ರೈಲು ಪ್ರಯಾಣಿಕರಿಗೆ ಹಿಂದೆಂದೂ ಕಾಣದ ಆಫರ್: ಆನ್‌ಲೈನಿನಲ್ಲಿ ಟಿಕೆಟ್ ಬುಕ್ ಮಾಡಿದರೆ ಕ್ಯಾಷ್ ಬ್ಯಾಕ್..!!!!

ರೈಲು ಪ್ರಯಾಣಿಕರಿಗೆ ಒಂದರ ಹಿಂದೆ ಒಂದರತೆ ಆಫರ್ ಗಳು ದೊರೆಯುತ್ತಿದೆ. ಈಗ IRCTC ಯಿಂದ ರೈಲು ಪ್ರಯಾಣಿಕರಿಗೆ ಕ್ಯಾಷ್ ಬ್ಯಾಕ್ ಕೊಡುಗೆಯೂ ಲಭ್ಯವಾಗಿದೆ.

|

ಕೇಂದ್ರ ಸರಕಾರವೂ ಡಿಜಿಟಲ್ ಇಂಡಿಯಾಕ್ಕೆ ಬಹುವಾಗಿ ಬೆಂಬಲವನ್ನು ನೀಡುತ್ತಿದ್ದು, ಅದರ ಫಲವಾಗಿ ರೈಲ್ವೆ ಇಲಾಖೆಯು ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಕಡೆಗೆ ಮುಖ ಮಾಡಿದೆ. ಇದರ ಪರಿಣಾಮವಾಗಿ ರೈಲು ಪ್ರಯಾಣಿಕರಿಗೆ ಒಂದರ ಹಿಂದೆ ಒಂದರಂತೆ ಆಫರ್ ಗಳು ದೊರೆಯುತ್ತಿದೆ. ಈಗ IRCTC ಯಿಂದ ರೈಲು ಪ್ರಯಾಣಿಕರಿಗೆ ಕ್ಯಾಷ್ ಬ್ಯಾಕ್ ಕೊಡುಗೆಯೂ ಲಭ್ಯವಾಗಿದೆ.

ರೈಲು ಪ್ರಯಾಣಿಕರಿಗೆ ಹಿಂದೆಂದೂ ಕಾಣದ ಆಫರ್:

IRCTC ಯೂ ರೈಲು ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಹೊಸದಾಗಿ ಪರಿಚಯಿಸಿರುವ mVisa ಪೇಮೆಂಟ್ ಮೊಡ್ ಅನ್ನು ಬಳಸಿಕೊಂಡರೆ ರೂ.50 ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರು IRCTC ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ತಮ್ಮ ಸ್ಮಾರ್ಟ್‌ಫೋನಿನಲ್ಲಿ mVisa ಆಪ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಈ ಕೊಡುಗೆಯೂ ಸೆಪ್ಟೆಂಬರ್ ವರಗೆ ಲಭ್ಯವಿರಲಿದ್ದು, mVisa ಸ್ಕ್ಯಾನ್ ಮಾಡಿ IRCTC ವೆಬ್ ಸೈಟಿನಲ್ಲಿಯೂ ಹಣ ಪಾವತಿ ಮಾಡಬಹುದಾಗಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿ ನಂತರ ಪಾವತಿಸಿ ಆಫರ್ ನೀಡಿರುವ IRCTC ಈಗ ಹೊಸದಾದ ಈ ಪ್ರಯತ್ನಕ್ಕೆ ಮುಂದಾಗಿದೆ.

ರೈಲು ಪ್ರಯಾಣಿಕರಿಗೆ ಹಿಂದೆಂದೂ ಕಾಣದ ಆಫರ್:

mVisa ಮೂಲಕ ಹಣವನ್ನು ಕ್ರೆಡಿಟ್, ಡೆಬಿಟ್ ಮತ್ತು ಪ್ರಿಪೇಯ್ಡ್ ಅಕೌಂಟ್ ನಿಂದ ಪಾವತಿ ಮಾಡಬಹುದಾಗಿದ್ದು, ಇದು ಹೊಸ ಮಾದರಿಯ ಪ್ರಯತ್ನವಾಗಿದ್ದು, ಪ್ರಯಾಣಿಕರಿಗೆ ಸಹಾಯವಾಗಲಿದೆ ಎನ್ನುವುದು ರೈಲ್ವೆ ಇಲಾಖೆಯ ಆಶಯವಾಗಿದೆ. ಒಟ್ಟಿನಲ್ಲಿ ಇಂತಹ ಪ್ರಯತ್ನಗಳು ಹೆಚ್ಚಾದಷ್ಟು ಬೆಳವಣಿಗೆ ಸಾಧ್ಯವಾಗುತ್ತದೆ. ರೈಲು ಪ್ರಯಾಣ ಇನಷ್ಟು ಸುಲಭವಾಗಲಿದೆ.

Best Mobiles in India

Read more about:
English summary
IRCTC will give Rs. 50 cashback to consumers using mVisa to book tickets, Users can link their visa debit, credit or prepaid account to mVisa app. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X