7,499 ರೂಪಾಯಿಗೆ ಸಿಗಲಿದೆ ಐವೋಮಿ ಐ2 ಸ್ಮಾರ್ಟ್‌ಫೋನ್!

  ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪೆನಿಯಾಗಿರುವ ಐವೋಮಿ ತನ್ನ ನಿರ್ಧಿಷ್ಟ ಆಯವ್ಯಯದ ಐ ಸರಣಿಯ ಸ್ಮಾರ್ಟ್ ಫೋನ್ ಐ2 ನ್ನು ಮಾರುಕಟ್ಟೆಗೆ ಬಿಟ್ಟಿದೆ. ಐವೋಮಿ2 ಸ್ಮಾರ್ಟ್ ಫೋನ್ ಫ್ಲಿಪ್ ಕಾರ್ಟ್ ನಲ್ಲಿ ಕೇವಲ 7,499 ರುಪಾಯಿಗೆ ಲಭ್ಯವಿದೆ.ಈ ಸ್ಮಾರ್ಟ್ ಫೋನ್ 1.5GHz Quad-core MTK6739 ಪ್ರೊಸೆಸರ್ ನ್ನು ಹೊಂದಿದೆ. ಹೊಸ ಐ2 3ಜಿಬಿ RAM ಮತ್ತು 32 ಜಿಬಿ ROM ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದೆ. ಇದನ್ನು 128 ಜಿಬಿ ವರೆಗೂ ಮಿಕ್ರೋ ಎಸ್ ಡಿ ಕಾರ್ಡ್ ಮೂಲಕ ಹೆಚ್ಚಿಸಿಕೊಳ್ಳಬಹುದಾಗಿದೆ. 

  7,499 ರೂಪಾಯಿಗೆ ಸಿಗಲಿದೆ ಐವೋಮಿ ಐ2 ಸ್ಮಾರ್ಟ್‌ಫೋನ್!

  ಈ ಹೊಸ ಡಿವೈಸ್ 5.45 ಇಂಚಿನ HD+ಪೂರ್ಣನೋಟದ ಡಿಸ್ಪ್ಲೇಯನ್ನು 18:9 ಸ್ಕ್ರೀನ್ ಅನುಪಾತದಲ್ಲಿ ಹೊಂದಿದೆ. ಕ್ಯಾಮರಾ ವಿಚಾರಕ್ಕೆ ಬಂದರೆ, ಐವೋಮಿ ಐ2 ಡ್ಯುಯಲ್ ಕ್ಯಾಮರಾ ಫೆಸಿಲಿಟಿ ಹೊಂದಿದ್ದು,13ಎಂಪಿ ಮತ್ತು 2 ಎಂಪಿ ಕ್ರಮವಾಗಿ ಹೊಂದಿದೆ. ಹಿಂಭಾಗದ ಕ್ಯಾಮರಾಕ್ಕೆ ಸಾಫ್ಟ್ ಫ್ಲ್ಯಾಷ್ ಸೌಲಭ್ಯವಿದ್ದು, ಸೋನಿ ಸೆನ್ಸರ್ ಜೊತೆಗೆ 5ಪಿ ಲಾರ್ಗನ್ ಲೆನ್ಸ್ ಹೊಂದಿದೆ.

  ಇದಕ್ಕೆ 8ಎಂಪಿ ಮುಂಭಾಗದ ಕ್ಯಾಮರಾವಿದ್ದು,4ಪಿ ಸ್ಯಾಮ್ ಸಂಗ್ ಲೆನ್ಸ್ ನ್ನು ಒಳಗೊಂಡಿದೆ. ಐವೋಮಿ ಐ2 Android 8.1 Oreo ನಲ್ಲಿ ರನ್ ಆಗಲಿದ್ದು, 3 ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ. ಮೊದಲನೆಯದಾಗಿ ಬ್ರೌನ್ಸ್ ಗೋಲ್ಡ್, ಆಲಿವ್ ಬ್ಲಾಕ್ ಮತ್ತು ಇಂಡಿಗೋ ಬ್ಲೂ ಬಣ್ಣದಲ್ಲಿ ಲಭ್ಯವಾಗಲಿದೆ.ಈ ಸ್ಮಾರ್ಟ್ ಫೋನ್, 4000mAh ಬ್ಯಾಟರಿ ಸೌಲಭ್ಯ ಹೊಂದಿದ್ದು, 2A ಫಾಸ್ಟ್ ಚಾರ್ಜಿಂಗ್ ಅವಕಾಶವಿದ್ದು, ಎರಡು ದಿನಗಳವರೆಗೆ ಜಾರ್ಜ್ ಉಳಿಯಲಿದೆ ಎಂದು ಹೇಳಲಾಗುತ್ತೆ.

  ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಡುಯಲ್ ಆಕ್ಟೀವ್ 4G VoLTE ಕನೆಕ್ಟಿವಿಟಿ, ವೈ-ಫೈ802.11 b/g/n, ಬ್ಲೂಟೂತ್ 4.0, GPS, 3.5mmಆಡಿಯೋ ಜಾಕ್, ಮತ್ತು ಮೈಕ್ರೋ-USB ಜೊತೆಗೆ OTG ಸಪೋರ್ಟ್ ಇರಲಿದೆ.

  ಡುಯಲ್ ಆಕ್ಟೀವ್ 4G VoLTE ಕನೆಕ್ಟಿವಿಟಿಯು ಬಳಕೆದಾರನಿಗೆ ಎರಡೂ ಸಿಮ್ ಗಳನ್ನೂ ಒಂದೇ ಸಮಯಕ್ಕೆ ಬಳಸುವ ಅವಕಾಶವನ್ನು ನೀಡಲಿದ್ದು, ಆ ಮೂಲಕ ಅತೀ ವೇಗದ 4G VoLTE ಇಂಟರ್ ನೆಟ್ ಕನೆಕ್ಟಿವಿಟಿಯನ್ನು ಬಳಕೆದಾರ ಪಡೆಯಬಹುದಾಗಿದೆ. ಕಂಪೆನಿಯು ನೀಡಿರುವ ಮಾಹಿತಿಯ ಪ್ರಕಾರ, ಮಾರ್ಕೆಟ್ ನಲ್ಲಿ ಲಭ್ಯವಿರುವ ಸ್ಮಾರ್ಟ್ ಫೋನ್ ಗಳಲ್ಲೇ , ಎರಡೂ ಸಿಮ್ ಗಳನ್ನು ಒಂದೇ ಸಮಯಕ್ಕೆ ಇಂಟರ್ ನೆಟ್ ಗಾಗಿ ಬಳಕೆ ಮಾಡಲು ಅವಕಾಶ ನೀಡುವ ಮೊಟ್ಟಮೊದಲ ಸ್ಮಾರ್ಟ್ ಫೋನ್ ಇದಾಗಿದೆ.

  ಮುಖದ ಗುರುತು ಪತ್ತೆ ಹಚ್ಚುವ ತಂತ್ರಗಾರಿಕೆ ಇದರಲ್ಲಿದ್ದು, ಭದ್ರತೆ ದೃಷ್ಟಿಯಿಂದ ಬಹಳ ಚೆನ್ನಾಗಿದೆ. ಬೇರೆಬೇರೆ ರೀತಿಯ ಸೆನ್ಸರ್ ಗಳು ಈ ಫೋನಿನ ಜೊತೆಗೆ ಇರಲಿದ್ದು ಅಕ್ಸೆಲೆರೋಮೀಟರ್,ಪ್ರಾಕ್ಸಿಮಿಟಿ ಸೆನ್ಸರ್,ಲೈಟ್ ಸೆನ್ಸರ್ ಮತ್ತು ಮೋಷನ್ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಹಿಂಭಾಗದ ಪೆನೆಲ್ 3D ಮಿರರ್ ಫಿನಿಶ್ ನಿಂದ ಕೂಡಿದೆ.

  How to use WhatsApp in Kannada - GIZBOT KANNADA
  ಐವೋಮಿ ಭಾರತದ ಸಿಇಓ ಆಗಿರುವ ಅಶ್ವಿನ್ ಭಂಡಾರಿ ಹೇಳಿಕೆಯಂತೆರೆ.4ಜಿ ವೋಲ್ಟ್ ಕನೆಕ್ಟಿವಿಟಿ ನೀಡುವ ಮೊದಲ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿ ಮಾಡಲಿದೆ, ಇಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಸಿಗುತ್ತಿದೆ. ಫೇಸ್ ಅನ್ ಲಾಕ್, ಉತ್ತಮ ನೋಟಕ್ಕಾಗಿರುವ 3ಡಿ ಮಿರರ್ ಫಿನಿಶ್ ಬಾಡಿ, ಫುಲ್ ವಿವ್ ಡಿಸ್ಪ್ಲೇ ವೈಶಿಷ್ಟ್ಯಗಳು ಗ್ರಾಹಕರಿಗೆ ಅನುಕೂಲ ಮಾಡಿಕೊಡಲಿವೆ. ಯುವಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್ ಫೋನ್ ತಯಾರಿಸಲಾಗಿದ್ದು, ಮುಂದಿನ ದಿನಗಳಲ್ಲೂ ಅವರ ಬೇಡಿಕೆಗೆ ಅನುಗುಣವಾಗಿ ಹೊಸ ವೈಶಿಷ್ಟ್ಯಗಳಿರುವ ಫೋನ್ ಗಳನ್ನು ಮಾರುಕಟ್ಟೆಗೆ ತರಲಾಗುತ್ತೆ ಎಂದಿದ್ದಾರೆ.ಒಟ್ಟಾರೆಯಾಗಿ , ಐಮೋಮಿ ಐ2 ಭಾರತದಲ್ಲಿ ದೊಡ್ಡ ಹವಾ ಸೃಷ್ಟಿಮಾಡಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಮತ್ತುಳಿದದ್ದು ಗ್ರಾಹಕನಿಗೆ ಬಿಟ್ಟ ವಿಚಾರ. ನಿಮಗೆ ಏನನ್ನಿಸುತ್ತೆ ಕಮೆಂಟ್ ಮಾಡಿ.. ಶೇರ್ ಮಾಡಿ..

  English summary
  Chinese smartphone maker iVOOMi has expanded its budget smartphone ‘i’-series with the launch of i2. ತto0 know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more