Home
Apps

ಪ್ರಿಕೆಜಿ ಮಕ್ಕಳಿಗೆ ಯುಟ್ಯೂಬ್ ತೋರಿಸುವ ಬದಲು ಈ ಆಪ್ ಇನ್ಸ್ಟಾಲ್ ಮಾಡಿಕೊಡಿ

By Gizbot Bureau

ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುವುದು ತಪ್ಪು ಎಂಬುದೇನೋ ನಿಜ. ಆದರೆ ಮಕ್ಕಳು ಕೇಳುತ್ತಾರೆಯೇ? ಈಗಿನ ಮಕ್ಕಳಂತೂ ಹುಟ್ಟುತ್ತಲೇ ಮೊಬೈಲ್ ರಿಂಗ್ ಟೋನ್ ಗಳಿಗೆ ಪ್ರತಿಕ್ರಿಯೆ ನೀಡುವ ಅಭ್ಯಾಸ ಹೊಂದಿರುತ್ತಾರೆ. ಇನ್ನು ಸ್ವಲ್ಪ ದೊಡ್ಡವರಾಗುತ್ತಲೇ ತಮ್ಮ ಪುಟಾಣಿ ಕೈಗಳಿಂದ ಯುಟ್ಯೂಬ್ ಜಾರಿಸಿ ಜಾರಿಸಿ ಒಂದಾದ ಮೇಲೆ ಒಂದು ವೀಡಿಯೋ ನೋಡುವುದನ್ನು ಪೋಷಕರು ಹೇಳಿಕೊಡದೇ ಇದ್ದರೂ ಕಲಿತು ಬಿಡುವಷ್ಟು ಬುದ್ದಿವಂತರು ಈಗಿನ ಮಕ್ಕಳು. ಎಷ್ಟಂದ್ರು 20 ದಶಕದಲ್ಲಿರುವ ಕೂಸುಗಳಲ್ಲವೇ?

ಮೊಬೈಲ್

ಮೊಬೈಲ್ ಮುಟ್ಟಬೇಡಿ, ಮೊಬೈಲ್ ತೆಗಿಯಬೇಡಿ ಎಂದು ಹೊಡೆದು ಬಡಿದರೂ ಕೇಳದ ಈಗಿನ ಮಕ್ಕಳಿಗೆ ಮೊಬೈಲ್ ಕೊಡದೇ ಇರುವುದಕ್ಕೆ ಪೋಷಕರಿಗೂ ಸಾಧ್ಯವಾಗುವುದಿಲ್ಲ. ಆದರೆ ಯಾವುದು ಮಕ್ಕಳಿಗೆ ಸೂಕ್ತ ಎಂಬುದನ್ನು ಪೋಷಕರು ಸ್ವಲ್ಪ ಅರಿತರೆ ಒಳ್ಳೆಯದು. ಯುಟ್ಯೂಬ್ ನಲ್ಲಿ ಒಂದಾಂದ ಮೇಲೆ ಒಂದರಂತೆ ಬರುವ ಯಾವ್ಯಾವುದೋ ವೀಡಿಯೋಗಳನ್ನು ತೋರಿಸುವ ಬದಲು ಅವರ ಕಲಿಕೆ ಅನುಕೂಲವಾಗುವಂತ ಆಪ್ ಗಳಿಂದ ಅವರನ್ನು ಇನ್ನಷ್ಟು ಚುರುಕುಗೊಳಿಸುವುದು ಒಳಿತು. ಅಂತಹ ಒಂದು ಆಪ್ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ.

ಪ್ರಿಕೆಜಿ

ನಿಮ್ಮ ಮಗು ಪ್ರಿಕೆಜಿಗೆ ತೆರಳುತ್ತಿದ್ದರೆ ಖಂಡಿತ ಈ ಆಪ್ ಬಹಳ ಅನುಕೂಲಕರವಾಗಿರುತ್ತದೆ. ಇದರಲ್ಲಿರುವ ಟಾಸ್ಕ್ ಗಳು ಮಕ್ಕಳ ಕಲಿಕೆಗೂ, ಅವರ ಏಕಾಗ್ರತೆಯ ಮಟ್ಟವನ್ನು ಅಧಿಕಗೊಳಿಸುವುದಕ್ಕೂ ಕೂಡ ನೆರವು ನೀಡುತ್ತದೆ. ಪ್ಲೇ ಸ್ಟೋರ್ ನಲ್ಲಿ ABC ಪ್ರೀಸ್ಕೂಲ್ ಕಿಡ್ಸ್ ಟ್ರೇಸಿಂಗ್ ಮತ್ತು ಫೋನಿಕ್ಸ್ ಲರ್ನಿಂಗ್ ಗೇಮ್ ಎಂದಿರುವ ಗುಂಜನ್ ಆಪ್ ಸ್ಟುಡಿಯೋಸ್ ಆಪ್ ನ್ನು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ.

ಬಹಳಷ್ಟು ಆಕ್ಟಿವಿಟಿಗಳಿಗೆ ಅವಕಾಶ ನೀಡುವ ಆಪ್:

ಬಹಳಷ್ಟು ಆಕ್ಟಿವಿಟಿಗಳಿಗೆ ಅವಕಾಶ ನೀಡುವ ಆಪ್:

ಇದರಲ್ಲಿ ಲೈನ್ಸ್, ಆಲ್ಫಾಬೆಟ್ಸ್, ನಂಬರ್ಸ್, ಶೇಪ್, ಕಲರ್ ಮಾಡುವುದು, ಚಿತ್ರ ಬಿಡಿಸುವುದು, ಶೇಪ್ ಗಳನ್ನು ಗುರುತಿಸುವುದು ಇತ್ಯಾದಿ ಹಲವು ಆಕ್ಟಿವಿಟಿಗಳಿರುತ್ತದೆ. ಮಕ್ಕಳಿಗೆ ಪ್ರಿಕೆಜಿಯಲ್ಲಿ ಕಲಿಸಿಕೊಡಲಾಗುವ ಈ ಎಲ್ಲಾ ಟಾಸ್ಕ್ ಗಳು ಒಂದು ವೇಳೆ ಅವರು ಹೋವರ್ಕ್ ಬುಕ್ ನಲ್ಲಿ ಮಾಡದೇ ಇದ್ದರೂ ಖಂಡಿತ ಮೊಬೈಲ್ ನಲ್ಲಿ ಮಾಡಿ ಕಲಿತು ಬಿಡುತ್ತಾರೆ.

ದಾರಿ ಹುಡುಕಿಕೊಡಿ ಆಕ್ಟಿವಿಟಿ:

ದಾರಿ ಹುಡುಕಿಕೊಡಿ ಆಕ್ಟಿವಿಟಿ:

ಇಲಿಗೆ ಕೇಕ್ ತಿನ್ನುವುದಕ್ಕೆ ದಾರಿ ತೋರಿಸುವುದು, ಕೋಳಿಗೆ ಮೊಟ್ಟೆ ಬಳಿ ಹೋಗುವುದಕ್ಕೆ ದಾರಿ ತೋರಿಸುವುದು, ಹಕ್ಕಿಗೆ ತನ್ನ ಗೂಡಿನ ಬಳಿ ಹೋಗುವುದಕ್ಕೆ ದಾರಿ ತೋರಿಸುವುದು, ಮೊಲಕ್ಕೆ ಕ್ಯಾರೆಟ್ ಬಳಿ ಹೋಗಲು ದಾರಿ ತೋರಿಸುವುದು ಇಂತಹ ಆಕ್ಟಿವಿಟಿಗಳು ಪ್ರಿಕೆಜಿ ಮಕ್ಕಳಿಗೆ ಬಹಳ ಖುಷಿ ಕೊಡುತ್ತದೆ.

ಅಕ್ಷರ ತಿದ್ದಿಸುವಿಕೆ:

ಅಕ್ಷರ ತಿದ್ದಿಸುವಿಕೆ:

ಅಕ್ಷರ ಮುದ್ದುಮುದ್ದಾಗಬೇಕು ಎಂದರೆ ಮಕ್ಕಳು ಅತೀ ಹೆಚ್ಚು ಬಾರಿ ಅಕ್ಷರಗಳನ್ನು ಸರಿಯಾದ ರೇಖೆಗಳಿಗೆ ತಾಗಿಸಿ ಕಾಪಿ ರೈಟಿಂಗ್ ಮಾಡಬೇಕು. ಇಂತಹ ಆಕ್ಟಿವಿಟಿಗೂ ಕೂಡ ಈ ಆಪ್ ನಲ್ಲಿ ಅವಕಾಶವಿದೆ. ಅಕ್ಷರಗಳನ್ನು ಪದೇ ಪದೇ ತಿದ್ದಿದರೆ ಮಕ್ಕಳು ಬೇಗನೆ ಕಲಿಯುತ್ತಾರೆ. ಆದರೆ ಪುಸ್ತಕದಲ್ಲಿ ಮಾಡುವುದಕ್ಕೆ ಇಷ್ಟ ಪಡದ ಮಕ್ಕಳನ್ನು ಹೇಗೆ ತಾನೆ ಕೂರಿಸುವುದು, ಅಕ್ಷರ ತಿದ್ದಿಸುವುದು ಎಂದು ಚಿಂತಿಸಬೇಡಿ. ಈ ಆಪ್ ನಲ್ಲಿ ಅದಕ್ಕೂ ಕೂಡ ಅವಕಾಶವಿದೆ.

ಸಾಮಾನ್ಯ ಜ್ಞಾನ ಹೆಚ್ಚಿಸುವ ಮ್ಯಾಚ್ ಮಾಡುವ ಆಕ್ಟಿವಿಟಿ:

ಸಾಮಾನ್ಯ ಜ್ಞಾನ ಹೆಚ್ಚಿಸುವ ಮ್ಯಾಚ್ ಮಾಡುವ ಆಕ್ಟಿವಿಟಿ:

ಇನ್ನು ಪ್ರಿಕೆಜಿ ಮಕ್ಕಳಿಗೆ ಮ್ಯಾಚ್ ಮಾಡುವುದು ಎಂದರೆ ಬಹಳ ಇಷ್ಟವಾದ ಗೇಮ್ ಆಗಿರುತ್ತದೆ. ಆ ಗೇಮ್ ಕೂಡ ಈ ಆಪ್ ನಲ್ಲಿ ಲಭ್ಯವಿದೆ. ಕುದುರೆ ಏನನ್ನು ತಿನ್ನುತ್ತದೆ? ಮೊಲ ತಿನ್ನುವುದು ಏನನ್ನು? ಬೆಕ್ಕು ಏನನ್ನು ಸೇವಿಸುತ್ತದೆ? ದನ ವಾಸಿಸುವ ಜಾಗ ಯಾವುದು? ಕೋಳಿ ಮನೆ ಹೇಗಿರುತ್ತದೆ? ಗುಬ್ಬಚ್ಚಿ ಗೂಡು ಯಾವುದು?, ನಾಯಿ ಮರಿ ಹೇಗಿರುತ್ತದೆ? ಕೋಳಿ ಮರಿ ಹೇಗಿರುತ್ತದೆ? ಇತ್ಯಾದಿಗಳನ್ನು ಮ್ಯಾಚ್ ಮಾಡುವುದಕ್ಕೆ ಇರುವ ಟಾಸ್ಕ್ ಮಕ್ಕಳಿಗೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವುದೂ ಅಲ್ಲದೆ ಮೊಬೈಲ್ ನಲ್ಲಿ ಕಳೆದ ಸಮಯವು ಉಪಯೋಗಕ್ಕೆ ಬಂದಂತಾಗುತ್ತದೆ.

ಒಮ್ಮೆ ಇನ್ಸ್ಟಾಲ್ ಮಾಡಿ ಟ್ರೈ ಮಾಡಿ ನೋಡಿ. ನಿಮ್ಮ ಮಗು ಈ ಆಪ್ ನ್ನು ಇಷ್ಟ ಪಡುವುದರಲ್ಲಿ ಅನುಮಾನವೇ ಇಲ್ಲ.

Best Mobiles in India

English summary
Instead Of YouTube Download And Show This App To Pre KG Children
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+