ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಇನ್ಮುಂದೆ ಹಾಡನ್ನು ಸೇರಿಸಿ..! ಸಂಗೀತ ಪ್ರಿಯರಿಗೆ ಹೊಸ ಫೀಚರ್!

By GizBot Bureau
|

ಇದು ಮ್ಯೂಸಿಕ್ ಪ್ರಿಯರಿಗೆ ಇನ್ಸ್ಟಾಗ್ರಾಂ ನೀಡುತ್ತಿರುವ ಸಿಹಿಸುದ್ದಿ. ಹಾಡುಗಳನ್ನು ಕೇಳಲು ಇಚ್ಛಿಸುವವರಿಗೆ ಅಂತರ್ಜಾಲವು ಎಷ್ಟು ಅವಕಾಶಗಳನ್ನು ಕಲ್ಪಿಸಿಕೊಟ್ಟರೂ ಅದು ಅವರಿಗೆ ಸಂತೋಷ ಕೊಡುವ ವಿಚಾರವೇ ಆಗಿರುತ್ತದೆ. ಹಾಗೆಯೇ ಈಗ ಫೇಸ್ ಬುಕ್ ಮಾಲೀಕತ್ವದ ಇನ್ಸ್ಟಾಗ್ರಾಂ ತನ್ನ ಸ್ಟೋರೀಸ್ ನಲ್ಲಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಕಟೆಂಟ್ ಗೆ ಸೌಂಡ್ ಟ್ರ್ಯಾಕ್ ಗಳನ್ನು ಲೈಬ್ರರಿಯಿಂದ ಆಯ್ಕೆ ಮಾಡಿ ಹಾಡನ್ನು ಸೇರಿಸಲು ಅವಕಾಶ ನೀಡುತ್ತಿದೆ.

ಈ ಹೊಸ ವೈಶಿಷ್ಟ್ಯದ ಒಂದು ಭಾಗವಾಗಿ “ಮ್ಯೂಸಿಕ್” ಐಕಾನ್ ಒಂದನ್ನು ಸ್ಟೋರೀಸ್ ನ ರೆಕಾರ್ಡ್ ಬಟನ್ ನ ಕೆಳಗೆ ಕಾಣುವಂತೆ ಮಾಡಲಾಗಿದ್ದು, ಬಳಕೆದಾರರು ನಿರ್ದಿಷ್ಟ ಹಾಡಿಗಾಗಿ ಹುಡುಕಾಡಿ, ಮೋಡ್ ಮುಖಾಂತರ ಬ್ರೌಸ್ ಮಾಡಿ, ಜನಪ್ರಿಯವಾದ ಹಾಡನ್ನು ಆಯ್ಕೆ ಮಾಡಬಹುದು ಇಲ್ಲವೇ ಪ್ಲೇ ಬಟನ್ ಒತ್ತಿ ಪ್ರೀವ್ಯೂ ಅಥವಾ ಪೂರ್ವ ವೀಕ್ಷಣೆಯನ್ನು ಕೂಡ ಮಾಡಬಹುದಾಗಿದೆ. ಇದನ್ನು ಸ್ವತಃ ಇನ್ಸ್ಟಾಗ್ರಾಂ ತಿಳಿಸಿದೆ.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಇನ್ಮುಂದೆ ಹಾಡನ್ನು ಸೇರಿಸಿ..!

ಆಯ್ಕೆ ಮಾಡಿದ ಹಾಡು, ಮುಂದುವರಿಸಲು ಮತ್ತು ರಿವೈಂಡ್ ಮಾಡಿ ಆಲಿಸಲು ಕೂಡ ಬಳಕೆದಾರರಿಗೆ ಆಯ್ಕೆಯನ್ನು ನೀಡಲಾಗಿದ್ದು, ತಮ್ಮ ಸ್ಟೋರಿಗೆ ಹಾಡಿನ ಯಾವ ಸಾಲುಗಳು ಹೊಂದಿಕೊಳ್ಳುತ್ತದೋ ಅದಷ್ಟನ್ನೇ ಬೇಕಿದ್ದರೂ ಆಯ್ಕೆ ಮಾಡಿ ಹಾಕುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಪ್ರತಿದಿನ ಇನ್ಸ್ಟಾಗ್ರಾಮ್ ನ ಸ್ಟೋರೀಸ್ ಅನ್ನು ಸುಮಾರು 400 ಮಿಲಿಯನ್ ಬಳಕೆದಾರರು ಬಳಸುತ್ತಿದ್ದಾರೆ. ನಾವು ನಮ್ಮ ಹೊಸ ವೈಶಿಷ್ಟ್ಯವನ್ನು ಬಳಕೆದಾರರಿಗೆ ಕರುಣಿಸಲು ಕಾತರರಾಗಿದ್ದೇವೆ ಮತ್ತು ಇದು ಬಳಕೆದಾರರಿಗೆ ತಮ್ಮ ಸ್ನೇಹಿತರು ಮತ್ತು ಹಿಂಬಾಲಕರನ್ನು ಇನ್ನಷ್ಟು ಹತ್ತಿರವಾಗಲು ಸಹಕಾರಿಯಾಗಿದೆ ಎಂದು ಹೇಳುತ್ತಿದೆ ಇನ್ಸ್ಟಾಗ್ರಾಂ. ನೋಡುಗರು ಸಾಂಗ್ ನ ಮೇಲೆ ಸ್ಟಿಕ್ಕರ್ ಮತ್ತು ಕಲೆಗಾರನ ಹೆಸರು, ಹಾಡಿನ ಟೈಟಲ್ ಇವುಗಳನ್ನು ಸ್ಟೋರಿ ನೋಡುವಾಗ ಗಮನಿಸಬಹುದಾಗಿದೆ.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಇನ್ಮುಂದೆ ಹಾಡನ್ನು ಸೇರಿಸಿ..!

ಇನ್ನು ಪ್ರತಿದಿನ ಅವರ ಮ್ಯೂಸಿಕ್ ಲೈಬ್ರರಿಗೆ ಹಾಡುಗಳೂ ಕೂಡ ಸೇರಿಕೊಳ್ಳುತ್ತವೆಯಂತೆ. ಸದ್ಯ ಮ್ಯೂಸಿಕ್ ಸ್ಟಿಕ್ಕರ್ ಇನ್ಸ್ಟಾಗ್ರಾಂ ನ ಒಂದು ಭಾಗವಾಗಿ ವರ್ಷನ್ 51 ರಲ್ಲಿ ಸಿಗಲಿದೆ.

ಸದ್ಯಕ್ಕೆ ios ನಲ್ಲಿ ಮಾತ್ರ ಈ ಅವಕಾಶವಿದ್ದು ಆಂಡ್ರಾಯ್ಡ್ ನಲ್ಲಿ ಸದ್ಯದಲ್ಲೇ ಬರಲಿದೆ ಎಂದು ಇನ್ಸ್ಟಾಗ್ರಾಂ ತಿಳಿಸಿದೆ. ಒಟ್ಟಿನಲ್ಲಿ ಇನ್ಸ್ಟಾಗ್ರಾಂ ಮತ್ತು ಹಾಡುಗಳು ಇವೆರಡನ್ನೂ ಪ್ರೀತಿಸುವ ಮಂದಿಗೆ ಇದು ನಿಜಕ್ಕೂ ಖುಷಿಯ ವಿಚಾರವೇ ಆಗಿದೆ.

Best Mobiles in India

Read more about:
English summary
Instagram users can now add soundtrack to 'Stories'. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X