Home
Apps

ಇನ್ಸಸ್ಟ್ರಾಗಮ್ ನಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡಿದೆ..! ನಿಮಗೆ ಗೊತ್ತೇ..?

ಚಾಟ್ ಮಾಡುವವರು ಸಹ ಇನ್ಸಸ್ಟ್ರಾಗಮ್ ನಲ್ಲಿ ಹೆಚ್ಚು ಆಕ್ಟಿವ್ ಆಗಲಿ ಎನ್ನುವ ಕಾರಣಕ್ಕೆ ಈ ಹೊಸ ಆಪ್ಡೇಟ್ ನಲ್ಲಿ ಚಾಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

By Precilla Dias

ಸಾಮಾಜಿಕ ಜಾಲತಾಣ ಫೇಸ್ ಬುಕ್ ಮಾಲೀಕತ್ವದ ಇನ್ಸಸ್ಟ್ರಾಗಮ್ ಬಳಕೆದಾರರ ಸ್ನೇಹಿಯಾಗುವ ಕಾರಣಕ್ಕಾಗಿ ತನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ಮುಂದಾಗಿದೆ. ಸದ್ಯ ಹೊಸದಾಗಿ ದೊರೆತಿರುವ ಆಪ್ಡೇಟ್ ನಲ್ಲಿ ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಾಗಿದೆ.

ಇನ್ಸಸ್ಟ್ರಾಗಮ್ ನಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡಿದೆ..!

ಕಲೆಕ್ಷನ್ಸ್, ನ್ಯೂ ಫೇಸ್ ಫಿಲ್ಟರ್, ರಿವೈಂಡ್ ಆಯ್ಕೆಗಳನ್ನು ಹೊಸ ಆಪ್ಡೇಟ್ ನಲ್ಲಿ ನೀಡಲಾಗಿದ್ದು, ಅಲ್ಲದೇ ಹ್ಯಾಷ್ ಟ್ಯಾಗ್ ಮತ್ತು ಸ್ಟೋರಿಗಳಿಗೆ ಲೋಕೆಷನ್ ನೀಡುವ ಆಯ್ಕೆಯನ್ನು ಮಾಡಿಕೊಡಲಾಗಿದೆ. ಇಲ್ಲದೇ ಡೈರೆಕ್ಟ್ ಮೇಸೆಜ್ ಮಾಡುವ ಆಯ್ಕೆಯಲ್ಲೂ ಬದಲಾವಣೆಯನ್ನು ಮಾಡಿದೆ.

ಹೊಸ ಆಪ್ಡೇಟ್ ನಲ್ಲಿ ಪ್ರೈವೆಟ್ ಚಾಟ್ ನಲ್ಲಿಯೂ ಲಿಂಕ್ ಗಳನ್ನು ಎಂಬೆಡ್ ಮಾಡಬಹುದಾಗಿದೆ. ಅಲ್ಲದೇ ಲ್ಯಾಂಡ್ ಸ್ಕೆಪ್ ಹಾಗೂ ಪ್ರೋರ್ಟೆಟ್ ಫೋಟೋ ವಿಡಿಯೋ ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಇನ್ಸಸ್ಟ್ರಾಗಮ್ ನಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡಿದೆ..!

ಅಲ್ಲದೇ ಯಾವುದೇ ವಿಡಿಯೋ ಮತ್ತು ಫೋಟೋವನ್ನು ಕ್ರಾಪ್ ಮಾಡದೇ ಕಳುಹಿಸಲು ಬಹುದಾಗಿದೆ. ಅಲ್ಲದೇ ಹಿಂದಿಗಿಂತ ವೇಗವಾಗಿ ಫೋಟೋ ವಿಡಿಯೋವನ್ನು ಸೆಂಡ್ ಮಾಡಬಹುದಾಗಿದೆ.

ನಿಮ್ಮ ಕಂಪ್ಯೂಟರ್ ನಲ್ಲಿರುವ BOIS ಬಗ್ಗೆ ನಿಮಗೆ ಎಷ್ಟು ಗೊತ್ತು..?

ಬರಿ ಫೋಟೋ-ವಿಡಿಯೋ ಮಾತ್ರವಲ್ಲದೇ ಪ್ರೈವೆಟ್ ಚಾಟ್ ನಲ್ಲಿ ಲಿಂಕ್ ಗಳನ್ನು ಕಳುಹಿಸಬಹುದಾಗಿದೆ. ಅದು ನೀವು ಕಳುಹಿಸಿದ ಲಿಂಕ್ನಲ್ಲಿರುವ ವಿವರಗಳನ್ನು ಸಹ ತೋರಿಸಲಿದೆ. ಈ ಹೊಸ ಆಯ್ಕೆಯೂ ಸದ್ಯ ಕೇವಲ ಐಎಸ್ಓ ಬಳಕೆದಾರಿಗೆ ಮಾತ್ರವೇ ಲಭ್ಯವಿದ್ದು, ಶೀಘ್ರವೇ ಆಂಡ್ರಾಯ್ಡ್ ಬಳಕೆದಾರರಿಗೂ ದೊರೆಯಲಿದೆ.

ಒಟ್ಟಿನಲ್ಲಿ ಚಾಟ್ ಮಾಡುವವರು ಸಹ ಇನ್ಸಸ್ಟ್ರಾಗಮ್ ನಲ್ಲಿ ಹೆಚ್ಚು ಆಕ್ಟಿವ್ ಆಗಲಿ ಎನ್ನುವ ಕಾರಣಕ್ಕೆ ಈ ಹೊಸ ಆಪ್ಡೇಟ್ ನಲ್ಲಿ ಚಾಟಿಂಗ್ ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.

Best Mobiles in India

English summary
Instagram's new update will add new features to its Direct messaging service.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+