ವಾಟ್ಸ್ಆಪ್ ಓಪನ್ ಮಾಡಲು ಮುಖ ತೋರಿಸಿದರೆ ಸಾಕು..!
ಸ್ಮಾರ್ಟ್ ಫೋನ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸುತ್ತಿರುವ ಆಪಲ್ ನಿರ್ಮಾಣದ ಐಫೋನ್ ಗಳು ಬಳಕೆದಾರರಿಗೆ ಭವಿಷ್ಯದ ತಂತ್ರಜ್ಞಾನ ಬಳಕೆಗೆ ನೀಡುತ್ತಿವೆ. ಇದೇ ಮಾದರಿಯಲ್ಲಿ ಕಾಣಿಸಿಕೊಂಡಿದ್ದ ಫೇಸ್ ಐಡಿ ಹೆಸರಿನ ಫೇಸ್ ಲಾಕ್ ತಂತ್ರಜ್ಞಾನವು ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಬದಲಾವಣೆಗೆ ಕಾರಣವಾಗಿತ್ತು.ಇದೇ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೊಸ ಮಾದರಿಯ ಸೇವೆಯೊಂದನ್ನು ಶೀಘ್ರವೇ ಆಪಲ್ ಬಳಕೆದಾರರು ಬಳಕೆ ಮಾಡಿಕೊಳ್ಳಬಹುದಾಗಿದೆ.
ಈಗಾಗಲೇ ಫೇಸ್ ಐಡಿಯನ್ನು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಫೇಸ್ ಲಾಕ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಹೆಚ್ಚಿನ ಪ್ರಮಾಣದ ಸೆಕ್ಯೂರಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ವಿಶ್ವದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯನ್ನು ಫೇಸ್ ಐಡಿ ಬಳಕೆ ಮಾಡಿಕೊಂಡು ನೀಡಲಿದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ವಾಟ್ಸ್ಆಪ್ ಹೆಚ್ಚು ಬಳಕೆದಾರರನ್ನು ಸೆಳೆಯುತ್ತಿದೆ. ಇದೇ ಸಂದರ್ಭದಲ್ಲಿ ಅವರಿಗೆ ಹೊಸ ಆಯ್ಕೆಗಳನ್ನು ತಪ್ಪದೇ ನೀಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ಆಪಲ್ ನಲ್ಲಿ ವಾಟ್ಸ್ ಆಪ್ ಬಳಕೆ ಮಾಡಿಕೊಳ್ಳುವವರಿಗೆ ಫೇಸ್ ಲಾಕ್ ಅನ್ನು ಬಳಕೆಗೆ ನೀಡಲು ಮುಂದಾಗಿದೆ. ಇದಕ್ಕಾಗಿ ಆಪ್ಲ ನೀಡಿರುವ ಫೇಸ್ ಐಡಿ ಸೇವೆಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.
ಆಪಲ್ ನಲ್ಲಿ ಸೆಕ್ಯೂರಿಟಿಗಾಗಿ ಫೇಸ್ ಲಾಕ್ ಅನ್ನು ಬಳಕೆದಾರರಿಗೆ ನೀಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿರುವ ವಾಟ್ಸ್ ಆಪ್, ಶೀಘ್ರವೇ ಈ ಸೇವೆಯನ್ನು ಆಂಡ್ರಾಯ್ಡ್ ಬಳಕೆದಾರರಿಗೆ ನೀಡಲಿದೆ ಎನ್ನುವ ಮಾತು ಕೇಳಿ ಬಂದಿದೆ. ಒಮ್ಮೆ ಆಪಲ್ ನಲ್ಲಿ ಇದು ಸಕ್ಸಸ್ ಆದ ನಂತರದಲ್ಲಿ ಮಾತ್ರವೇ ಎನ್ನಬಹುದಾಗಿದೆ.
ಸುಮಾರು 1 ಬಿಲಿಯನ್ ಗೂ ಅಧಿಕ ಮಂದಿ ವಾಟ್ಸ್ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿಯೇ ದಿನಕ್ಕೊಂದು ಹೊಸ ಮಾದರಿಯ ಆಪ್ ಡೇಟ್ ಅನ್ನು ಬಳಕೆ ದಾರರಿಗೆ ನೀಡುತ್ತಿದೆ. ಈಗಾಗಲೇ ಹಲವು ಹೊಸ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಇದರೊಂದಿಗೆ ಫೇಸ್ ಲಾಕ್ ಆಯ್ಕೆಯೂ ಇನ್ನಷ್ಟು ಮಂದಿ ಬಳಕೆದಾರರಿಗೆ ವಾಟ್ಸ್ ಆಪ್ ಬಳಸಲು ಆರಂಭಿಸುವಂತೆ ಮಾಡಲಿದೆ ಎನ್ನುವ ಮಾತು ಕೇಳಿ ಬಂದಿದೆ.


Click it and Unblock the Notifications








