Home
Apps

ಮಿಲಿಯನ್ಲೈಟ್ಸ್ ಸಹಭಾಗಿತ್ವದಲ್ಲಿ ಕೌಶಲ್ಯ-ಆಧಾರಿತ ಶಿಕ್ಷಣ ನೀಡಲಿರುವ ಜಿಯೋಚ್ಯಾಟ್!

By Tejaswini P G

ಕೌಶಲ್ಯ-ಆಧಾರಿತ ಶಿಕ್ಷಣ ಪಡೆಯಲು ನೀವು ಯೋಚಿಸುತ್ತಿದ್ದರೆ ನಿಮಗಿದೋ ತಂದಿದ್ದೇವೆ ಒಂದು ಸಿಹಿ ಸುದ್ದಿ. ಮಿಲಿಯನ್ಲೈಟ್ಸ್ ತನ್ನ ಹೊಸ ಚ್ಯಾನಲ್ ಒಂದನ್ನು ಲಾಂಚ್ ಮಾಡಿದ್ದಾರೆ ಜಿಯೋಚ್ಯಾಟ್ ನಲ್ಲಿ!

ಮಿಲಿಯನ್ಲೈಟ್ಸ್ ಸಹಭಾಗಿತ್ವದಲ್ಲಿ ಕೌಶಲ್ಯ-ಆಧಾರಿತ ಶಿಕ್ಷಣ ನೀಡಲಿರುವ ಜಿಯೋಚ್ಯಾಟ್!

ಈ ಸಂದರ್ಭದಲ್ಲಿ ಮಾತನಾಡಿದ ಮಿಲಿಯನ್ಲೈಟ್ಸ್ ನ ಸಿಇಓ ಅಕ್ಷತ್ ಶ್ರೀವಾಸ್ತವ ಅವರು "ಈ ಹೊಸ ಹೆಜ್ಜೆಯನ್ನಿಡುವ ಮೂಲಕ ನಾವು ಕೌಶಲ್ಯ-ಆಧಾರಿತ ಶಿಕ್ಷಣ ಪಡೆಯುವ ಸೌಲಭ್ಯದಿಂದ ವಂಚಿತರಾಗಿದ್ದ ಲಕ್ಷಾಂತರ ಬಳಕೆದಾರರನ್ನು ತಲುಪಲು ಸಾಧ್ಯವಾಗಿದೆ. ಈ ಪ್ರಯತ್ನದ ಮೂಲಕ ಲಕ್ಷಾಂತರ ಜನರ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಈ ಮೂಲಕ ಜನರಿಗೆ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸೂಕ್ತ ಮಾಹಿತಿ ನೀಡುವುದೇ ನಮ್ಮ ಗುರಿ" ಎಂದು ಹೇಳಿದ್ದಾರೆ.

ಜಿಯೋಚ್ಯಾಟ್ ನಲ್ಲಿ ಬರಲಿರುವ ಈ ನೂತನ ಚ್ಯಾನಲ್ ವಿವಿಧ ರೀತಿಯ ಕೌಶಲ್ಯಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ಕೋರ್ಸ್ ಗಳನ್ನು ನೀಡುತ್ತದೆ. ಅಲ್ಲದೆ ಜಿಯೋಚ್ಯಾಟ್ ನ ಮೂಲಕ ಜನರು ತಮ್ಮ ಕುಶಲತೆ, ವೃತ್ತಿಗಳ ಆಯ್ಕೆ ಅಥವಾ ಉತ್ತಮ ಕೆಲಸ ಗಳಿಸಲು ಬೇಕಾದ ಕುಶಲತೆಗಳ ಕುರಿತು ಇರುವ ಸಂದೇಹಗಳಿಗೆ ತ್ವರಿತ ಉತ್ತರಗಳನ್ನೂ ಪಡೆಯಬಹುದು.

ಮಿಲಿಯನ್ಲೈಟ್ಸ್ ಹೆಚ್ಚಾಗಿ ನಿರ್ಲಕ್ಷ್ಯಕ್ಕೊಳಗಾಗುವ ಮಾರುಕಟ್ಟೆಯ ವಿಭಾಗಗಳ ಅಗತ್ಯಗಳನ್ನು ಪೂರೈಸುವ ಶಕ್ತಿಯಾಗುವ ಗುರಿ ಹೊಂದಿದೆ.ಅಲ್ಲದೆ ಮುಂದಿನ 5 ವರ್ಷಗಳಲ್ಲಿ ಕಡಿಮೆಯೆಂದರೆ 50 ಮಿಲಿಯನ್ ಜನರಿಗಾದರೂ ಅಗತ್ಯ ಕೌಶಲ್ಯಗಳ ಶಿಕ್ಷಣವನ್ನು ನೀಡುವ ಗುರಿ ಮಿಲಿಯನ್ಲೈಟ್ಸ್ ನದ್ದು.

ಮಿಲಿಯನ್ಲೈಟ್ಸ್ ನ ಗುರಿ ಮತ್ತು ದೃಷ್ಟಿ ಎರಡೂ ಡಿಜಿಟಲ್ ಇಂಡಿಯಾ ಮಿಶನ್ ಗೆ ಹೊಂದುವಂತಿದ್ದು ಜನರಿಗೆ ಕೌಶಲ್ಯ ಆಧಾರಿತ ಸರ್ಟಿಫಿಕೇಶನ್ ಗಳನ್ನು ನೀಡುವುದಲ್ಲದೆ ವಿವಿಧ ಕ್ಷೇತ್ರಗಳಲ್ಲಿರುವ ಕುಶಲತೆ ಆಧಾರಿತ ಅಗತ್ಯಗಳನ್ನು ಪೂರೈಸುವ ಉದ್ದೇಶ ಹೊಂದಿದೆ.

ಜಿಯೋಚ್ಯಾಟ್ ನೊಂದಿಗಿನ ಸಹಭಾಗಿತ್ವದಂತೆ ಮಿಲಿಯನ್ಲೈಟ್ಸ್ ಉಚಿತ ಶಿಕ್ಷಣ ನೀಡುವ ಸಲುವಾಗಿ ಯಪ್ ಟಿವಿ ಎನ್ನುವ OTT ಪ್ರೊವೈಡರ್ ನೊಂದಿಗೆ ಕೂಡ ಕೈಜೋಡಿಸಿದೆ.

ಡೆನ್ ಮನೋರಂಜನ್ ಸ್ಯಾಟಲೈಟ್ ನ ಸಹಭಾಗಿತ್ವದಲ್ಲಿ ಮಿಲಿಯನ್ಲೈಟ್ಸ್ ML ಟಿವಿ ಎಂಬ ಟಿವಿ ಚ್ಯಾನಲ್ ಒಂದನ್ನು ನಡೆಸುತ್ತಿದ್ದು ಕೌಶಲ್ಯಗಳ ಅಭಿವೃದ್ಧಿಯತ್ತ ಇದು ಗಮನಹರಿಸುತ್ತದೆ.

"ಕೇವಲ ಸರ್ಟಿಫಿಕೇಶನ್ಗಳ ಮೂಲಕ ಜ್ಞಾನ ಹೆಚ್ಚುವುದಿಲ್ಲ. ಕಲಿಕೆಯ ಅಂತಿಮ ಫಲವಾಗಿ ಸರ್ಟಿಫಿಕೇಶನ್ ಇರುವಂತಹ ಒಂದು ವ್ಯವಸ್ಥೆ ರೂಪುಗೊಳ್ಳಬೇಕು.ತಮ್ಮ ವಿಶಿಷ್ಟಾ ಕಲಿಕಾ ವಿಧಾನಗಳು ಮತ್ತು ಉದ್ಯಮಗಳೊಂದಿಗಿನ ಸಹಭಾಗಿತ್ವದ ಮೂಲಕ ಮಿಲಿಯನ್ಲೈಟ್ಸ್ ಈ ವ್ಯವಸ್ಥೆಗೆ ಅಧಿಕ ಮೌಲ್ಯವನ್ನು ತರಲು ಪ್ರಯತ್ನಿಸುತ್ತಿದೆ" ಎಂದು ಸಂಸ್ಥೆ ತಮ್ಮ ವರದಿಯೊಂದರಲ್ಲಿ ತಿಳಿಸಿದೆ.

Best Mobiles in India

English summary
Similar to its collaboration with JioChat, Millionlights have also collaborated with YuppTV, an OTT provider, to foster open source education.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+