ಜಿಯೋ ಫೋನ್‌ನಲ್ಲೂ ಇನ್ಮುಂದೆ ಗೂಗಲ್ ಫೀಚರ್ಸ್ ಲಭ್ಯ..!
ಗೂಗಲ್ ಇಲ್ಲದೇ ಇರೋಕೆ ಸಾಧ್ಯನಾ? ನಮಗೆ ಯಾವುದೇ ಸಂದೇಹ ಬಂದ್ರೂ ನಾವು ಥಟ್ ಅಂತ ಕೇಳೋದು ಗೂಗಲ್ ಮಹಾಶಯನನ್ನೇ. ಆಂಡ್ರಾಯ್ಡ್ ಫೋನ್ ನ್ನು ಬಳಸುವವರಿಗೆ ಜಗತ್ತು ಕೈಯಲ್ಲಿದ್ದ ಭಾವನೆ ನೀಡುತ್ತೆ ಅವರ ಫೋನ್. ಯಾಕಂದ್ರೆ ಅದರಲ್ಲಿ ಗೂಗಲ್ ಇರುತ್ತೆ. ಆದರೆ ಕೆಲವರು ಗೂಗಲ್ ಇಲ್ಲದೇ ಇಷ್ಟು ದಿನ ಫೋನ್ ಬಳಸುತ್ತಿದ್ದರು ಅಂದರೆ ನಂಬುತ್ತೀರಾ.
ಎಸ್. ನಾವು ಸತ್ಯವನ್ನೇ ಹೇಳುತ್ತಿದ್ದೇವೆ. ನಾವು ಮಾತಾಡ್ತಾ ಇರೋದು ಅವರ ಬಗ್ಗೆನೇ. ಜಿಯೋ ಫೋನ್ ಬಳಕೆದಾರರು!ನಿಜಕ್ಕೂ ಅವರು ಇಷ್ಟು ದಿನ ಅದ್ಹೇಗೆ ಇದ್ರೋ ಗೊತ್ತಿಲ್ಲ.. ಆದರೆ ಈಗ ಜಿಯೋ ಫೋನ್ ಬಳಕೆದಾರರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅದುವೇ ಅವರ ಫೋನಿನಲ್ಲಿ ಇನ್ನು ಮುಂದೆ ಗೂಗಲ್ ಸೇವೆಗಳು ಲಭ್ಯವಾಗಲಿದೆ. ಹೌದು ಗೂಗಲ್ ಅಸಿಸ್ಟೆಂಟ್, ಗೂಗಲ್ ಮ್ಯಾಪ್, ಯೂಟ್ಯೂಬ್ ಮತ್ತು ಗೂಗಲ್ ಸರ್ಚ್ ಗಳು ಇನ್ನು ಮುಂದೆ ಜಿಯೋ ಫೋನ್ ನಲ್ಲಿ ಸಿಗುತ್ತವೆ.

ಇದು ಯಾಕೆಂದರೆ ಇನ್ನು ಮುಂದೆ ಈ ಫೋನ್ ಗಳು KaiOS ನಿಂದ ರನ್ ಆಗುತ್ತದೆ. ಇದೊಂದು ಯುಎಸ್ ಮೂಲಕ ಕಂಪೆನಿಯಾಗಿದ್ದು ಇದರ ಹೆಸರು KaiOS ಟೆಕ್ನಾಲಜಿಯಿಂದ ಈ ಆಪರೇಟಿಂಗ್ ಸಿಸ್ಟಮ್ ರನ್ ಆಗುತ್ತದೆ. ಈ ಕಂಪೆನಿಯು ಗೂಗಲ್ ನ ಪಾಲುದಾರಿಕೆಯಲ್ಲಿ ಕೆಲವು ಆಪ್ ಗಳನ್ನು ಡೆವಲಪ್ ಮಾಡ್ತಿದೆ.
ಮುಂದಿನ ಪೀಳಿಗೆಯ ಜನರಿಗೆ ಅಂತರ್ಜಾಲ ಸೌಲಭ್ಯ ಸೃಷ್ಟಿಸುವ ನಿಟ್ಟಿನಲ್ಲಿ ಗೂಗಲ್ 22 ಮಿಲಿಯನ್ ಡಾಲರ್ ನಷ್ಟು ಸರಣಿ ಹೂಡಿಕೆ KaiOS ಜೊತೆ ನಡೆಸಿದೆ.

KaiOS ಒಂದು ವೆಬ್ ಬೇಸ್ ಆಗಿರುವ ಪ್ಲಾಟ್ ಫಾರ್ಮ್ ಆಗಿದ್ದು, ಬಳಕೆದಾರರು HTML5, ಜಾವಾ ಸ್ಕ್ರಿಪ್ಟ್ ಮತ್ತು ಸಿಎಸ್ ಎಸ್ ನ್ನು ಬಳಸುವ ವೇದಿಕೆಯಾಗಿದೆ.ಭಾರತದಲ್ಲಿ ಜಿಯೋಫೋನ್ ನಿಂದಾಗಿ ಜುಲೈ 2017 ರಲ್ಲಿ ಇದು ಇಲ್ಲಿಗೆ ಬಂತು ಮತ್ತು ಶೇಕಡಾ 15 ರಷ್ಟು ಮೊಬೈಲ್ OS ಮಾರ್ಕೆಟ್ ನ್ನು ಪ್ರವೇಶಿಸಿ ಆಪಲ್ IOS ನಂತರ ಎರಡನೇ ಅತೀ ಹೆಚ್ಚು ಭಾರತದಲ್ಲಿ ಬಳಕೆ ಮಾಡುವ OS ಆಗಿ ಗುರುತಿಸಿಕೊಂಡಿದೆ ಎಂದು ಡಿವೈಸ್ ಅಟ್ಲಾಸ್ ನ ನೂತನ ವೆಬ್ ಇಂಟಲಿಜೆನ್ಸ್ ರಿಪೋರ್ಟ್ ಮಾಹಿತಿ ನೀಡಿದೆ.
“ ಗೂಗಲ್ ನ ಈ ಫಂಡಿಂಗ್ ಮುಖಾಂತರ ನಾವು ಇನ್ನೂ ಕೂಡ ಅಂತರ್ಜಾಲ ವ್ಯವಸ್ಥೆಗೆ ತಲುಪದ ಜನಸಂಖ್ಯೆಯನ್ನು ಅಭಿವೃದ್ಧಿ ಪಥದತ್ತ ತಂದು ಅವರನ್ನು ವಿಶ್ವದ ವರ್ತಮಾನಗಳೆಡೆಗೆ ಮುಖ ಮಾಡುವಂತೆ ಮಾಡಲು ನೆರವಿಗೆ ಬರುತ್ತದೆ” ಎಂದು KaiOS ಟೆಕ್ನಾಲಜೀಸ್ ನ ಸಿಇಓ ಆಗಿರುವ ಸೆಬಾಸ್ಟಿಯನ್ ಕೋಡ್ವಿಲ್ಲೇ ತಿಳಿಸಿದ್ದಾರೆ.
ಜಿಯೋ ಫೋನ್ ನ ಯಶಸ್ಸಿನ ಗುರಿ ಇನ್ನಷ್ಟು ಮುಟ್ಟುವ ನಿಟ್ಟಿನಲ್ಲಿ ನಾವು KaiOS ನ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಸುದ್ದಿಗಳನ್ನು ಆಕ್ಸಿಸ್ ಮಾಡುವ ನಿಟ್ಟಿನಲ್ಲಿ ಫೋನಿನ ಬಳಕೆದಾರರಿಗೆ ಇನ್ನಷ್ಟು ವೈಶಿಷ್ಟ್ಯತೆಗಳನ್ನು ಲಭ್ಯಗೊಳಿಸಲಿದ್ದೇವೆ ಎಂದು ನೆಕ್ಸ್ಟ್ ಬಿಲಿಯನ್ ಯೂಸರ್ ನ ಉಪಾಧ್ಯಕ್ಷರಾಗಿರುವ ಅಂಜಲಿ ಜೋಶಿ ತಿಳಿಸಿದ್ದಾರೆ.
ಇನ್ನೊಂದು ಮಾಹಿತಿಯ ಪ್ರಕಾರ ವಾಟ್ಸ್ ಆಪ್ ಕೂಡ ಜಿಯೋ ಫೋನ್ ನಲ್ಲಿ ಬರಲಿದೆಯಂತೆ..ಒಟ್ಟಾರೆ ಜಿಯೋ ಫೋನ್ ಬಳಕೆದಾರರಿಗೆ ಅವರ ಫೋನಿನಲ್ಲಿರುವ ಕೆಲವು ವೈಶಿಷ್ಟ್ಯಗಳ ಹೊರತಾಗಿಯೂ ಇಷ್ಟು ದಿನ ಗೂಗಲ್ ಮತ್ತು ವಾಟ್ಸ್ ಆಪ್ ವರ್ಷನ್ ಗಳು ಇಲ್ಲದೇ ಇರುವುದು ಬೇಸರಕ್ಕೆ ಕಾರಣವಾಗಿತ್ತು. ಆದರೆ ಆ ಸಮಸ್ಯೆಗೆ ಇನ್ನು ಕೆಲವೇ ದಿನಗಳಲ್ಲಿ ಫುಲ್ ಸ್ಟಾಪ್ ಬೀಳುವ ನಿರೀಕ್ಷೆ ಕಾಣುತ್ತಿದೆ.
ಜಿಯೋ ಫೋನಿನ ವೈಶಿಷ್ಟ್ಯತೆಗಳು :
ಜುಲೈ 2017 ರಲ್ಲಿ ಜಿಯೋ ಫೋನ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಅದು ನಂಬಲಸಾಧ್ಯವಾದ ಬೆಲೆಗೆ ಅದುವೇ “ಸೊನ್ನೆ” ರುಪಾಯಿ. ಈ ಫೋನಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ 2.4 ಇಂಚಿನ QVGA TFT ಡಿಸ್ಪ್ಲೇ ಮತ್ತು ಡುಯರ್-ಕೋರ್ ಪ್ರೊಸೆಸರ್ ನ್ನು ಹೊಂದಿದೆ.ಇದರಲ್ಲಿ 512ಎಂಬಿ RAM ಮತ್ತು 4ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು 128 ಜಿಬಿ ವರೆಗೆ ಹಿಗ್ಗಿಸಿಕೊಳ್ಳಬಹುದಾದ ಅವಕಾಶವೂ ಇದೆ.
ಜಿಯೋ ಫೋನ್ 4G VoLTE ನೆಟ್ ವರ್ಕ್ ನ ಕನೆಕ್ಟಿವಿಟಿಯ ಆಯ್ಕೆಯನ್ನು ನೀಡುತ್ತದೆ ಮತ್ತು ಕೆಲವು ಪ್ರೀ-ಇನ್ಸ್ಟಾಲ್ಡ್ ಆಪ್ ಗಳನ್ನು ಕೂಡ ಇದು ಹೊಂದಿರುತ್ತದೆ. ಜಿಯೋ ಟಿವಿ, ಜಿಯೋ ಮ್ಯೂಸಿಕ್ ಮತ್ತು ಜಿಯೋ ಕ್ಯಾಮರಾ. ಈ ಡಿವೈಸ್ ಭಾರತದ 24 ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು ವಾಯ್ಸ್ ಕಮಾಂಡ್ ಗಳನ್ನು ಕೂಡ ಸ್ವೀಕರಿಸುತ್ತದೆ..


Click it and Unblock the Notifications








