ನಿಮ್ಮನ್ನು ವಂಚಿಸಲು ಬಂದಿದೆ ಜಿಯೋ ಕಾಯಿನ್ ನಕಲಿ ಆಪ್: ಎಚ್ಚರ..!
ರಿಲಯನ್ಸ್ ಮಾಲೀಕತ್ವದ ಜಿಯೋ ಕ್ರಿಪ್ಟೋ ಕರೆನ್ಸಿ ವಿಭಾಗದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದು, ದೇಶದಲ್ಲಿ ತನ್ನದೇ ಆದ ಜಿಯೋ ಕಾಯಿನ್ ಬಿಡುಗಡೆ ಮಾಡುವುದಾಗಿ ಮತ್ತು ಅದೇ ಕಾರ್ಯದಲ್ಲಿ ನಿರತವಾಗಿರುವುದಾಗಿ ತಿಳಿಸಿದೆ. ಆದರೆ ಈ ಕುರಿತು ಜಿಯೋ ಕಡೆಯಿಂದ ಅಧಿಕೃತ ಮಾಹಿತಿ ದೊರೆತಿಲ್ಲ. ಜಿಯೋ ಕಾಯಿನ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಎನ್ನುವ ಸುದ್ದಿ ತಿಳಿದ ಕಿಡಿಗೇಡಿಗಳು ಜಿಯೋ ಕಾಯಿನ್ ಹೆಸರಿನಲ್ಲಿ ಮೋಸ ಮಾಡಲು ಶುರು ಮಾಡಿದ್ದಾರೆ.

ಗೂಗಲ್ ಪ್ಲೇ ಸ್ಟೋರಿನಲ್ಲಿ ಜಿಯೋ ಕಾಯಿನ್ ಹೆಸರಿನಲ್ಲಿ ಹಲವಾರು ಆಪ್ ಗಳು ಕಾಣಿಸಿಕೊಂಡಿದ್ದು, ಜನರಿಗೆ ವಂಚನೆಯನ್ನು ಮಾಡಲು ಮುಂದಾಗಿವೆ. ಈ ನಕಲಿ ಆಪ್ ಗಳು ಗ್ರಾಹಕರಿಗೆ ಜಿಯೋ ಕಾಯಿನ್ ಹೆಸರಿನಲ್ಲಿ ವಂಚನೆಯನ್ನು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಜಿಯೋ ಕಾಯಿನ್ ನಕಲಿ ಆಪ್ ಗಳನ್ನು ಡೌನ್ ಮಾಡಿಕೊಳ್ಳಬೇಡಿ ಎಂದು ಜಿಯೋ ಮೂಲಗಳು ತಿಳಿಸಿವೆ.

ಫೇಕ್ ಆಪ್:
ಜಿಯೋ ಇನ್ನು ಅಧಿಕೃತವಾಗಿ ಜಿಯೋ ಕಾಯಿನ್ ಕ್ರಿಪ್ಟೋ ಕರೆಸ್ಸಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಹಲವು ಆಪ್ ಗಳು ಕಾಣಿಸಿಕೊಂಡಿದ್ದು ಇವುಗಳು ನಕಲಿ ಆಪ್ ಗಳು ಎನ್ನಲಾಗಿದೆ. ಇವುಗಳಿಂದ ದೂರ ಉಳಿಯುವುದು ಉತ್ತಮ.

ಎಚ್ಚರ:
ಸದ್ಯ ಕ್ರಿಪ್ರೋ ಕರೆನ್ಸಿಯಲ್ಲಿ ಹೆಚ್ಚಿನ ಲಾಭವಿದೆ ಎನ್ನುವ ಕಾರಣಕ್ಕೆ ಹೂಡಿಕೆ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ನೀವು ಸಹ ಹಣದ ಆಸೆಗೆ ಬಿದ್ದು ಜಿಯೋ ಕಾಯಿನ್ ಮೇಲೆ ಆಪ್ ಗಳನ್ನು ಹೂಡಿಕೆಯನ್ನು ಮಾಡಲು ಮುಂದಾದರೆ ನೀವು ನಷ್ಟ ಅನುಭವಿಸುವುದು ಖಂಡಿತ.


ಗೂಗಲ್ ಕಣ್ಣು:
ಈಗಾಗಲೇ ಮಾರುಕಟ್ಟೆಯಲ್ಲಿ ಗೂಗಲ್ ಸುಮಾರು 7 ಲಕ್ಷ ಆಪ್ ಗಳನ್ನು ನಿರ್ಮೂಲನೆ ಮಾಡಿದ್ದು, ಇದೇ ಮಾದರಿಯಲ್ಲಿ ಫೇಕ್ ಆಪ್ ಗಳನ್ನು ತೆಗೆದು ಹಾಕುವ ಕಾರ್ಯವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಶೀಘ್ರವೇ ನಕಲಿ ಜಿಯೋ ಆಪ್ ಗಳು ಸಹ ಪ್ಲೇ ಸ್ಟೋರಿನಿಂದ ನಾಪತ್ತೆಯಾಗಲಿದೆ.


Click it and Unblock the Notifications








