Subscribe to Gizbot

ಐಪಿಎಲ್ ಸ್ಪೇಷಲ್: ಆಪ್ ನಲ್ಲಿ ಕ್ರಿಕೆಟ್ ಆಡಿ ಹಣ ಮಾಡಿ..!

Posted By: Lekhaka

ಭಾರತದಲ್ಲಿ ಸದ್ಯ ಐಪಿಎಲ್ ಹವಾ ಜೋರಾಗಿದ್ದು, ಇದರ ಲಾಭವನ್ನು ಪಡೆದುಕೊಳ್ಳಲು ಪ್ರತಿ ಯೊಬ್ಬರು ಮುಂದಾಗುತ್ತಿದ್ದಾರೆ. ಆದರೆ ಕೆಲವರು ಮಾತ್ರವೇ ಸಾಮಾನ್ಯರಿಗೂ ಲಾಭ ಮಾಡಿಕೊಡಲು ಮುಂದಾಗಿದ್ದಾರೆ. ಇದೇ ಮಾದರಿಯಲ್ಲಿ ಈ ಬಾರಿ ಐಪಿಎಲ್ ಮ್ಯಾಚ್ ಗಳನ್ನು ನೋಡುತ್ತಲೇ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡಲು ಹಲವು ಆಪ್ ಗಳ ಮುಂದಾಗಿವೆ.

ಐಪಿಎಲ್ ಸ್ಪೇಷಲ್: ಆಪ್ ನಲ್ಲಿ ಕ್ರಿಕೆಟ್ ಆಡಿ ಹಣ ಮಾಡಿ..!

ಹಾಟ್ ಸ್ಟಾರ್, ಜಿಯೋ ಸೇರಿದಂತೆ ಹಲವು ಆಪ್ ಗಳು ಬಳಕೆದಾರರಿಗೆ ಕ್ರಿಕೆಟ್ ಮ್ಯಾಚ್ ನೋಡುವುದರ ಜೊತೆಗೆ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿವೆ. ಇದರಲ್ಲಿ ಕೂಪನ್ ಗಳು, ಬಹುಮಾನಗಳು, ರಿಯಾಯಿತಿ, ಡೇಟಾ ಸೇರಿದಂತೆ ಹಲವನ್ನು ಪಡೆದುಕೊಳ್ಳಹುದಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿಯ ಐಪಿಎಲ್ ಹೆಚ್ಚು ಕಳೆಕಟ್ಟಿದೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಸೇವೆಯನ್ನು ಎಲ್ಲಾ ಸ್ಮಾರ್ಟ್ ಫೋನ್ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಜಿಯೋ ಸಿಮ್ ಇರಬೇಕಾದ ಅವಶ್ಯಕತೆ ಇಲ್ಲ. ಈ ಗೇಮ್ನಲ್ಲಿ ಮುಂದೆ ಪಂದ್ಯದಲ್ಲಿ ಏನಾಗಲಿದೆ ಎನ್ನುವುದನ್ನು ಊಹಿಸುವುದಾಗಿದೆ. ಸರಿಯಾಗಿ ಊಹಿಸಿದರೆ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಇದರಲ್ಲಿ ಮನೆ, ಕಾರು, ನಗದು ಬಹುಮಾನ, ಹೆಚ್ಚುವರಿ ಡೇಟಾಗಳು ಸೇರಿಕೊಂಡಿದೆ.

ಹಾಟ್ ಸ್ಟಾರ್:

ಈ ಬಾರಿ ಮೊಬೈಲ್ ಐಪಿಎಲ್ ನಡೆಯುತ್ತಿದ್ದು, ಹಾಟ್ ಸ್ಟಾರ್ ನಲ್ಲಿ ಮ್ಯಾಚ್ ನೋಡುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಮ್ಯಾಚ್ ನೋಡುವ ಸಂದರ್ಭದಲ್ಲಿ ಮುಂದೆನಾಗುತ್ತದೆ ಎಂಬುದನ್ನು ಊಹಿಸಿ, ವೋಚರ್, ಕೂಪನ್ ಗಳನ್ನು ಗೆಲ್ಲಬಹುದಾಗಿದೆ. ಇದು ಸಹ ಹೆಚ್ಚಿನ ಜನರನ್ನು ಸೆಳೆದಿದೆ.

ಡ್ರಿಮ್ 11:

ಇದು ಒಂದು ಮಾದರಿಯಲ್ಲಿ ನಿಮ್ಮದೇ ತಂಡವನ್ನು ರಚಿಸಿಕೊಳ್ಳಲು ಸಹಾಯ ಮಾಡಲಿದೆ. ಇದರಲ್ಲಿ ನಿಮ್ಮದೇ ತಂಡವನ್ನು ಕಟ್ಟಿ ಹಣವನ್ನು ಮಾಡಬಹುದಾಗಿದೆ. 2 ಕೋಟಿವರೆಗೂ ನಗದು ಬಹುಮಾನ ದೊರೆಯಲಿದೆ. ಮತ್ತು ಬಳಕೆದಾರರಿಗೆ ಕ್ರಿಕೆಟ್ ಕುತೂಹಲವನ್ನು ಹೆಚ್ಚಿಸುತ್ತದೆ.

ಐಪಿಎಲ್ ಫ್ಯಾಂಟಸಿ ಲೀಗ್:

ಇದು ಅಭಿಮಾನಿಗಳಿಗೆ ಮಾಡಲಾಗಿರುವ ಗೇಮ್ ಆಗಿದೆ. ಇಲ್ಲಿಯೂ ಮ್ಯಾಚ್ ನೋಡವ ಸಂದರ್ಭದಲ್ಲಿ ತಮ್ಮದೇ ಒಂದು ಟೀಮ್ ಕಟ್ಟಿ, ಅದರಲ್ಲಿ ತಂಡದ ಗೆಲುವಿನ ಲೆಕ್ಕಚಾರದಲ್ಲಿ ಪಾಯಿಂಟ್ ಗಳನ್ನು ಪಡೆದುಕೊಳ್ಳಲಿದ್ದಾರೆ.

ಬ್ರೈನ್ ಬಾಜಿ:

ಇದೊಂದು ಕ್ವೀಜ್ ಆಗಿದ್ದು, ಇದು ಪ್ರತಿ ನಿತ್ಯ ರಾತ್ರ 9ಕ್ಕೆ ಪ್ರಸಾರವಾಗಲಿದ್ದು, ಪೇಟಿಎಂ ವ್ಯಾಲೆಟ್ ಮನಿಯನ್ನು ಇಲ್ಲಿ ನೀವು ಗೆಲ್ಲಬಹುದಾಗಿದೆ. ಇದು ಸಹ ಹೆಚ್ಚಿನ ಲಾಭವನ್ನು ನಿಮಗೆ ಮಾಡಿಕೊಡಲಿದೆ.

Unboxing of Rs. 8,499 LED TV from Daiwa

ಮೊಟೊ G6 ಬಗ್ಗೆ ಮಾಹಿತಿ ಬಿಚ್ಚಿಟ್ಟ ಅಮೆಜಾನ್ ವೆಬ್ ಸೈಟ್..!

English summary
As the IPL 2018 is going on, we have come up with a slew of apps those will let you earn money and win cash prizes. Jio Cricket Play Along, Hotstar, Dream 11 and Brainbaazi are some apps those let you earn this IPL season.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot