ಬುದ್ದಿಮಟ್ಟ ಹೆಚ್ಚಿಸುವ ಪಝಲ್ ಬಿಡಿಸುವ ತಂತ್ರಗಾರಿಕೆಯನ್ನು ಈ ಆಪ್ ನಿಂದ ತಿಳಿಯಿರಿ..

|

ಪ್ರತಿಯೊಬ್ಬ ಪೋಷಕರೂ ಕೂಡ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರಬೇಕು, ಸಾಮಾಜಿಕ ಜ್ಞಾನ ಅವರಲ್ಲಿ ಅಧಿಕವಾಗಿರಬೇಕು ಎಂದು ಬಯಸುತ್ತಾರೆ. ಮಕ್ಕಳ ಬುದ್ಧಿಮತ್ತೆ ಹೆಚ್ಚಾಗಬೇಕು ಅಂದರೆ ಅದಕ್ಕೆ ಪೋಷಕರೂ ಕೂಡ ಸಾಥ್ ನೀಡಬೇಕು.

ಆದರೆ ಕೆಲವು ವಿಚಾರಗಳು ಪೋಷಕರಿಗೂ ಕೂಡ ಸವಾಲಾಗಿರುತ್ತದೆ ಮತ್ತು ಮಕ್ಕಳು ಪ್ರಶ್ನೆ ಮಾಡಿದಾಗ ಅವರ ಬಳಿ ಅದಕ್ಕೆ ಉತ್ತರವಿಲ್ಲದೇ ಇರುವ ಸಾಧ್ಯತೆಗಳಿರುತ್ತೆ. ಹಾಗಂತ ಅದಕ್ಕಾಗಿ ಪೋಷಕರು ಈಗ ಚಿಂತಿಸಬೇಕಾಗಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ನಿಮಗೆ ಸಾಥ್ ನೀಡುತ್ತದೆ. ಹೇಗೆ ಅಂತೀರಾ ಲೇಖನದ ಮುಂದಿನ ಭಾಗ ಓದಿ.

ಬುದ್ದಿಮಟ್ಟ ಹೆಚ್ಚಿಸುವ ಪಝಲ್ ಬಿಡಿಸುವ ತಂತ್ರಗಾರಿಕೆಯನ್ನು ಈ ಆಪ್ ನಿಂದ ತಿಳಿಯಿರಿ

ಎಲ್ಲರಿಗೂ ತಿಳಿದಿರುವ ವಿಚಾರವೇನೆಂದರೆ ಮಕ್ಕಳ ಬುದ್ದಿ ಚುರುಕಾಗಲು ಪಝಲ್ ಗಳನ್ನು ಬಿಡಿಸುವುದು ಬಹಳ ಸಹಕಾರಿ ಎಂದು. ಆದರೆ ಪಝಲ್ ಗಳನ್ನು ಮಕ್ಕಳು ಬಿಡಿಸಬೇಕು ಎಂದರೆ ಪೋಷಕರಿಗೆ ಅದರ ಬಗ್ಗೆ ಸ್ವಲ್ಪವಾದರೂ ತಿಳುವಳಿಕೆ ಇರಬೇಕು. ಅಂತಹದ್ದೇ ಒಂದು ಆಟ ಕ್ಯೂಬ್ ಎಕ್ಸ್..

ಎಲ್ಲರಿಗೂ ತಿಳಿದಿರುವ ಆಟವೇ ಆಗಿದೆ. ಬಣ್ಣಗಳನ್ನು ಜೋಡಿಸಬೇಕು. ಆದರೆ ಹಾಗೆಯೇ ಸುಮ್ಮನೇ ತಿರುಗಿಸುತ್ತಾ ಸಾಗಿದರೆ ಎಷ್ಟು ವರ್ಷ ಕಳೆದರೂ ನಿಮಗೆ ಆ ಫಝಲ್ ನ್ನು ಬಿಡಿಸಲು ಸಾಧ್ಯವಿಲ್ಲ. ಅದಕ್ಕೊಂದು ಟ್ರಿಕ್ಸ್ ಇದೆ. ಕರಾರುವಕ್ಕಾದ ಕೆಲವು ನಿಯಮಗಳಿವೆ. ಆದರೆ ಅದನ್ನು ಅಷ್ಟು ಸುಲಭದಲ್ಲಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವಾ? ಹಾಗಿದ್ದರೆ ಮಕ್ಕಳಿಗೆ ಹೇಳಿ ಕೊಡಬೇಕು ಅಂದರೆ ಪೋಷಕರು ಮೊದಲು ಅರ್ಥ ಮಾಡಿಕೊಳ್ಳಬೇಕು.

ಬುದ್ದಿಮಟ್ಟ ಹೆಚ್ಚಿಸುವ ಪಝಲ್ ಬಿಡಿಸುವ ತಂತ್ರಗಾರಿಕೆಯನ್ನು ಈ ಆಪ್ ನಿಂದ ತಿಳಿಯಿರಿ

ಒಂದು ವೇಳೆ ಪೋಷಕರಾಗಿರುವ ನಿಮಗೆ ಈ ಪಝಲ್ ಬಿಡಿಸಲು ಗೊತ್ತಿಲ್ಲದೆ ಇದ್ದರೆ ನಿಮ್ಮ ಸಹಾಯಕ್ಕೆ ನಿಮ್ಮ ಆಂಡ್ರಾಯ್ಡ್ ಫೋನ್ ಬರಲಿದೆ.. ಹೇಗೆ ಅಂತೀರಾ.. ಮುಂದೆ ಓದಿ..

ಈ ಪಝಲ್ ನ್ನು ಬಿಡಿಸಲು ನಿಮಗೆ ಸರಳವಾಗಿ ಸಹಾಯ ಮಾಡುವ ಆಪ್ ಒಂದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುತ್ತೆ. ಅದುವೇ “cube x”. ಹೇಗೆ ಕ್ಯೂಬ್ ಎಕ್ಸ್ ಸಹಾಯದಿಂದ ಪಝಲ್ ಬಿಡಿಸುವುದು? ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1

ಹಂತ 1

ಪ್ಲೇ ಸ್ಟೋರ್ ನಲ್ಲಿ "cube x" ನ್ನು ಹುಡುಕಾಡಿ. ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿ.

ಹಂತ 2

ಹಂತ 2

ನಿಮ್ಮ ಕೈಯಲ್ಲಿರುವ ಕ್ಯೂಬ್ ನಲ್ಲಿ ಯಾವ್ಯಾವ ಬಣ್ಣಗಳು ಎಲ್ಲೆಲ್ಲಿ ಇವೆ ಎಂಬುದನ್ನು ಗಮನಿಸಿ.

ಹಂತ 3

ಹಂತ 3

ಇನ್ಸ್ಟಾಲ್ ಆಗಿರುವ ಕ್ಯೂಬ್ ಎಕ್ಸ್ ನ್ನು ತೆರೆಯಿರಿ ಮತ್ತು "solve" ನ್ನು ಕ್ಲಿಕ್ಕಿಸಿ

ಹಂತ 4

ಹಂತ 4

ಇಲ್ಲಿ ಎರಡು ಆಯ್ಕೆಗಳಿವೆ ಮಾನ್ಯೂವಲ್ ಇನ್ ಪುಟ್ ಮತ್ತು ಕ್ಯಾಮರಾ ಇನ್ ಪುಟ್. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಮ್ಯಾನ್ಯುವಲ್ ಇನ್ ಪುಟ್ ಆಯ್ಕೆ ಮಾಡಿದರೆ ಹಂತ 5 ನ್ನು ಅನುಸರಿಸಿ. ಕ್ಯಾಮರಾ ಇನ್ ಪುಟ್ ಆದರೆ ಹಂತ 6 ನ್ನು ಅನುಸರಿಸಿ.

ಹಂತ 5

ಹಂತ 5

ನಿಮ್ಮ ಕೈಯಲ್ಲಿರುವ ಕ್ಯೂಬ್ ನಲ್ಲಿ ಯಾವ್ಯಾವ ಬಣ್ಣಗಳು ಎಲ್ಲೆಲ್ಲಿ ಇವೆ ಎಂಬ ಸಂಪೂರ್ಣ ಮಾಹಿತಿಯನ್ನು ಆಪ್ ಗೆ ಒದಗಿಸಬೇಕು. ಮೊದಲು ಆಪ್ ನಲ್ಲಿ ತೋರಿಸುವ ಮಧ್ಯದ ಬಣ್ಣ ಯಾವುದಿದೆ ಗಮನಿಸಿ. ಅದಕ್ಕೆ ಅನುಸಾರವಾಗಿ ನಿಮ್ಮ ಕೈಯಲ್ಲಿರುವ ಕ್ಯೂಬ್ ನ ಬಣ್ಣವನ್ನು ನೋಡಿ. ಉದಾಹರಣೆಗೆ ಹಳದಿ ಚೌಕದ ಸುತ್ತ ಯಾವೆಲ್ಲ ಬಣ್ಣದ ಚೌಕಗಳಿವೆ ಎಂಬ ಇನ್ ಪುಟ್ ನ್ನು ಆಪ್ ನಲ್ಲೂ ಅದೇ ಅನುಸಾರವಾಗಿ ಒದಗಿಸಿ. ಹೀಗೆ ಎಲ್ಲಾ ಬಣ್ಣಗಳ ಮತ್ತು ಕ್ಯೂಬ್ ನ ಎಲ್ಲಾ ಭಾಗದ ಮಾಹಿತಿಯನ್ನೂ ಒದಗಿಸಿ. ಹೀಗೆ ಆರು ದಿಕ್ಕುಗಳಲ್ಲಿನ ಎಲ್ಲಾ ಬಣ್ಣಗಳ ವಿವರವನ್ನು ಅದು ಕೇಳುತ್ತದೆ. ನೀವು ಪ್ರತಿ ಬಣ್ಣವನ್ನು ಕ್ಲಿಕ್ಕಿಸಿ ಮಾಹಿತಿ ನೀಡಬೇಕು.

 ಹಂತ 6

ಹಂತ 6

ಒಂದು ವೇಳೆ ಕ್ಯಾಮರಾ ಇನ್ ಪುಟ್ ಆಯ್ಕೆಯನ್ನು ಬಯಸಿದರೆ, ಮೊದಲಿಗೆ ಆಪ್ ಗೆ ನೀವು ನಿಮ್ಮ ಕ್ಯಾಮರಾ ಬಳಸಲು ಪರ್ಮಿಷನ್ ನೀಡಬೇಕು. ಕ್ಯಾಮರಾ ಇನ್ ಪುಟ್ ಕ್ಲಿಕ್ಕಿಸಿದ ಕೂಡಲೇ ನಿಮ್ಮ ಕ್ಯಾಮರಾ ತೆರೆದುಕೊಳ್ಳುತ್ತದೆ. ನೀವು ನಿಮ್ಮ ಕೈಯಲ್ಲಿರುವ ಕ್ಯೂಬಿನ ಎಲ್ಲಾ ದಿಕ್ಕಿನ ಚಿತ್ರಣವನ್ನು ಆಪ್ ಗೆ ಕ್ಯಾಮರಾ ಮೂಲಕ ಒದಗಿಸಬೇಕು. ಒಂದು ವೇಳೆ ಯಾವುದೇ ದಿಕ್ಕಿನ ಮಾಹಿತಿ ಸರಿಯಾಗಿ ಲಭ್ಯವಾಗದೇ ಇದ್ದರೂ ಆಪ್ ಮತ್ತೊಮ್ಮೆ ಕ್ಯೂಬ್ ನ್ನು ಕ್ಯಾಮರಾ ಮುಂದೆ ತೋರಿಸುವಂತೆ ಬೇಡುತ್ತದೆ.

ಹಂತ 7

ಹಂತ 7

ಹಂತ 5 ಮತ್ತು ಹಂತ 6 ಯಾವುದೇ ಆದರೂ ಅದು ಮುಗಿದ ನಂತರ ಸ್ಟಾರ್ಟ್ ಕ್ಲಿಕ್ಕಿಸಿ

ಹಂತ 8

ಹಂತ 8

ನಿಮಗೆ ನಿಮ್ಮ ಕೈಯಲ್ಲಿರುವ ಕ್ಯೂಬ್ ನ್ನು ಹೇಗೆ ಪರಿಹರಿಸಬಹುದು ಎಂಬ ಬಗ್ಗೆ ಹಂತಗಳ ವಿವರಗಳು ಲಭ್ಯವಾಗುತ್ತೆ. ಒಂದು ವೇಳೆ ಎರಡು ಅಥವಾ ಅದಕ್ಕಿಂತ ಹೆಚ್ಚು ವಿಧದಲ್ಲಿ ಕ್ಯೂಬ್ ಪಝಲ್ ಬಿಡಿಸಲು ಸಾಧ್ಯವಿದ್ದರೆ ಅದನ್ನೂ ಕೂಡ ಆಪ್ ತೋರಿಸುತ್ತದೆ. ನೀವು ಅದು ತೋರಿಸುವ ಪರಿಹಾರವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಕ್ಯೂಬ್ ನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಹಂತಹಂತವಾಗಿ ತಿಳಿಯಬಹುದು.

ಹೀಗೆ ಮೊದಲು ನೀವು ಪಝಲ್ ಬಿಡಿಸುವ ತಂತ್ರಗಾರಿಕೆ ತಿಳಿದರೆ ಮುಂದೆ ನಿಮ್ಮ ಮಕ್ಕಳಿಗೆ ಅರ್ಥೈಸಲು ಸುಲಭವಾಗುತ್ತದೆ. ಇದನ್ನೆಲ್ಲ ನೋಡಿದರೆ ತಂತ್ರಜ್ಞಾನ ಬೆಳೆದಿರುವುದು ನಿಜಕ್ಕೂ ಎಷ್ಟು ಒಳ್ಳೆಯದಾಯಿತು ಎಂದು ಅನ್ನಿಸುತ್ತದೆ ಅಲ್ವಾ?

Best Mobiles in India

Read more about:
English summary
Learn from this puzzle app with strategic enhancement technique. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X