Home
Apps

ಭಾರತೀಯ ರೈಲ್ವೆಯಿಂದ SwaRail ಆ್ಯಪ್ ಪರಿಚಯ: ಇನ್ನು ಕ್ಷಣದಲ್ಲೇ ಟಿಕೆಟ್ ಬುಕ್!

ರೈಲು ಟಿಕೆಟ್ ಬುಕ್ ಮಾಡಲು ವಿಳಂಭವಾಗುತ್ತಿದೆ ಅಥವಾ PNR ಸ್ಥಿತಿಯನ್ನು ಪರಿಶೀಲಿಸಲು ಪದೇ ಪದೇ ಲಾಗಿನ್ ಆಗಬೇಕಿದೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ?. ಇನ್ಮುಂದೆ ಈ ಚಿಂತೆಗಳನ್ನು ಬಿಡಿ. ಏಕೆಂದರೆ, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ನಿಗಮವು (IRCTC) ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ 'SwaRail' ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಸೂಪರ್ ಅಪ್ಲಿಕೇಶನ್ ಸಹಾಯದಿಂದ ರೈಲು ಪ್ರಯಾಣಕ್ಕೆ ಸಂಬಂಧಿಸಿದ ಬಹುತೇಕ ಎಲ್ಲ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಗುರಿಯನ್ನು ಹೊಂದಿದ್ದು, ಈ ಅಪ್ಲಿಕೇಶನ್ ಸಹಾಯದಿಂದ ಭಾರತದಲ್ಲಿ ರೈಲು ಪ್ರಯಾಣವನ್ನು ಯೋಜಿಸುವುದು ಮತ್ತು ಆನಂದಿಸುವುದು ಹಿಂದೆಂದಿಗಿಂತಲೂ ಸುಲಭವಾಗಲಿದೆ ಎಂದು ಇತ್ತೀಚಿನ ಪ್ರಮುಖ ಮಾಧ್ಯಮ ವರದಿಗಳು ತಿಳಿಸಿವೆ.

ಹೌದು, ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) ನಿಂದ ಅಭಿವೃದ್ಧಿಪಡಿಸಲ್ಪಟ್ಟಿರುವ 'SwaRail' ಎಂಬ ಈ 'ಸೂಪರ್ ಅಪ್ಲಿಕೇಶನ್' ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಪರೀಕ್ಷಾ ಆವೃತ್ತಿಯಲ್ಲಿ ಲಭ್ಯವಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಅಪ್ಲಿಕೇಶನ್ ಈ ಹಿಂದೆ ಬೇರೆ ಬೇರೆ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದ್ದ ಹಲವಾರು ವೈಶಿಷ್ಟ್ಯಗಳನ್ನು ಒಂದೇ ಸೂರಿನಡಿ ತರಲಿದೆ. ರೈಲು ಟಿಕೆಟ್ ಕಾಯ್ದಿರಿಸುವಿಕೆ, ಲೈವ್ ರೈಲು ಟ್ರ್ಯಾಕಿಂಗ್, ಊಟ ಆರ್ಡರ್ ಮಾಡುವುದು ಮತ್ತು ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ಅನ್ವೇಷಿಸುವುದು ಸೇರಿದಂತೆ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ಪಡೆಯಬಹುದು ಎಂದು ವರದಿಯು ಹೇಳಿದೆ. ಇಷ್ಟೇ ಅಲ್ಲದೆ, ಈ ಹೊಸ 'SwaRail' ಅಪ್ಲಿಕೇಶನ್‌ ಪ್ರಯಾಣಿಕರಿಗೆ ಸರಳಗೊಳಿಸುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ಈ ಹೊಸ 'SwaRail' ಅಪ್ಲಿಕೇಶನ್‌ನ ಪ್ರಮುಖ ವೈಶಿಷ್ಟ್ಯಗಳೆಂದರೆ ಅದರ ಸರಳವಾದ ಲಾಗಿನ್ ಪ್ರಕ್ರಿಯೆ. ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ IRCTC ಖಾತೆಯನ್ನು ಬಳಸಿಕೊಂಡು ಲಾಗಿನ್ ಆಗಬಹುದು ಅಥವಾ ಸಿಂಗಲ್ ಸೈನ್-ಆನ್ (SSO) ಮೂಲಕ ಹೊಸ ಖಾತೆಯನ್ನು ತ್ವರಿತವಾಗಿ ರಚಿಸಬಹುದು. ಈ ಅಪ್ಲಿಕೇಶನ್‌ನ ಮುಖಪುಟವು ಅತ್ಯಂತ ಸ್ವಚ್ಛ ಮತ್ತು ಆಧುನಿಕ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರಿಗೆ ಸುಲಭವಾಗಿ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವರದಿಯು ತಿಳಿಸಿದೆ. ಮುಖ್ಯವಾಗಿ, ಈಗ ಟ್ಯಾಬ್‌ಗಳನ್ನು ಬದಲಾಯಿಸದೆ ಅಥವಾ ಪದೇ ಪದೇ ಲಾಗಿನ್ ಆಗದೆ ತಮ್ಮ PNR ಸ್ಥಿತಿಯನ್ನು ಪರಿಶೀಲಿಸುವುದು, ಆಹಾರವನ್ನು ಆರ್ಡರ್ ಮಾಡುವುದು ಮತ್ತು ನಿಲ್ದಾಣದ ಸೇವೆಗಳ ಬಗ್ಗೆ ಮಾಹಿತಿ ಪಡೆಯುವುದು ಮುಂತಾದ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಹೇಳಲಾಗಿದೆ.

ಭಾರತೀಯ ರೈಲ್ವೆಯಿಂದ SwaRail ಆ್ಯಪ್ ಪರಿಚಯ: ಇನ್ನು ಕ್ಷಣದಲ್ಲೇ ಟಿಕೆಟ್ ಬುಕ್!

ಇದಲ್ಲದೆ, ಲೈವ್ ರೈಲು ಟ್ರ್ಯಾಕಿಂಗ್ ಈ 'SwaRail' ಅಪ್ಲಿಕೇಶನ್‌ನ ಅತ್ಯಂತ ಉಪಯುಕ್ತ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದು ರೈಲಿನ ಆಗಮನದ ಸಮಯ, ವಿಳಂಬಗಳು ಮತ್ತು ಪ್ಲಾಟ್‌ಫಾರ್ಮ್ ವಿವರಗಳ ಕುರಿತು ಈ SwaRail ಅಪ್ಲಿಕೇಶನ್ ನೈಜ-ಸಮಯದ ಮಾಹಿತಿಯನ್ನು ನೀಡುತ್ತದೆ. ಇದರಿಂದಾಗಿ ನಿಖರವಾದ ಮಾಹಿತಿಯಿಲ್ಲದೆ ಕಾಯುವ ಪ್ರಯಾಣಿಕರಿಗೆ ಇದು ಹೆಚ್ಚು ಅನುಕೂಲಕರವಾಗಲಿದೆ. ಇದರಿಂದ ಖಾಸಗಿ ರೈಲು ಟ್ರಾಕಿಂಗ್ ಅಪ್ಲಿಕೇಶನ್‌ಗಳ ಸಹಾಯವಿಲ್ಲದೆ ಈ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಕೇವಲ ರೈಲ್ವೆ ಸೇವೆಗಳಷ್ಟೇ ಅಲ್ಲದೆ, ಈ ಅಪ್ಲಿಕೇಶನ್ ಹೋಟೆಲ್ ಬುಕಿಂಗ್, ಪ್ರವಾಸಿ ಸ್ಥಳಗಳ ವೀಕ್ಷಣೆ ಮತ್ತು ಪ್ರಯಾಣ ವಿಮಾ ಆಯ್ಕೆಗಳಂತಹ ಹೆಚ್ಚುವರಿ ಸೇವೆಗಳನ್ನು ಸಹ ಈ ಅಪ್ಲಿಕೇಶನ್‌ ಒದಗಿಸುತ್ತದೆ ಎಂದು ಹೇಳಲಾಗಿದೆ.

ಇನ್ನು ಪ್ರಸ್ತುತ 'SwaRail' ಕೇವಲ ಆಂಡ್ರಾಯ್ಡ್ ಸಾಧನಗಳಿಗೆ ಮಾತ್ರ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಇದು ಇನ್ನೂ ಪರೀಕ್ಷಾ ಹಂತದಲ್ಲಿರುವುದರಿಂದ, ಬಳಕೆದಾರರು ಕೆಲವು ದೋಷಗಳು ಅಥವಾ ಸಣ್ಣ ತೊಂದರೆಗಳನ್ನು ಎದುರಿಸಬಹುದು. ಆದರೆ, ಅಪ್ಲಿಕೇಶನ್ ಅನ್ನು ನಿರಂತರವಾಗಿ ಸುಧಾರಿಸಲಾಗುತ್ತಿದ್ದು, ಈ ಸಮಸ್ಯೆಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಐಫೋನ್ ಬಳಕೆದಾರರು ಈ ಅಪ್ಲಿಕೇಶನ್‌ನ iOS ಆವೃತ್ತಿಗಾಗಿ ಕಾಯಬೇಕಾಗಿದೆ. ಒಟ್ಟಾರೆಯಾಗಿ, 'SwaRail' ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಒಂದು ಸಮಗ್ರ ಮತ್ತು ಅನುಕೂಲಕರ ವೇದಿಕೆಯನ್ನು ಒದಗಿಸುವಲ್ಲಿ ಮಹತ್ವದ ಹೆಜ್ಜೆ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಇತ್ತೀಚಿನ ಎಲ್ಲಾ ಟೆಕ್ ಅಪ್‌ಡೇಟ್‌ಗಳಿಗಾಗಿ ಯಾವಾಗಲೂ ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್‌ ಆಗಿರಿ.

Best Mobiles in India

English summary
IRCTC Swarail APP: A standout feature is its live train tracking, which provides passengers with real-time updates on train schedules, delays, and platform information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+