ನಿಮ್ಮ ಕಷ್ಟಕಾಲದಲ್ಲಿ ಸಾಲ ನೀಡಿ ನೆರವಾಗುವ ಆಪ್‌ಗಳಿವು!!
ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ತಕ್ಷಣ ಮೊಬೈಲ್ ಕೊಳ್ಳಬೇಕು ಎಂಬ ಆಸೆ. ಆದರೆ ತಕ್ಷಣಕ್ಕೆ ದುಡ್ಡು ಕೊಡುವವರು ಯಾರು? ಈ ರೀತಿಯ ಉಪಕರಣಗಳನ್ನು ಖರೀದಿಸುವು ದಕ್ಕಾಗಿಯೇ ಪೇ ಸೆನ್ಸ್ ಎಂಬ ಸಂಸ್ಥೆಯ ಆಪ್ ಸಾಲ ನೀಡುತ್ತಿದೆ. ಮೊಬೈಲ್ ಕೊಳ್ಳುವುದಕ್ಕೆ ಸಾಲ ಬೇಕು ಎಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ಈ ಸಂಸ್ಥೆ ಸಾಲ ಮಂಜೂರು ಮಾಡುತ್ತದೆ.
ಹೀಗೆಯೇ, ಕೆಲವೊಮ್ಮೆ ನಮಗೆ ಬರುವ ಅಕಸ್ಮಾತ್ ತೊಂದರೆಗಳಿಂದ ಕೂಡಲೇ ಹಣ ಬೇಕಾಗಿರುತ್ತದೆ. ಆದರೆ, ನಾವು ಗಳಿಸಿ ಕೂಡಿಟ್ಟ ಈ ಹಣ ಸಾಕಗಬಹುದು. ಇನ್ನು ಹಣ ಎಲ್ಲಿಯೂ ಸಿಗದೇ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ದುಬಾರಿ ಬಡ್ಡಿಗೆ ಸಾಲ ಪಡೆಯಬೇಕಾಗುತ್ತದೆ ಅಲ್ಲವೇ?. ಇಂತಹ ಸಂದರ್ಭಗಳಲ್ಲಿ ಸಾಲದ ಅಗತ್ಯ ಪೂರೈಸಲೆಂದೇ ಆನ್‌ಲೈನ್ ಮತ್ತು ಕಿರುತಂತ್ರಾಂಶ ಆಧಾರಿತ ಸಂಸ್ಥೆಗಳು ಈಗ ಸಾಲ ನೀಡಲು ಹೊರಟಿವೆ.

ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವ ಈ ಆಪ್‌ಗಳು ಸಾಲ ಪಡೆಯುವವರ ಸಾಲ ಮರು ಪಾವತಿ ಸಾಮರ್ಥ್ಯ ಆಧರಿಸಿಯೇ ಸಾಲ ನೀಡುತ್ತವೆ.ಆಧಾರ್, ಪ್ಯಾನ್ ಕಾರ್ಡ್ ನೀಡಿ ದಾಖಲೆಗಳನ್ನು ಒದಗಿಸಿದರೆ ಸಾಲವು ಬ್ಯಾಂಕ್ ಖಾತೆಗೆ ಬಂದು ಬೀಳುವ ಆಯ್ಕೆಯನ್ನು ಈ ಆಪ್‌ಗಳು ಮಾಡುತ್ತವೆ.ಹಾಗಾಗಿ. ಕಷ್ಟಕಾಲದಲ್ಲಿ ನೆರವಾಗಬಹುದಾದ ಇಂತಹ ಹೊಸ ಸಾಲ ಆಪ್ ಮೂಲಕ ಸಾಲ ನೀಡುವ ಸಂಸ್ಥೆಗಳು ಯಾವುವು? ಹೇಗೆ ಕಾರ್ಯನಿರ್ವಹಿಸುತ್ತವೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಎಜ್ ಕ್ರೆಡ್
ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಇತ್ಯಾದಿ ವಸ್ತುಗಳನ್ನು ಕೊಳ್ಳುವುದಕ್ಕೆ ಸಾಲ ಕೊಡುವ ವೆಬ್‌ಸೈಟ್ ಎಜ್ ಕ್ರೆಡ್. ಈ ಸಂಸ್ಥೆಯ ವೆಬ್‌ಸೈಟ್‌ಗೆ ಹೋಗಿ ಆಧಾರ್ ಕಾರ್ಡ್ ಮೂಲಕ ನೊಂದಣಿ ಮಾಡಿಕೊಂಡರೆ ಸಾಲ ಸೌಲಭ್ಯ ಸಿಗಲಿದೆ.ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿದರೆ ಸಾಕು ನಿಮ್ಮ ವಿವರಗಳನ್ನೆಲ್ಲಾ ಸಂಸ್ಥೆಯೇ ತುಂಬಿಸಿಕೊಳ್ಳುತ್ತದೆ. ಬಡ್ಡಿದರವೂ ಕಡಿಮೆ ಇರುವುದರಿಂದ ಈ ಸಂಸ್ಥೆ ಜನಪ್ರಿಯವಾಗುತ್ತಿದೆ.

ಮನಿಟ್ಯಾಪ್
ಭಾರತದಲ್ಲೇ ಮೊದಲು ಆಪ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಲು ಶುರುಮಾಡಿದ ಮನಿಟ್ಯಾಪ್ ಕೇವಲ 4 ನಿಮಿಷಗಳಲ್ಲಿ ಪರ್ಸನಲ್ ಲೋನ್ ಅನ್ನು ಒದಗಿಸುತ್ತದೆ. ವಾರ್ಷಿಕ 13 ರಿಂದ 24 ಪರ್ಸೆಂಟ್ ಬಡ್ಡಿದರದಲ್ಲಿ ಮನಿಟ್ಯಾಪ್ ಆಪ್ ಮೂಲಕ ಸಾಲ ಪಡೆದುಕೊಳ್ಳಬಹುದು. ನಿಮಗೆ ಲೋನ್ ಜೊತೆಗೆ ಕ್ರೆಡಿಟ್ ಕಾರ್ಡ್ ಅನ್ನು ಸಹ ಈ ಸಂಸ್ಥೆ ನೀಡಲಿದೆ. ಈ ಆಪ್‌ನಲ್ಲಿ 5 ಲಕ್ಷ ರೂ.ವರೆಗೂ ಲೋನ್ ಪಡೆಯಬಹುದು.

ಲೋನ್ ಟ್ಯಾಪ್
ಉದ್ಯೋಗಿಗಳಿಗೆ ಮಾತ್ರ ಸಾಲ ಒದಗಿಸುವ ಆಪ್ ಆಧಾರಿತ ನವೋದ್ಯಮ ಇದಾಗಿದ್ದು, ಇಎಮ್‌ಐ ಫ್ರೀ ಲೋನ್ ಸಾಲ ಸೌಲಭ್ಯ ನೀಡುತ್ತದೆ. ಅಂದರೆ ಪ್ರತಿ ತಿಂಗಳು ಕಡ್ಡಾಯವಾಗಿ ಕಂತಿನ ರೂಪದಲ್ಲಿ ಸಾಲ ಮರುಪಾವತಿಸುವ ಅಗತ್ಯ ಇಲ್ಲ. ಹಣ ಹೊಂದಿಸಿಕೊಂಡು ಬೇಕೆಂದಾಗ ಸಾಲ ಮರುಪಾವತಿಸಬಹುದು. ಆದರೆ, ಸಾಲ ಪಡೆದ ಐದು ವರ್ಷಗಳಲ್ಲಿ ಹಣ ಪಾವತಿಸಬೇಕು.

ಅರ್ಲಿ ಸ್ಯಾಲರಿ
ತಿಂಗಳ ಕೊನೆ ಬಂದರೆ ಹಣ ಖಾಲಿಯಾಗಿ ಉದ್ಯೋಗಿಗಳು ಪಡುವ ಕಷ್ಟ ನೋಡಿ ಹುಟ್ಟಿರುವ ಆಪ್ ಆಧಾರಿತ ಉದ್ಯಮ ಇದು.! ಸಂಬಳ ಖಾತೆಗೆ ಜಮೆಯಾಗುವುದಕ್ಕೆ ಇನ್ನೂ ಹತ್ತು ದಿನ ಕಾಯಬೇಕು. ಆದರೆ ಸದ್ಯಕ್ಕೆ ಖರ್ಚಿಗೆ ಹಣ ಇರುವುದಿಲ್ಲ. ತುರ್ತು ಪರಿಸ್ಥಿತಿ ಎದುರಾದರೆ ಇನ್ನೂ ಕಷ್ಟ. ಈ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭವಾದದ್ದೇ ‘ಅರ್ಲಿ ಸ್ಯಾಲರಿ' ಸಂಸ್ಥೆ. ತುರ್ತು ಸಂದರ್ಭಗಳಲ್ಲಿ ನಮ್ಮ ಸಂಬಳದ ಶೇ 50ರಷ್ಟು ಹಣವನ್ನು ಈ ಆಪ್ ಮೂಲಕ ಪಡೆಯಬಹುದು. ನಿಮ್ಮ ಸಂಬಳಕ್ಕೆ ತಕ್ಕಂತೆ ಈ ಆಪ್ ಸಾಲ ನೀಡುತ್ತದೆ.

ಪೇ ಸೆನ್ಸ್
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಲ ನೀಡುವ ಪೇ ಸೆನ್ಸ್ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಅಸಲು ಸಮೇತ ಬಡ್ಡಿ ವಸೂಲಿ ಮಾಡುತ್ತದೆ. 5,000ದಿಂದ 1 ಲಕ್ಷದ ವರೆಗೆ ಸಾಲ ನೀಡುವ ಈ ಪೇ ಸೆನ್ಸ್ ಹಣ ನಿಮ್ಮ ಕೈಸೇರಲು ಒಂದು ವಾರ ಬೇಕಾಗಬಹುದು. ಇದು ನಿಮಗೆ ಮೊಬೈಲ್ ಖರೀದಿಸಲು ಸಹ ಸಾಲ ನೀಡುತ್ತದೆ. ಆದರೆ,ಈ ಸಾಲ ನಿಮ್ಮ ಕೈ ಸೇರಲು ಒಂದು ವಾರ ಬೇಕಾಗಬಹುದು.

ಕಿಸ್ತ್
ಕೆಲವೊಮ್ಮೆ ದಾಖಲೆಗಳಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೂ ಬ್ಯಾಂಕ್‌ನವರು ಸಾಲ ನೀಡದೇ ಇರಬಹುದು. ಇಂತಹ ಸಂದರ್ಭಗಳಲ್ಲಿ ಸಾಲದ ಅಗತ್ಯ ಪೂರೈಸಲೆಂದೇ ಆನ್‌ಲೈನ್ ಮತ್ತು ಕಿರುತಂತ್ರಾಂಶ ಆಧಾರಿತ ಸಂಸ್ಥೆ ಕಿಸ್ತ್ ಹುಟ್ಟಿಕೊಂಡಿದೆ. ಲ್ಯಾಪ್‌ಟಾಪ್, ಮೊಬೈಲ್‌ಫೋನ್ ಕೊಳ್ಳುವುದಕ್ಕೂ ಇಲ್ಲಿ ಸಾಲ ಪಡೆಯಬಹುದಾಗಿದ್ದು, ಇಲ್ಲಿಯವರೆಗೂ 9 ಕೋಟಿ ಜನರಿಗೆ ಸುಮಾರು 17 ಕೋಟಿ ವರೆಗೆ ಈ ಸಂಸ್ಥೆ ಸಾಲ ನೀಡಿದೆ.


Click it and Unblock the Notifications