ಸದ್ಯ IPL ಅಬ್ಬರ ಶುರುವಾಗಿದ್ದು, ಮೂರು ಪಂದ್ಯಗಳು ಈಗಾಗಲೇ ಮುಗಿದಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ IPL ಹೊಸ ಮಾದರಿಯಲ್ಲಿ ಸದ್ದು ಮಾಡುತ್ತಿದೆ. ವೇಗದ ಮೊಬೈಲ್ ಡೇಟಾ ಸೇವೆಯೂ ಕಡಿಮೆ ಬೆಲೆಗೆ ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಈ ಬಾರಿ IPL ಟಿವಿಯಿಂದ ನಿಂದ ಸ್ಮಾರ್ಟ್‌ಫೋನ್‌ಗೆ ವರ್ಗಾವಣೆಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಂದಿ ತಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನಿನಲ್ಲಿಯೇ ಕ್ರಿಕೆಟ್ ನೋಡುತ್ತಿದ್ದಾರೆ.

ಇದಕ್ಕೆ ಕಾರಣ ಏರ್‌ಟೆಲ್ ಮತ್ತು ಜಿಯೋ ಎಂದರೆ ತಪ್ಪಾಗುವುದಿಲ್ಲ. ಬಳಕೆದಾರರು ಮೊಬೈಲ್‌ನಲ್ಲಿಯೇ ಮ್ಯಾಚ್ ನೋಡಲು ಎನ್ನುವ ಕಾರಣಕ್ಕೆ ಕಡಿಮೆ ಬೆಲೆಗೆ ಡೇಟಾ ಮತ್ತು ಲೈವ್ ಮ್ಯಾಚ್ ನೋಡುವ ಅವಕಾಶವನ್ನು ಮಾಡಿಕೊಟ್ಟಿವೆ. ಈ ಹಿನ್ನಲೆಯಲ್ಲಿ ಲೈವ್ ಮ್ಯಾಚ್ ಅನ್ನು ನೋಡುವ ಸಲುವಾಗಿ ಯಾವ ಆಪ್ ಉತ್ತಮವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.
ಲೈವ್ ಮ್ಯಾಚ್:
ಈ ಬಾರಿ ಏರ್‌ಟೆಲ್ ಮತ್ತು ಜಿಯೋಗಳು ತಮ್ಮ ಬಳಕೆದಾರರಿಗೆ ಲೈವ್ ಮ್ಯಾಚ್ ಅನ್ನು ತಮ್ಮ ಆಪ್ ಗಳ ಮೂಲಕವೇ ನೋಡುವ ಅವಕಾಶವನ್ನು ಮಾಡಿಕೊಟ್ಟಿವೆ. ಈ ಹಿನ್ನಲೆಯಲ್ಲಿ ಜಿಯೋ ಟಿವಿ ಮತ್ತು ಏರ್‌ಟೆಲ್ ಟಿವಿ ಎರಡು ಆಪ್‌ಗಳು ಲೈವ್ ಮ್ಯಾಚ್ ಸೇವೆಯನ್ನು ನೀಡುತ್ತಿವೆ. ಎರಡು ಟೆಲಿಕಾಂ ಸಂಸ್ಥೆಗಳು ಈ ಲೈವ್ ಮ್ಯಾಚ್ ನೀಡುವ ಸಲುವಾಗಿಯೇ ಹಾಟ್‌ಸ್ಟಾರ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿವೆ ಎನ್ನಲಾಗಿದೆ.
ಏರ್‌ಟೆಲ್ ಸಾಹಸ:
ಮೈ ಏರ್‌ಟೆಲ್ ಆಪ್ ಬಳಕೆದಾರರಿಗೆ ಹಾಟ್ ಸ್ಟಾರ್ ನಲ್ಲಿ ಮ್ಯಾಚ್ ನೋಡುವ ಅವಕಾಶವನ್ನು ಈ ಬಾರಿಯಿಂದ ಮಾಡಿಕೊಟ್ಟಿದ್ದು, ಜಿಯೋ ತನ್ನ ಬಳಕೆದಾರರಿಗೆ ಹಿಂದಿನಿಂದಲೂ ಹಾಟ್ ಸ್ಟಾರ್ ಪ್ಲೇ ಮಾಡುವ ಅವಕಾಶವನ್ನು ನೀಡಿದೆ. ಆದರೆ ಹೆಚ್ಚಿನ ಮಂದಿ ಜಿಯೋ ಮೂಲಕವೇ ಲೈವ್ ಮ್ಯಾಚ್ ನೋಡುತ್ತಿದ್ದಾರೆ. ಅವರನ್ನು ಆಕರ್ಷಿಸಲು ಏರ್‌ಟೆಲ್ ಹರ ಸಾಹಸ ಪಡುತ್ತಿದೆ.
ಏರ್‌ಟೆಲ್ ಪರವಾಗಿಲ್ಲ:
ಜಿಯೋ ಟಿವಿ ಆಪ್ ಬಳಕೆದಾರರು ಕೇವಲ ಜಿಯೋ ಡೇಟಾವನ್ನು ಹೊಂದಿದ್ದರೇ ಮಾತ್ರವೇ ಲೈವ್ ಮ್ಯಾಚ್ ನೋಡಲು ಸಾಧ್ಯವಿದೆ. ವೈ-ಫೈ ಮೂಲಕ ನೋಡುವ ಸಾಧ್ಯತೆಯನ್ನು ಮಾಡಿಕೊಟ್ಟಿಲ್ಲ. ಆದರೆ ಏರ್‌ಟೆಲ್ ತನ್ನ ಬಳಕೆದಾರರಿಗೆ ವೈ-ಫೈ ಮೂಕಲವೂ ಲೈವ್ ಮ್ಯಾಚ್ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.
ಹೆಚ್ಚಿನ ಡೇಟಾ ಬಳಕೆ:
ಈ ಎರಡು ಆಪ್‌ಗಳು ಹೆಚ್ಚಿನ ಪ್ರಮಾಣದ ಡೇಟಾವನ್ನು ಕಬಳಿಸುತ್ತವೆ ಎನ್ನಲಾಗಿದ್ದು, 15 ನಿಮಿಷದ ವಿಡಿಯೋ ನೋಡಿದರೆ 300MB ಡೇಟಾ ಖಾಲಿಯಾಗಲಿದೆ. ಒಂದು ಕಡೆಯ ಬ್ಯಾಟಿಂಗ್ ನೋಡಲು 1.5 GBಗಿಂತಲೂ ಹೆಚ್ಚಿನ ಡೇಟಾ ಅವಶ್ಯಕತೆ ಇದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.