ರೈಲ್ವೇ ಟಿಕೆಟ್ ಬುಕ್ ಮಾಡಲು ಇರುವ 'ಯುಟಿಸನ್' ಆಪ್‌ ಬಗೆಗಿನ 10 ಅಂಶಗಳು

By Gizbot Bureau
|

IRCTC ಹೊಸ ಆಪ್ ನ್ನು ಬಿಡುಗಡೆಗೊಳಿಸಿದೆ ಮತ್ತು ಇದು ರಿಸರ್ವ್ ಆಗಿರದ ಟಿಕೆಟ್ ಗಳನ್ನು ಆನ್ ಲೈನ್ ಬುಕ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಹೊಸ ಮೊಬೈಲ್ ಅಪ್ಲಿಕೇಷನ್ ನ್ನು ಯುಟಿಸನ್ ಮೊಬೈಲ್ ಎಂದು ಕರೆಯಲಾಗುತ್ತದೆ. ಇದರ ಮೂಲಕ ಬಳಕೆದಾರರು ರಿಸರ್ವ್ ಆಗಿರದ ಟಿಕೆಟ್ ಗಳನ್ನು ಬುಕ್ ಮಾಡಬಹುದು ಮತ್ತು ಕ್ಯಾನ್ಸಲ್ ಕೂಡ ಮಾಡಬಹುದು. ಅದು ಕೂಡ ಯಾವುದೇ ಸಮಯದಲ್ಲಾದರೂ ಸರಿ, ಯಾವುದೇ ಪ್ರದೇಶದಲ್ಲಿದ್ದರೂ ಸರಿ. ಕ್ಯಾಷ್ ಲೆಸ್ ಬುಕ್ಕಿಂಗ್ ಮತ್ತು ರಿನೀವಲ್ಸ್ ಗಳಿಗೂ ಕೂಡ ಈ ಆಪ್ ಸಹಕಾರಿಯಾಗಿದೆ.

ರೈಲ್ವೇ ಟಿಕೆಟ್ ಬುಕ್ ಮಾಡಲು ಇರುವ 'ಯುಟಿಸನ್' ಆಪ್‌ ಬಗೆಗಿನ 10 ಅಂಶಗಳು

ಹೊಸ IRCTC ಅಪ್ಲಿಕೇಷನ್ ನ್ನು ಭಾರತೀಯ ರೈಲ್ವೇ ಬಿಡುಗಡೆಗೊಳಿಸಿದೆ. ಇದು ಹಲವಾರು ಸೌಲಭ್ಯ ಮತ್ತು ವೈಶಿಷ್ಟ್ಯತೆಗಳೊಂದಿಗೆ ಬರಲಿದೆ ಅದರಲ್ಲಿ ಸೀಸನ್ ಟಿಕೆಟ್ ನ್ನು ನೀಡುವುದು ಮತ್ತು ರಿನ್ಯೂ ಮಾಡುವುದು, ಫ್ಲಾಟ್ ಫಾರ್ಮ್ ಟಿಕೆಟ್ ನ್ನು ಬುಕ್ ಮಾಡುವುದು, ರೈಲ್ವೇ ವ್ಯಾಲೆಟ್ ಬ್ಯಾಲೆನ್ಸ್ ಚೆಕ್ ಮಾಡುವುದು ಮತ್ತು ಭರ್ತಿ ಮಾಡುವುದು, ಬಳಕೆದಾರರ ಪ್ರೊಫೈಲ್ ಮ್ಯಾನೇಜ್ ಮೆಂಟ್ ಮತ್ತು ಬುಕ್ಕಿಂಗ್ ಹಿಸ್ಟರಿ ಇತ್ಯಾದಿಗಳೂ ಕೂಡ ಸೇರಿವೆ.

ಯುಟಿ ಸನ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?

ಯುಟಿಸನ್ ಮೊಬೈಲ್ ಸದ್ಯ ಆಂಡ್ರಾಯ್ಡ್ ಮತ್ತು ವಿಂಡೋಸ್ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಐಓಎಸ್ ನಲ್ಲೂ ಲಭ್ಯವಾಗುವ ನಿರೀಕ್ಷೆ ಇದೆ. ರೈಲ್ವೇ ಮಾಹಿತಿ ವ್ಯವಸ್ಥೆ ಕೇಂದ್ರದಿಂದ ಹೊಸ IRCTC ಅಪ್ಲಿಕೇಷನ್ ನ್ನು ಅಭಿವೃದ್ಧಿ ಪಡಿಸಿದೆ.

ಆಂಡ್ರಾಯ್ಡ್ ನಲ್ಲಿ ಯುಟಿಎಸ್ ಆಪ್

ಗೂಗಲ್ ಪ್ಲೇ ಸ್ಟೋರ್ ಅಥವಾ ವಿಂಡೋಸ್ ಸ್ಟೋರ್ ನಿಂದ ಉಚಿತವಾಗಿ ಈ ಆಪ್ ನ್ನು ಬಳಕೆದಾರರು ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬಹುದು.

ಯುಟಿಸನ್ ಮೊಬೈಲ್ ಆಪ್ ನಲ್ಲಿ ರಿಜಿಸ್ಟರ್ ಆಗುವುದು ಹೇಗೆ?

ಯುಟಿಸನ್ ಮೊಬೈಲ್ ಆಪ್ ನ್ನು ಡೌನ್ ಲೋಡ್ ಮಾಡಿದ ನಂತರ ನೀವು ನಿಮ್ಮನ್ನ ಆಪ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ಕೆಲವು ಪ್ರಾಥಮಿಕ ಮಾಹಿತಿಗಳನ್ನು ಅದರಲ್ಲಿ ನೀಡಬೇಕಾಗುತ್ತದೆ. ಅದರಲ್ಲಿ ಈ ಕೆಳಗಿನ ಪ್ರಮುಖ ಅಂಶಗಳು ಸೇರಿವೆ.

• ಮೊಬೈಲ್ ನಂಬರ್

• ಹೆಸರು

• ಸಿಟಿ

• ಡೀಫಾಲ್ಟ್ ಬುಕ್ಕಿಂಗ್ ಟ್ರೈನ್ ಟೈಪ್

• ಕ್ಲಾಸ್

• ಟಿಕೆಟ್ ಟೈಪ್

• ಪ್ರಯಾಣಿಕರ ಸಂಖ್ಯೆ

• ಯಾವಾಗಲೂ ಪ್ರಯಾಣಿಸುತ್ತಿರುವ ಮಾರ್ಗ

ಒಮ್ಮೆ ನೀವು ರಿಜಿಸ್ಟ್ರೇಷನ್ ಪೂರ್ಣಗೊಳಿಸಿದ ನಂತರ, ನಿಮಗೆ ರೈಲ್ವೇ ವ್ಯಾಲೆಟ್(ಆರ್-ವ್ಯಾಲೆಟ್) ಲಭ್ಯವಾಗುತ್ತದೆ ಮತ್ತು ಇತರೆ ಕೆಲವು ಆಯ್ಕೆಗಳು ಯುಟಿಸನ್ ಮೊಬೈಲ್ ಆಪ್ ನಲ್ಲಿ ಸಿಗುತ್ತದೆ.

ಟಾಪ್ 10 ಯುಟಿ ಸನ್ ಮೊಬೈಲ್ ಫೀಚರ್

1. ಯಾವುದೇ ಹಾರ್ಡ್ ಕಾಪಿಯ ಅಗತ್ಯವಿಲ್ಲ

1. ಯಾವುದೇ ಹಾರ್ಡ್ ಕಾಪಿಯ ಅಗತ್ಯವಿಲ್ಲ

ನೀವು ನಿಮ್ಮ ಟಿಕೆಟ್ ನ್ನು ಯುಟಿಸನ್ ಮೊಬೈಲ್ ಆಪ್ ಬಳಸಿ ಬುಕ್ ಮಾಡಬಹುದು ಮತ್ತು ಟಿಕೆಟ್ಟಿನ ಹಾರ್ಡ್ ಕಾಪಿ ಇಲ್ಲದೆಯೂ ಪ್ರಯಾಣಿಸಬಹುದು.ಆಪ್ ನ ‘Show Ticket' ವಿಭಾಗದಲ್ಲಿ ಟಿಕೆಟ್ ಲಭ್ಯವಿರುತ್ತದೆ. ಇದನ್ನೇ ಸಾಕ್ಷಿಯಾಗಿ ಬಳಸಬಹುದು.

2. ಉಚಿತ ರೈಲ್ವೇ ವ್ಯಾಲೆಟ್ (ಆರ್- ವ್ಯಾಲೆಟ್)

ಯುಟಿಸನ್ ಮೊಬೈಲ್ ಆಪ್ ಗೆ ರಿಜಿಸ್ಟರ್ ಆದ ಬಳಿಕ ಉಚಿತವಾಗಿ ಆಪ್ ನಲ್ಲಿ ರೈಲ್ವೇ ವ್ಯಾಲೆಟ್ ಲಭ್ಯವಾಗುತ್ತದೆ. ಇದನ್ನು ಯಾವುದೇ ಬೆಲೆ ಇಲ್ಲದೆ ಸ್ವಯಂಚಾಲಿತವಾಗಿ 0 ಬ್ಯಾಲೆನ್ಸ್ ನಲ್ಲಿ ಕ್ರಿಯೇಟ್ ಆಗುತ್ತದೆ. ಇದನ್ನು ನೀವು ಕ್ಯಾಷ್ ಲೆಸ್ ಟ್ರಾನ್ಸ್ಯಾಕ್ಷನ್ ಮತ್ತು ರಿನೀವಲ್ಸ್ ಗಾಗಿ ಬಳಕೆ ಮಾಡಬಹುದು.

3.ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ರೀಚಾರ್ಜ್ ಮಾಡಿಕೊಳ್ಳುವುದಕ್ಕೆ ಅವಕಾಶ

3.ಆನ್ ಲೈನ್ ಮತ್ತು ಆಫ್ ಲೈನ್ ಎರಡರಲ್ಲೂ ರೀಚಾರ್ಜ್ ಮಾಡಿಕೊಳ್ಳುವುದಕ್ಕೆ ಅವಕಾಶ

ರೈಲ್ವೇ ವ್ಯಾಲೆಟ್ ಅಥವಾ ಆರ್-ವ್ಯಾಲೆಟ್ ಆಫ್ ಲೈನ್ ಅಥವಾ ಆನ್ ಲೈನ್ ನಲ್ಲಿ ಸುಲಭವಾಗಿ ರೀಚಾರ್ಜ್ ಮಾಡಬಹುದು. ಯಾವುದೇ ಯುಟಿಎಸ್ ಕೌಂಟರ್ ನಲ್ಲಿ ಅಥವಾ ಆನ್ ಲೈನ್ ನಲ್ಲಿ https://www.utsonmobile.indianrail.gov.in ವೆಬ್ ಸೈಟ್ ಮೂಲಕ ರೀಚಾರ್ಜ್ ಮಾಡಲು ಅವಕಾಶವಿರುತ್ತದೆ.

4. ಸೀಸನ್ ಟಿಕೆಟ್ ನ್ನು ಬುಕ್ ಮಾಡಿಕೊಳ್ಳಬಹುದು

ಹೊಸ ಯುಟಿಸನ್ ಮೊಬೈಲ್ ಆಪ್ ಸೀಸನ್ ಟಿಕೆಟ್ ಬುಕ್ಕಿಂಗ್ ಮತ್ತು ರಿನೀವಲ್ ಗೂ ಕೂಡ ಬಳಕೆ ಮಾಡಬಹುದು..

5. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿಲ್ಲ, ಕೇವಲ ರಿಸರ್ವ್ ಆಗಿರದ ಟಿಕೆಟ್ ಗಳು ಮಾತ್ರ

5. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶವಿಲ್ಲ, ಕೇವಲ ರಿಸರ್ವ್ ಆಗಿರದ ಟಿಕೆಟ್ ಗಳು ಮಾತ್ರ

ಯುಟಿಸನ್ ಮೊಬೈಲ್ ಆಪ್ ನಲ್ಲಿ ಯಾವುದೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಸೌಲಭ್ಯವಿಲ್ಲ. ರಿಸರ್ವ್ ಆಗಿರದ ಟಿಕೆಟ್ ಗಳನ್ನು ಬುಕ್ ಮಾಡುವುದಕ್ಕೆ ಮತ್ತು ಕ್ಯಾನ್ಸಲ್ ಮಾಡುವುದಕ್ಕೆ ಮಾತ್ರವೇ ಇದು ಅವಕಾಶ ನೀಡುತ್ತದೆ.

6. ಎಲ್ಲಾ ಮಾರ್ಗಗಳಿಗೂ ಟಿಕೆಟ್ ಲಭ್ಯತೆ

ಯುಟಿಸನ್ ಮೊಬೈಲ್ ಆಪ್ ಬಳಸಿ ನೀವು ಯಾವುದೇ ಮಾರ್ಗಕ್ಕೆ ಬೇಕಿದ್ದರೂ ರಿಸರ್ವ್ ಆಗಿರದ ಟಿಕೆಟ್ ನ್ನು ಬುಕ್ ಮಾಡಿಕೊಳ್ಳಲು ಅವಕಾಶವಿದೆ. ಭಾರತೀಯ ಎಲ್ಲಾ ರೈಲು ಮಾರ್ಗವನ್ನೂ ಕೂಡ ಇದು ಒಳಗೊಂಡಿದೆ.

7. ಫ್ಲ್ಯಾಟ್ ಫಾರ್ಮ್ ಟಿಕೆಟ್ ಬುಕ್ ಮಾಡಬಹುದು

7. ಫ್ಲ್ಯಾಟ್ ಫಾರ್ಮ್ ಟಿಕೆಟ್ ಬುಕ್ ಮಾಡಬಹುದು

ಸೀಸನ್ ಟಿಕೆಟ್ ಮತ್ತು ಪ್ರತಿದಿನದ ರಿಸರ್ವ್ ಆಗಿರದ ಟಿಕೆಟ್ ಗಳನ್ನು ಹೊರತು ಪಡಿಸಿ ಯುಟಿಸನ್ ಮೊಬೈಲ್ ಆಪ್ ಫ್ಲ್ಯಾಟ್ ಫಾರ್ಮ್ ಟಿಕೆಟ್ ಗೆ ಬೆಂಬಲ ನೀಡುತ್ತದೆ.ನೀವು ನೇರವಾಗಿ ಆಪ್ ಬಳಸಿ ಫ್ಲ್ಯಾಟ್ ಫಾರ್ಮ್ ಟಿಕೆಟ್ ಬುಕ್ ಮಾಡಬಹುದು ಮತ್ತು ಡಿಜಿಟಲ್ ಟಿಕೆಟ್ ನ್ನು ಬಳಸಬಹುದು. ಶೋ ಟಿಕೆಟ್ ಸೆಕ್ಷನ್ ನಲ್ಲಿ ಡಿಜಿಟಲ್ ಫ್ಲ್ಯಾಟ್ ಫಾರ್ಮ್ ಟಿಕೆಟ್ ಕೂಡ ಲಭ್ಯವಾಗುತ್ತದೆ.

8. ಡಿಜಿಟಲ್ ಟಿಕೆಟಿಂಗ್

ಹೊಸ IRCTC ಆಪ್ ನ್ನು ಕೇಂದ್ರ ರೈಲ್ವೇ ಮಾಹಿತಿ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು ಡಿಜಿಟಲ್ ಟಿಕೆಟ್ ಗೆ ಬೆಂಬಲ ನೀಡುತ್ತದೆ. ಡಿಜಿಟಲ್ ಆಗಿ ಇದರಲ್ಲಿ ಟಿಕೆಟ್ ಗಳು ಜನರೇಟ್ ಆಗುತ್ತದೆ. ಹಾಗಾಗಿ ಬಳಕೆದಾರರು ಹಾರ್ಡ್ ಕಾಪಿ ಇಟ್ಟುಕೊಳ್ಳುವ ಅಗತ್ಯವಿಲ್ಲ.

9. ಯಾವುದೇ ಸಮಯದಲ್ಲಿ ಬೇಕಿದ್ದರೂ ಬುಕ್ ಮತ್ತು ಕ್ಯಾನ್ಸಲ್ ಮಾಡಲು ಅವಕಾಶ

9. ಯಾವುದೇ ಸಮಯದಲ್ಲಿ ಬೇಕಿದ್ದರೂ ಬುಕ್ ಮತ್ತು ಕ್ಯಾನ್ಸಲ್ ಮಾಡಲು ಅವಕಾಶ

ಇದರಲ್ಲಿ ಕ್ಯಾನ್ಸಲ್ ಆಯ್ಕೆ ಕೂಡ ಲಭ್ಯವಿದೆ. ಬುಕ್ಕಿಂಗ್ ನ ಕೆಲವು ಸಮಯದ ನಂತರ ನಿಮ್ಮ ಅನ್ ರಿಸರ್ವ್ಡ್ ಟಿಕೆಟ್ ನ್ನು ನೀವು ಯಾವುದೋ ಅನಿವಾರ್ಯ ಕಾರಣಕ್ಕೆ ಕ್ಯಾನ್ಸಲ್ ಮಾಡಿದರೆ, ನೀವು ಪಾವತಿ ಮಾಡಿದ ಹಣವು ರೀಫಂಡ್ ಆಗುತ್ತದೆ ಮತ್ತು ಅದು ನೇರವಾಗಿ ನಿಮ್ಮ ರೈಲ್ವೇ ವ್ಯಾಲೆಟ್ ಗೆ ಬರುತ್ತದೆ.

10. ಬಳಕೆದಾರರ ಪ್ರೊಫೈಲ್ ಮ್ಯಾನೇಜ್ ಮೆಂಟ್

ಹೊಸ ಯುಟಿಸನ್ ಮೊಬೈಲ್ ಆಪ್ ಬಳಕೆದಾರರ ಪ್ರೊಫೈಲ್ ಮ್ಯಾನೇಜ್ ಮೆಂಟ್ ಫೀಚರ್ ನ್ನು ಕೂಡ ಹೊಂದಿದೆ.ಹೊಸ IRCTC ಆಪ್ ನಿಮ್ಮ ಬುಕ್ಕಿಂಗ್ ಹಿಸ್ಟರಿಯೊಂದಿಗೆ ಎಲ್ಲ ಪ್ರೊಫೈಲ್ ನ್ನು ಮ್ಯಾನೇಜ್ ಮಾಡಲಾಗುತ್ತದೆ. ಅಷ್ಟೇ ಅಲ್ಲ ನಿಯಮಿತವಾಗಿ ನೀವು ಟ್ರಾವೆಲ್ ಮಾಡುವ ಮಾರ್ಗ ಮತ್ತು ಟಿಕೆಟ್ ಟೈಪ್ ನ್ನು ಕೂಡ ಆಪ್ ನಲ್ಲಿ ಸಂಗ್ರಹಿಸಿ ಇಡಲಾಗಿರುತ್ತದೆ.

Best Mobiles in India

Read more about:
English summary
IRCTC Launches App For Booking Unreserved Tickets – 10 Things You Need To Know!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X