ಗೂಗಲ್ ನಿಂದ ಕಬ್ಬಡಿ ಅಭಿಮಾನಿಗಳು ಭರ್ಜರಿ ಗಿಫ್ಟ್
ದೇಶದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ಲಭ್ಯವಾಗುತ್ತಿರುವ ಹಿನ್ನಲೆಯಲ್ಲಿ ಅನೇಕ ಮಾದರಿಯ ಟೂರ್ನಿಗಳು ಆರಂಭವಾಗುತ್ತಿದೆ. ಇದೇ ಮಾದರಿಯಲ್ಲಿ ಕ್ರಿಕೆಟ್ ಗೆ ಮಾತ್ರವೇ ದೊರೆಯುತ್ತಿದ್ದ ಮಾನ್ಯತೆ ಇಂದು ಎಲ್ಲಾ ಮಾದರಿಯ ಕ್ರೀಡೆಗಳಿಗೆ ಲಭ್ಯವಾಗುತ್ತಿದೆ. ಇದೇ ಮಾದರಿಯಲ್ಲಿ ಖ್ಯಾತಿಯ ಉತ್ತುಂಬದಲ್ಲಿದೆ ದೇಶಿಯ ಕ್ರೀಡೆ ಕಬ್ಬಡಿ. ಈಗಾಗಲೇ ಪ್ರೋ ಕಬ್ಬಡಿ ಲೀಗ್ ಹೆಚ್ಚಿನ ಮಂದಿ ಅಭಿಮಾನಿಗಳನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಹಲವು ಆವೃತ್ತಿಯನ್ನು ಪೂರೈಸಿರುವ ಪ್ರೋ ಕಬ್ಬಡಿ ಲೀಗ್ ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿ ಬಳಗವನ್ನು ಸೃಷ್ಠಿಸಿಕೊಳ್ಳುವುದರೊಂದಿಗೆ ಕಬ್ಬಡಿ ಬಗ್ಗೆಯ ಆಸಕ್ತಿಯನ್ನು ಅಭಿಮಾನಿಗಳಲ್ಲಿ ಏರಿಕೆ ಮಾಡಿದೆ. ಈ ಹಿನ್ನಲೆಯಲ್ಲಿ ಕ್ರಿಕೆಟ್ ಮಾದರಿಯ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಇದನ್ನು ಅರಿತುಕೊಂಡಿರುವ ಗೂಗಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.
ಇನ್ನು ಮುಂದೆ ಕಬ್ಬಡಿ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ತಂಡದ ಮ್ಯಾಚ್ ಇರುವ ಸಂದರ್ಭದಲ್ಲಿ ಸ್ಕೋರ್ ತಿಳಿದುಕೊಳ್ಳಲು ಪರದಾಡುವ ಅಗತ್ಯತೆ ಇಲ್ಲ. ಬದಲಾಗಿ ಗೂಗಲ್ ನಲ್ಲಿಯೇ ಪ್ರತಿ ಪಂದ್ಯದ ಲೈವ್ ಸ್ಕೋರ್ ಅನ್ನು ನೋಡಬಹುದಾಗಿದೆ. ಪ್ರೋ ಕಬ್ಬಡಿ ಲೀಗ್ ಪಂದ್ಯದ ಪ್ರತಿ ವಿವರವೂ ಗೂಗಲ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ.
ಈ ಹಿಂದೆ ಕೇವಲ ಕ್ರಿಕೆಟ್ ಪಂದ್ಯದ ಮಾಹಿತಿ ಹಾಗೂ ಪಂದ್ಯದ ಸ್ಕೋರ್ ಕುರಿತ ಮಾಹಿತಿಯನ್ನು ಗೂಗಲ್ ನಲ್ಲಿ ಕಾಣಬಹುದಾಗಿತ್ತು. ಆದರೆ ಇನ್ನು ಮುಂದೆ ಇದೇ ಮಾದರಿಯಲ್ಲಿ ನೀವು ಗೂಗಲ್ ನಲ್ಲಿ ಪ್ರೋ ಕಬ್ಬಡಿ ಲೀಗ್ ಪಂದ್ಯಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ನಿಮ್ಮ ಕಬ್ಬಡಿ ಪಂದ್ಯದ ಪ್ರೀತಿಯೂ ಇನ್ನಷ್ಟು ಹೆಚ್ಚಾಗಲಿದೆ.
ಮಾರುಕಟ್ಟೆಯಲ್ಲಿ ಯಾವುದು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತಿದೆ ಎಂಬುದನ್ನು ತ್ವರಿತವಾಗಿ ಅರ್ಥ ಮಾಡಿಕೊಳ್ಳುವ ಗೂಗಲ್, ತನ್ನ ಬಳಕೆದಾರರನ್ನು ತೃಪ್ತಿ ಪಡಿಸುವ ಸಲುವಾಗಿ ಅದನ್ನು ಬಹು ಬೇಗನೇ ಬಳಕೆಗೆ ನೀಡಲಿದೆ. ಇದೇ ಮಾದರಿಯಲ್ಲಿ ಈ ಬಾರಿ ಕಬ್ಬಡಿಗೆ ಸಂಬಂಧಿಸಿದಂತೆ ಸ್ಕೋರ್ ನೋಡುವ ಅವಕಾಶವನ್ನು ಬಳಕೆದಾರರಿಗೆ ನೀಡುತ್ತಿದೆ.
ಸದ್ಯ ಗೂಗಲ್ ನೀಡಿರುವ ಹೊಸ ಮಾದರಿಯ ಕಬ್ಬಡಿ ಸ್ಕೋರ್ ನೋಡುವ ಅವಕಾಶದಿಂದಾಗಿ ಪ್ರೋ ಕಬ್ಬಡಿ ಲೀಗ್ ಅಭಿಮಾನಿಗಳಿಗೆ ಸಾಕಷ್ಟು ಖುಷಿಯಾಗಿದ್ದು, ಇನ್ನು ಮುಂದೆ ಎಲ್ಲಿ ಬೇಕಾದರು ಸ್ಕೋರ್ ನೋಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇನ್ನು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಕಬ್ಬಡಿ ರೋಮಾಂಚನವನ್ನು ಅನುಭವಿಸಬಹುದಾಗಿದೆ.


Click it and Unblock the Notifications





