Subscribe to Gizbot

ಇನ್ ಸ್ಟಗ್ರಾಮ್ ಸ್ಟೋರಿಸ್ ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಶೀಘ್ರವೇ ಲಭ್ಯ..!

Written By: Lekhaka

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ತನ್ನ ಒಡೆತನಕ್ಕೆ ಸೇರಿರುವ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಒಂದಾಗಿ ಸೇರಿ ಅಧಿಪತ್ಯವನ್ನು ಸ್ಥಾಪಿಸುವ ಸಾಧ್ಯತೆ ಇದೆ. ಈಗಾಗಲೇ ಫೇಸ್ ಬುಕ್ ಮತ್ತು ಇನ್ ಸ್ಟಗ್ರಾಮ್ ಗಳನ್ನು ಒಂದಕ್ಕೊಂದು ಲಿಂಕ್ ಆಗುವ ಮಾದರಿಯಲ್ಲಿ ವಿನ್ಯಾಸ ಮಾಡಿದ್ದು, ಇದೇ ಮಾದರಿಯಲ್ಲಿ ವಾಟ್ಸ್ಆಪ್ ಮತ್ತು ಇನ್ ಸ್ಟಗ್ರಾಮ್ ನಡುವೆ ಸಂಬಂಧ ಬೆಸೆಯುವ ಕಾರ್ಯಕ್ಕೆ ಮುಂದಾಗಿದೆ.

ಇನ್ ಸ್ಟಗ್ರಾಮ್ ಸ್ಟೋರಿಸ್ ವಾಟ್ಸ್ಆಪ್ ಸ್ಟೇಟಸ್ ನಲ್ಲಿ ಶೀಘ್ರವೇ ಲಭ್ಯ..!

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇನ್ ಸ್ಟಗ್ರಾಮ್ ಸ್ಟೋರಿಗಳು ಮತ್ತು ವಾಟ್ಸ್ಆಪ್ ಸ್ಟೇಟಸ್ ಗಳು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಫೇಸ್ ಬುಕ್ ಹೊಸದೊಂದು ಸಾಧ್ಯತೆಯನ್ನು ಪರೀಕ್ಷಿಸಲು ಮುಂದಾಗಿದೆ. ಇನ್ ಸ್ಟಗ್ರಾಮ್ ಸ್ಟೋರಿಗಳನ್ನು ನೇರವಾಗಿ ವಾಟ್ಸ್ ಆಪ್ ಸ್ಟೇಟಸ್ ಮಾದರಿಯಲ್ಲಿ ಪೋಸ್ಟ್ ಮಾಡುವ ಪ್ರಯತ್ನವನ್ನು ಮಾಡುತ್ತಿದೆ ಎನ್ನಲಾಗಿದೆ.

ಸ್ನಾಪ್ ಚಾಟ್ ನೀಡಿದ್ದ ಸ್ಟೋರಿಯನ್ನು ಕಾಪಿ ಮಾಡಿದ್ದ ಫೇಸ್ ಬುಕ್ ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಬಳಕೆ ಮಾಡಿಕೊಂಡಿತ್ತು. ವಾಟ್ಸ್ ಆಪ್ ನಲ್ಲಿ ಸ್ಟೇಟಸ್ ಎಂದು ಹಾಗೆಯೇ ಇನ್ ಸ್ಟಗ್ರಾಮ್ ನಲ್ಲಿ ಸ್ಟೋರಿ ಎಂದು ಎರಡನ್ನು ನಾಮಕರಣ ಮಾಡಿತ್ತು.

ಈಗಾಗಲೇ ಇನ್ ಸ್ಟಗ್ರಾಮ್ ಸ್ಟೋರಿಗಳು ಮತ್ತು ವಾಟ್ಸ್ಆಪ್ ಸ್ಟೇಟಸ್ ಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಈ ಎರಡು ಆಯ್ಕೆಗಳನ್ನು ಒಂದಕ್ಕೊಂದು ಲಿಂಕ್ ಮಾಡುವ ಮೂಲಕ ಮತ್ತಷ್ಟು ಹೊಸ ಬಳಕೆದಾರರನ್ನು ಮತ್ತು ಹೆಚ್ಚು-ಹೆಚ್ಚು ಜನರನ್ನು ತಲುಪುವ ಕಾರ್ಯಕ್ಕೆ ಮುಂದಾಗಿದೆ.

ಕಂಪ್ಯೂಟರ್‌ ಲೋಕವನ್ನೇ ಮುಳುಗಿಸಲಿದೆ ಇಂಟೆಲ್‌ ಸೆಕ್ಯೂರಿಟಿ ಫೇಲ್: ವಿಶ್ವದ ಎಲ್ಲಾ PC ಗಳು ಅಪಾಯದಲ್ಲಿ..!

ಸದ್ಯ ಈ ಆಯ್ಕೆಯೂ ಪರೀಕ್ಷೆಯ ಹಂತದಲ್ಲಿದೆ ಎನ್ನಲಾಗಿದ್ದು, ಇದಕ್ಕಾಗಿ ಕೆಲವೇ ಕೆಲವು ಮಂದಿ ಬಳಕೆದಾರರಿಗೆ ಈ ಅವಕಾಶವನ್ನು ಮಾಡಿಕೊಡಲಾಗಿದ್ದು, ಇದು ಯಶಸ್ವಿಯಾದಲ್ಲಿ ಇತರೇ ಬಳಕೆದಾರರಿಗೂ ಇದು ಶೀಘ್ರವೇ ಲಭ್ಯವಾಗಲಿದೆ ಎನ್ನಲಾಗಿದೆ. ಈ ಮೂಲಕ ಇನ್ ಸ್ಟಗ್ರಾಮ್ ಸ್ಟೋರಿಗಳು ಮತ್ತು ವಾಟ್ಸ್ಆಪ್ ಸ್ಟೇಟಸ್ ಗಳು ಒಂದಕ್ಕೊಂದು ವರ್ಗಾವಣೆಯಾಗಲಿದೆ.

English summary
Facebook appears to be looking forward to introduce an option that will let users to share their Instagram Stories on WhatsApp and use the same as WhatsApp Status. A recent media report claims that this feature is under testing and it could be an attempt by Facebook to hike the engagement of users and overall traffic.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot