ಶುರುವಾಯ್ತು ಕ್ರಿಕೆಟ್ ಹಬ್ಬ! IPL 2023 ಯಾವೆಲ್ಲಾ ಆ್ಯಪ್‌ಗಳಲ್ಲಿ ವೀಕ್ಷಿಸಬಹುದು?
ಕ್ರಿಕೆಟ್ ಪ್ರಿಯರ ಪಾಲಿನ ಅತಿ ದೊಡ್ಡ ಹಬ್ಬ ಐಪಿಎಲ್ ಮತ್ತೆ ಬಂದಿದೆ. ಈ ಬಾರಿಯ ಟಾಟಾ ಐಪಿಎಲ್ 2023 ಸಾಕಷ್ಟು ವಿಚಾರಗಳಿಂದ ಹಿಂದೆಂದಿಗಿಂತಲೂ ಹೆಚ್ಚಿನ ಕುತೂಹಲವನ್ನು ಕೆರಳಿಸಿದೆ. ಐಪಿಎಲ್‌ನಲ್ಲಿ ಈ ಭಾರಿ ಪರಿಚಯಿಸಲಾಗಿರುವ ಹೊಸ ನಿಯಮಗಳು ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಇನ್ನಷ್ಟು ಮನರಂಜನೆ ನೀಡೋದು ಪಕ್ಕಾ ಆಗಿದೆ.
ಹೌದು, ಐಪಿಎಲ್ 2023 ಇಂದಿನಿಂದ ಪ್ರಾರಂಭವಾಗಲಿದೆ. ಕಳೆದ ವರ್ಷ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಗುಜರಾತ್ ಟೈಟಾನ್ಸ್ ಹಾಗೂ ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ಮೊದಲ ಪಂದ್ಯ ನಡೆಯಲಿದೆ. ಇನ್ನು ಎಂದಿನಂತೆ ಐಪಿಎಲ್ 2023 ಪಂದ್ಯಾವಳಿಗಳನ್ನು ಹಲವು ಆ್ಯಪ್‌ಗಳ ಮೂಲಕ ನೀವು ಎಲ್ಲಿಯೇ ಇದ್ದರೂ ವೀಕ್ಷಿಸಬಹುದಾಗಿದೆ. ಹಾಗಾದ್ರೆ ಟಾಟಾ ಐಪಿಎಲ್ 2023 ಪಂದ್ಯಾವಳಿಗಳು ವೀಕ್ಷಿಸಬಹುದಾದ ಆ್ಯಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಡಿಯನ್ ಪ್ರೀಮಿಯರ್ ಲಿಂಗ್ ಅಂದರೆ ಸಾಕು ವಿಶ್ವ ಕ್ರಿಕೆಟ್ ಒಂದು ಬಾರಿ ತಿರುಗಿ ನೋಡಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಎಂದು ಖ್ಯಾತಿ ಪಡೆದಿರುವ ಐಪಿಎಲ್ ಇಂದಿನಿಂದ ಶುರುವಾಗಲಿದೆ. ಈ ವರ್ಷ ಮುಕೇಶ್ ಅಂಬಾನಿ ಒಡೆತನದ ಜಿಯೋ ಸಿನಿಮಾದಲ್ಲಿ IPL 2023 ಕ್ರಿಕೆಟ್ ಪಂದ್ಯಗಳು ಪ್ರಸಾರ ವಾಗುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಇದರೊಂದಿಗೆ ಇನ್ನು ಹಲವು ಆ್ಯಪ್‌ಗಳಲ್ಲಿ ನೀವು ಐಪಿಎಲ್ ಮ್ಯಾಚ್‌ಗಳನ್ನು ನೋಡಬಹುದಾಗಿದೆ.
ಜಿಯೋ ಸಿನಿಮಾ
ಮುಕೇಶ್ ಅಂಬಾನಿ ಒಡೆತನದ ಜಿಯೋಸಿನಿಮಾ ಅಪ್ಲಿಕೇಶನ್ ಐಪಿಎಲ್ 2023-27 ಸೀಸನ್ ಪ್ರಸಾರದ ಹಕ್ಕುಗಳನ್ನು ಹೊಂದಿದೆ. ಆದರಿಂದ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇನ್ನು ಜಿಯೋ ಎಲ್ಲಾ IPL ಪಂದ್ಯಗಳನ್ನು 4K ಗುಣಮಟ್ಟದಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುವುದಾಗಿ ಹೇಳಿಕೊಂಡಿದೆ. ಇದಲ್ಲದೆ ಜಿಯೋ ಸಿನಿಮಾದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು 12 ವಿವಿಧ ಭಾಷೆಗಳಲ್ಲಿ ಸ್ಟ್ರೀಮ್ ಮಾಡಲಿದೆ.

ಡಿಸ್ನಿ+ ಹಾಟ್‌ಸ್ಟಾರ್
ಇನ್ನು ಎಂದಿನಂತೆ ಈ ವರ್ಷವೂ ಕೂಡ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಬಹುದಾಗಿದೆ. ಆದರೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಐಪಿಎಲ್ ಪಂದ್ಯಗಳ್ನು ವೀಕ್ಷಿಸಬೇಕಾದರೆ ಚಂದಾದಾರಿಕೆ ಪ್ಲಾನ್‌ಗಳನ್ನು ಹೊಂದಿರಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ಜಿಯೋ, ವಿ ಟೆಲಿಕಾಂಗಳು ತಮ್ಮ ಹಲವು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ ಉಚಿತ ಚಂದಾದಾರಿಕೆಯನ್ನು ಘೋಷಣೆ ಮಾಡಿವೆ.
ವಿಲೋ ಟಿವಿ
ಇನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಕ್ರೇಜ್ ಇದೆ. ಆದರಿಂದ ಯುಎಸ್‌ನಲ್ಲಿನ ಕ್ರಿಕೆಟ್ ಪ್ರಿಯರು ಐಪಿಎಲ್ ಪದ್ಯಗಳನ್ನು ವೀಕ್ಷಿಸುವುದಕ್ಕೆ ವಿಲೋ ಟಿವಿ ಆ್ಯಪ್ ಸೂಕ್ತವಾಗಿದೆ. ಇದು ಯುಎಸ್‌ನಲ್ಲಿ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಸ್ಪೋರ್ಟ್ಸ್ ಮ್ಯಾಚ್‌ಗಳನ್ನು ಪ್ರಸಾರ ಮಾಡಲಿದೆ. ಆದರೆ ಈ ಆ್ಯಪ್‌ನಲ್ಲಿ ನೀವು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಬೇಕಾದರೆ ತಿಂಗಳಿಗೆ $9.99 ( 762ರೂ.) ಪಾವತಿಸಬೇಕಾಗುತ್ತದೆ.

Yupp ಟಿವಿ
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ಲಭ್ಯವಿರುವ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ Yupp TV ಕೂಡ ಒಂದಾಗಿದೆ. ಇದು ಆಸ್ಟ್ರೇಲಿಯಾ, ಕೆನಡಾ, ಯುರೋಪ್, ಪಾಕಿಸ್ತಾನ, ನೇಪಾಳ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ IPL 2023 ಅನ್ನು ಸ್ಟ್ರೀಮ್ ಮಾಡುತ್ತದೆ. ಇನ್ನು ಈ ಆ್ಯಪ್‌ನಲ್ಲಿ ನೀವು IPL 2023 ಕ್ರಿಕೆಟ್ ನೋಡಬೇಕಾದರೆ ನೀವು ಚಂದಾದರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.


Click it and Unblock the Notifications








