀವು ಡೈರೆಕ್ಟ್ ಮೆಸೇಜ್ ಮೂಲಕ ಹಂಚಿಕೊಂಡ ಸ್ಟೋರಿ ಶಾಶ್ವತವಾಗಿ ಅಲ್ಲಿ ಉಳಿದುಕೊಳ್ಳುವುದಿಲ್ಲ ಎನ್ನುವುದು ನಿಮಗೆ ನೆನಪಿರಲಿ. ಯಾವುದೇ ಇನ್ಸ್ಟಾಗ್ರಾಮ್ ಸ್ಟೋರಿ 24 ಘಂಟೆಗಳ ನಂತರ ಇನ್ಸ್ಟಾಗ್ರಾಮ್ ಆಪ್ನಿಂದ ಮರೆಯಾಗುವಂತೆ ಡೈರೆಕ್ಟ್ ಮೆಸೇಜ್ನಿಂದ ಕೂಡ ಮರೆಯಾಗುತ್ತದೆ. ನೀವು ಹಂಚಿಕೊಂಡ ಸ್ಟೋರಿಯ ಮೂಲ ಪೋಸ್ಟ್ ಮರೆಯಾಗುತ್ತಿದ್ದಂತೆಯೇ, ಅದು ಡೈರೆಕ್ಟ್ ಮೆಸೇಜ್ನಲ್ಲೂ ಮರೆಯಗುತ್ತದೆ.

ಈ ಹೊಸ ಫೀಚರ್ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಹಂಚಿಕೊಳ್ಳಲು ಹೊಸ ವಿಧವೊಂದನ್ನು ನೀಡುವುದರಿಂದ ಹಲವಾರು ಬಳಕೆದಾರರಿಗೆ ಇದು ಉಪಯುಕ್ತವೆಂದೆನಿಸಬಹುದು. ಆದರೆ ಇನ್ಸ್ಟಾಗ್ರಾಮ್ ಸ್ಟೋರಿಯ ಪ್ರೈವೆಸಿಗೆ ಇದರಿಂದ ಉಂಟಾಗುವ ತೊಂದರೆಗಳನ್ನು ನಾವಿಲ್ಲಿ ಆಲೋಚಿಸಲೇಬೇಕು.

999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!999 ರೂ.ಗೆ ಅತ್ಯುತ್ತಮ ಝೆಬ್ರೋನಿಕ್ಸ್ ಬ್ಲೂಟೂತ್ ಇಯರ್‌ಫೋನ್!!

ಉದಾಹರಣೆಗೆ, ಇನ್ಸ್ಟಾಗ್ರಾಮ್ ಸ್ಟೋರಿಯೊಂದನ್ನು ಕೆಲವೇ ಜನರೊಂದಿಗೆ ಖಾಸಗಿಯಾಗಿ ಹಂಚಿಕೊಳ್ಳಲೆಂದು ಸೃಷ್ಟಿಸಿದ್ದರೂ, ಡೈರೆಕ್ಟ್ ಮೆಸೇಜ್ ಮೂಲಕ ಆ ಸ್ಟೋರಿಯನ್ನು ಯಾರೊಂದಿಗೆ ಬೇಕಾದರೂ ಹಂಚಿಕೊಳ್ಳಬಹುದು. ಹೀಗಾಗಿ ಅದರ ಪ್ರೈವೆಸಿಗೆ ಧಕ್ಕೆಯುಂಟಾಗಬಹುದು.

ಈ ಕಾರಣಕ್ಕೆಂದೇ, ಇನ್ಸ್ಟಾಗ್ರಾಮ್ ತನ್ನ ಬಳಕೆದಾರರಿಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಡೈರೆಕ್ಟ್ ಮೆಸೇಜ್ ಮೂಲಕ ಶೇರ್ ಮಾಡುವುದನ್ನು ತಡೆಯುವ ಆಯ್ಕೆಯನ್ನೂ ನೀಡಿದೆ. ಈ ಆಯ್ಕೆ ಸೆಟ್ಟಿಂಗ್ಸ್ ನಲ್ಲಿ ಲಭ್ಯವಿರುತ್ತದೆ.

ಈ ಫೀಚರ್ ಇನ್ಸ್ಟಾಗ್ರಾಮ್ ಸ್ಟೋರಿ ಫೇಸ್ಬುಕ್ ಬಳಕೆದಾರರಿಗೆ ಹೇಗೆ ಲಭ್ಯವಾಗಲಿದೆ ಎಂಬುದನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿದೆ.ಇಷ್ಟೆಲ್ಲಾ ತಿಳಿದ ಮೇಲೆ, ಇನ್ಸ್ಟಾಗ್ರಾಮ್ ನ ಈ ಹೊಸ ಫೀಚರ್ ಕುರಿತು ನಿಮ್ಮ ಅಭಿಪ್ರಾಯವೇನು. ತಪ್ಪದೆ ತಿಳಿಸಿ ಕೆಳಗಿನ ಕಮೆಂಟ್ಸ್ ಸೆಕ್ಷನ್ ನಲ್ಲಿ!!

Best Mobiles in India

Read more about:
English summary
The new feature can be only accessed if your Instagram app is running the version 11.0.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X