ರೈಲ್ವೇ ಆಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ 10 ಅಂಶಗಳು

By Gizbot Bureau
|

ಇ-ಆಡಳಿತಕ್ಕಾಗಿ ಐಆರ್ ಸಿಟಿಸಿ ರೈಲ್ವೇ ಕನೆಕ್ಟ್ ಆಪ್ ಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರೈಲ್ವೇ ಟಿಕೆಟ್ ಬುಕ್ಕಿಂಗ್ ನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ 2017 ರಲ್ಲಿ ಐಆರ್ ಸಿಟಿಸಿ ಹೊಸದಾಗಿ ಮೊಬೈಲ್ ಆಪ್ ಐಆರ್ ಸಿಟಿಸಿಯನ್ನು ಬಿಡುಗಡೆಗೊಳಿಸಿದೆ. ಮೊದಲ ಬಾರಿಗೆ ಈ ಆಪ್ ನ್ನು 2014 ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೊಸದಾಗಿ 2017 ರಲ್ಲಿ ಬಿಡುಗಡೆಗೊಂಡ ಆಪ್ ನ್ನು 2017 ಜನವರಿವರೆಗೆ ಸುಮಾರು 3 ಕೋಟಿ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದುವರೆಗೂ ಸುಮಾರು 14 ಕೋಟಿ ಬುಕ್ಕಿಂಗ್ ಗಳು ಇದರಲ್ಲಿ ನಡೆದಿದೆ.

ರೈಲ್ವೇ ಆಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ 10 ಅಂಶಗಳು

ಪ್ರಯಾಣಿಕ ಸ್ನೇಹಿ ಫೀಚರ್ ಗಳನ್ನು ಇದರಲ್ಲಿ ಅಳವಡಿಸಲಾಗಿದ್ದು ರೈಲ್ವೇ ಟಿಕೆಟ್ ಬುಕ್ಕಿಂಗ್ ಇದರಲ್ಲಿ ಸುಲಭವಾಗಿದೆ.

ಹೊಸ ಸಿಸ್ಟಮ್ ನ್ನು ಇದರಲ್ಲಿ ಅಳವಡಿಸಲಾಗಿದ್ದು ಒಂದು ನಿಮಿಷಕ್ಕೆ ಸುಮಾರು 2,000ದಿಂದ 20,000 ಟಿಕೆಟ್ ಬುಕ್ಕಿಂಗ್ ಮಾಡುವುದಕ್ಕೆ ಇದರಲ್ಲಿ ಸಾಧ್ಯವಿದೆ. ಪ್ರತಿ ದಿನ ಸುಮಾರು 45 ಲಕ್ಷ ಲಾಗಿನ್ ಕಾರ್ಯ ನಡೆಯುತ್ತದೆ. ಇದೀಗ ಐಆರ್ ಸಿಟಿಸಿ ವೆಬ್ ಸೈಟ್ ಟಿಕೆಟ್ ಬುಕ್ಕಿಂಗ್ ಐಆರ್ ಸಿಟಿಸಿ ರೈಲ್ವೇ ಕನೆಕ್ಟ್ ಆಪ್ ಜೊತೆಗೆ ಸಿನ್ಕ್ರನೈಜ್ ಮಾಡಲಾಗಿದೆ. ಈ ಆಪ್ 10 ಫೀಚರ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

1. ಪ್ರತಿ ಲಾಗಿನ್ ಗೂ ಅಡ್ವಾನ್ಸ್ಡ್ ಸೆಕ್ಯುರಿಟಿ ಫೀಚರ್ ನ್ನು ಅಳವಡಿಸಲಾಗಿದ್ದು ಸೆಲ್ಫ್ ಅಸೈನ್ ಮಾಡಬಹುದಾದ ಪಿನ್ ನಂಬರ್ ಇರುತ್ತದೆ. ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನ್ನು ಬಳಸದೆಯೂ ಲಾಗಿನ್ ಆಗಲು ಅವಕಾಶವಿರುತ್ತದೆ.

2. ಬೋರ್ಡಿಂಗ್ ಪಾಯಿಂಟ್ ಬದಲಾಯಿಸುವ ಸೌಲಭ್ಯ ಮತ್ತು ರಿಸರ್ವೇಷನ್ ಮಾಡಿಸುವ ಸೌಲಭ್ಯವಿದೆ.

3. ಮಹಿಳೆಯರು, ಹಿರಿಯ ನಾಗರೀಕರು, ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಕೋಟಾ ಬುಕ್ಕಿಂಗ್ ಗೆ ಬೆಂಬಲಿಸುತ್ತದೆ.

4. ಬಳಕೆದಾರರು ವೆಬ್ ಸೈಟ್ ನಲ್ಲಿ ಬುಕ್ ಆಗಿರುವ ಇ-ಟಿಕೆಟ್ ನ್ನು ನೋಡಬಹುದು, ಕ್ಯಾನ್ಸಲ್ ಅಥವಾ ಫೈಲ್ ಟಿಡಿಆರ್ ಮೊಬೈಲ್ ಆಪ್ ಮೂಲಕ ಮಾಡುವುದಕ್ಕೆ ಅವಕಾಶವಿರುತ್ತದೆ. ಇದರ ತದ್ವಿರುದ್ಧ ಕೂಡ ಸಾಧ್ಯವಿದೆ. 5. ಐಆರ್ ಸಿಟಿಸಿ ಇ-ವ್ಯಾಲೆಟ್ ಜೊತೆಗೆ ಇಂಟಿಗ್ರೇಟ್ ಆಗಿದೆ. ಮೊಬೈಲ್ ಆಪ್ ಮೂಲಕ ಸುಲಭದ ರೀಫಂಡ್ ಟ್ರ್ಯಾಕಿಂಗ್ ಸೌಲಭ್ಯವಿದೆ. ಕ್ಯಾಷ್ ಲೆಸ್ ಆನ್ ಲೈನ್ ಟ್ರಾನ್ಸ್ಯಾಕ್ಷನ್ ನ್ನು ಯುಪಿಐ, ಭೀಮ್, ವ್ಯಾಲೆಟ್, ಕ್ರೆಡಿಟ್/ಡೆಬಿಟ್ ಮತ್ತು ನೆಟ್ ಬ್ಯಾಕಿಂಗ್ ಸೌಲಭ್ಯದ ಮೂಲಕ ಸಾಧಿಸಬಹುದು.

6. ವೈಟಿಂಗ್ ಲಿಸ್ಟ್ ಟಿಕೆಟ್ ನ್ನು ಚೆಕ್ ಮಾಡಲು ಅವಕಾಶ. ಪ್ರಯಾಣದ ದಿನಾಂಕದ ಜೊತೆಗೆ ಫ್ಲೆಕ್ಸಿಬಲ್ ಆಗಿರುವ ಅವಕಾಶ.

7. ಮೊಬೈಲ್ ಆಪ್ ಮೂಲಕವೇ ಆಧಾರ್ ದೃಢೀಕರಣ ಸಾಧ್ಯವಿದೆ.

8. ಎಲ್ಲಾ ರೀತಿಯ ಟಿಕೆಟ್ ಗೆ PNR ಎನ್ಕ್ವೈರಿ ಸೌಲಭ್ಯವಿದೆ. , ಯಾವುದೇ ಫ್ಲ್ಯಾಟ್ ಫಾರ್ಮ್ ಮೂಲಕ ಇ-ಟಿಕೆಟ್ ಬುಕ್ಕಿಂಗ್ ಮಾಡಿರುವ ಟಿಕೆಟ್ ನ ಸ್ಟೇಟಸ್ ಚೆಕ್ ಮಾಡಿ.

9. ಮಾಸ್ಟರ್ ಪ್ಯಾಸೆಂಜರ್ ಲಿಸ್ಟ್ ಮೂಲಕ ಪ್ಯಾಸೆಂಜರ್ ನ್ನು ಸೇರಿಸುವ ಸೌಲಭ್ಯ ಜೊತೆಗೆ ಪ್ರಯಾಣಿಕರ ಆಧಾರ್ ದೃಢೀಕರಣದ ಮೂಲಕ ಮಾಸ್ಟರ್ ಪ್ಯಾಸೆಂಜರ್ ಲಿಸ್ಟ್ ನ್ನು ನಿರ್ವಹಣೆ ಮಾಡಲು ಅವಕಾಶ.

10. ಟಿಕೆಟ್ ಪಡೆಯುವವರೆಗೂ ಕೂಡ ಬಳಕೆದಾರರಿಗೆ ಯಾವುದೇ ಪೇಜ್ ಗೆ ತೆರಳಲು ಅವಕಾಶವಿರುತ್ತದೆ. ಐಆರ್ ಸಿಟಿಸಿ ರೈಲ್ ಕನೆಕ್ಟ್ ಆಪ್ ಸ್ಕ್ರೀನ್ ರೀಡರ್ ಉದಾಹರಣೆಗೆ ಟಾಕ್ ಬ್ಯಾಕ್ ನಂತರ ವಿಷುವಲ್ ಚಾಲೆಂಜ್ ಆಗಿರುವ ವ್ಯಕ್ತಿಗಳು ಟಿಕೆಟ್ ಬುಕ್ಕಿಂಗ್ ಮಾಡುವುದಕ್ಕೆ ಕೂಡ ಅವಕಾಶ ನೀಡುತ್ತದೆ.

ಗೂಗಲ್ ಪ್ಲೇ ಸ್ಟೋರ್ ಮೂಲಕ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಆದರೆ ಐಓಎಸ್ ಬಳಕೆದಾರರಿಗೆ ಐಆರ್ ಸಿಟಿಸಿ ರೈಲ್ವೇ ಕನೆಕ್ಟ್ ಆಪ್ ಲಭ್ಯವಿರುವುದಿಲ್ಲ.

Best Mobiles in India

Read more about:
English summary
IRCTC Rail Connect app gets National award for e-governance! Top 10 must-know features for ticket booking

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X