Subscribe to Gizbot

ಎರಡನೇ ಇನ್ನಿಂಗ್ಸ್ ಶುರುಮಾಡಲು ಬರುತ್ತಿದೆ ಲೀಕೋ ಮೊಬೈಲ್ ಕಂಪೆನಿ!!

Posted By: Tejaswini P G

ನಮ್ಮೆಲ್ಲರ ನೆನಪಿನಿಂದ ಮರೆಯಾಗಿರುವ ಚೀನಾದ ಮೊಬೈಲ್ ತಯಾರಕ ಲೀಕೋ ಅನ್ನು ಮತ್ತೆ ಕಾಣುವ ಸಮಯ ಬಂದಿದೆ. ಕೆಲ ವರದಿಗಳ ಅನುಸಾರ ಈ ಚೀನೀ ಸಂಸ್ಥೆ ಸ್ಮಾರ್ಟ್ಫೋನ್ ವ್ಯವಹಾರದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲು ಸಜ್ಜಾಗಿದ್ದು ಅದಕ್ಕೆ ಎಲ್ಲಾ ತಯಾರಿಯನ್ನೂ ನಡೆಸುತ್ತಿದೆ. IANS ನ ಅನುಸಾರ ಲೀಕೋ ಹೊಸ ಸ್ಮಾರ್ಟ್ಫೋನ್ ಒಂದರ ತಯಾರಿಯಲ್ಲಿ ತೊಡಗಿದ್ದು ಅದು 18:9 ಆಸ್ಪೆಕ್ಟ್ ಅನುಪಾತದ ಡಿಸ್ಪ್ಲೇ ಹೊಂದಿರಲಿದೆ. ಈ ಸ್ಮಾರ್ಟ್ಫೋನ್ ನ ಹೆಸರು Le X ಎಂದಿರಲಿದೆ.

ಗಿಜ್ಮೋಚೈನಾ ನ ವರದಿಯೊಂದರಲ್ಲಿ ಲೀಕೋ ದ ಮುಂದಿನ ಫುಲ್ ಸ್ಕ್ರೀನ್ ಸ್ಮಾರ್ಟ್ಫೋನ್ ನ ಚಿತ್ರಗಳು ಸೋರಿಕೆಯಾಗಿವೆ. ಈ ಚಿತ್ರಗಳು ಚೀನಾ ಸಾಮಾಜಿಕ ಜಾಲತಾಣವಾದ ವೇಯ್ಬೋ ನಲ್ಲೂ ಕಂಡುಬಂದಿದ್ದು ಈ ಹೊಸ ಸ್ಮಾರ್ಟ್ಫೋನ್ ನ ಕುರಿತು ಒಂದಷ್ಟು ಮಾಹಿತಿ ನೀಡುತ್ತಿದೆ. ಮೊದಲ ಚಿತ್ರದಲ್ಲಿ ಮೊಬೈಲ್ ನ ಮುಂಭಾಗ ಮತ್ತು ಹಿಂಭಾಗಳೆರಡೂ ಸ್ಪಷ್ಟವಾಗಿ ಕಾಣುತ್ತಿದ್ದು ಈ ಫೋನ್ ತುಂಬಾ ತೆಳುವಾದ ಅಂಚನ್ನು ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಎರಡನೇ ಇನ್ನಿಂಗ್ಸ್ ಶುರುಮಾಡಲು ಬರುತ್ತಿದೆ ಲೀಕೋ ಮೊಬೈಲ್ ಕಂಪೆನಿ!!

ಈ ನೂತನ ಸ್ಮಾರ್ಟ್ಫೋನ್ ತುಂಬಾ ಸುವ್ಯವಸ್ಥಿತವಾದ ವಿನ್ಯಾಸವನ್ನು ಹೊಂದಿದೆ. ಈ ಫೋನ್ ನ ಮುಂಭಾಗ ಮತ್ತು ಹಿಂಭಾಗಗಳೆರಡೂ ಕರ್ವ್ಡ್ ಅಥವಾ ಬಾಗಿದ ಅಂಚನ್ನು ಹೊಂದಿದ್ದು ಭಾರತದಲ್ಲಿ ಈ ಮೊದಲು ಬಿಡುಗಡೆಯಾಗಿರುವ ಲೀಕೋ ಫೋನ್ಗಳಿಗಿಂತ ವಿಭಿನ್ನವಾಗಿದೆ. ವಾಲ್ಯೂಮ್ ಬಟನ್ಗಳು ಫೋನ್ ನ ಎಡಭಾಗದಲ್ಲಿದ್ದು ಫೋನ್ ನ ಮೇಲಿನ ಅಂಚಿನಲ್ಲಿ 3.5mm ಹೆಡ್ಫೋನ್ ಜ್ಯಾಕ್ ಕೂಡ ಇದೆ. ಲಭ್ಯವಿರುವ ಚಿತ್ರಗಳ ಅನುಸಾರ ಇದು ಉತ್ತಮ ಸ್ಕ್ರೀನ್-ಟು-ಬಾಡಿ ಅನುಪಾತವನ್ನೂ ಹೊಂದಿದೆ. ಇದು ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಹೊಂದಿದ್ದು ಜೊತೆಗೆ LED ಫ್ಲ್ಯಾಶ್ ಕೂಡ ಇದೆ.

ಎರಡನೇ ಚಿತ್ರ ಈ ಸ್ಮಾರ್ಟ್ಫೋನ್ ನ ಹಿಂಬದಿಯ ಸ್ಪಷ್ಟ ಚಿತ್ರಣ ನೀಡುತ್ತಿದ್ದು ಇದರ ಲಂಬವಾಗಿ ಜೋಡಿಸಲಾಗಿರುವ ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಮತ್ತು ಬಾಗಿದ ಅಂಚು ನೋಕಿಯಾ 8 ಅನ್ನು ನೆನಪಿಸುತ್ತದೆ. ಲೀಕೋ ನ ಈ ಹೊಸ ಸ್ಮಾರ್ಟ್ಫೋನ್ ನ ವಿನ್ಯಾಸಕ್ಕೆ ನೋಕಿಯಾ 8 ಸ್ಫೂರ್ತಿಯಾಗಿರಬಹುದು.

ಎರಡನೇ ಇನ್ನಿಂಗ್ಸ್ ಶುರುಮಾಡಲು ಬರುತ್ತಿದೆ ಲೀಕೋ ಮೊಬೈಲ್ ಕಂಪೆನಿ!!

ಲೀಕೋ ನ ಹೊಸ ಸ್ಮಾರ್ಟ್ಫೋನ್ ಮಧ್ಯಮ ಶ್ರೇಣಿಯದ್ದಾಗಿರಬಹುದೆಂದು ನಮ್ಮ ಅಭಿಪ್ರಾಯ. ಈ ಮೊಬೈಲ್ ಒಂದು ವೇಳೆ ಭಾರತದ ಮಾರುಕಟ್ಟೆಗೆ ಬಂದರೆ ಅದು ಶಿಯೋಮಿ ರೆಡ್ಮಿ ನೋಟ್ 5 ಪ್ರೋ, ಮೋಟೋ ಜಿ5 ಪ್ಲಸ್, ಮತ್ತು ಇತರ ರೂ 20,000 ದೊಳಗಿನ ಮೊಬೈಲ್ಗಳೊಂದಿಗೆ ಪೈಪೋಟಿ ನಡೆಸಲಿದೆ. ಆದರೆ ಲೀಕೋ ಮತ್ತೆ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸುವಲ್ಲಿ ಸಫಲವಾಗುವುದೇ ಎಂದು ಕಾದು ನೋಡಬೇಕಾಗಿದೆ.

ಕಳೆದ ವರ್ಷ ತಮ್ಮ ಪೂರೈಕೆದಾರರು ಮತ್ತು ಸಿಬ್ಬಂದಿಗಳಿಗೆ ಹಣ ಪಾವತಿಸುವಲ್ಲಿ ವಿಫಲವಾದ ಲೀಕೋ ಸಂಸ್ಥೆ ಭಾರತದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿತ್ತು ಎಂಬುದು ಗಮನಿಸ ಬೇಕಾದ ವಿಚಾರವಾಗಿದೆ. ಇದರ ಫಲಿತಾಂಶವಾಗಿ ಸೇಲ್ಸ್, ಮಾರಕೆಟಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ವಿಭಾಗದಲ್ಲಿ 85% ಕ್ಕೂ ಅಧಿಕ ಸಿಬ್ಬಂದಿಯನ್ನು ಲೀಕೋ ಸಂಸ್ಥೆ ಹೊರ ಹಾಕಿತ್ತು. 2016ರಲ್ಲಿ ಕ್ಷಿಪ್ರವಾಗಿ ವಿಸ್ತಾರಗೊಂಡ ಲೀಕೋ ನಂತರ ಹೇಳ ಹೆಸರಿಲ್ಲದಂತೆ ಮಾಯವಾಗಿತ್ತು ಮತ್ತು ತಮ್ಮ ಸಿಬ್ಬಂದಿಗಳಿಗೆ ಮತ್ತು ವೆಂಡರ್ಗಳಿಗೆ ಸಲ್ಲಬೇಕಾಗಿದ್ದ ಹಣ ಅವರ ಕೈಸೇರದಂತಾಗಿತ್ತು.

ಲೀಕೋ ಭಾರತದಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದರೂ ನಾವು ನಮ್ಮ ಓದುಗರು ಈ ಸಂಸ್ಥೆಯ ಉತ್ಪನ್ನಗಳಲ್ಲಿ ಹಣ ಹೂಡುವುದನ್ನು ಪ್ರೋತ್ಸಾಹಿಸುವುದಿಲ್ಲ.ಲೀಕೋ ನ ಭವಿಷ್ಯ ತೊಂದರೆಗೊಳಗಾಗಿರುವಂತೆ ತೋರುತ್ತಿದ್ದು, ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಇದಕ್ಕಿಂತ ಉತ್ತಮ ಆಯ್ಕೆಗಳು ಲಭ್ಯವಿರುವುದಂತೂ ನಿಜ.

English summary
LeEco plans second innings with an 18:9 aspect ratio smartphone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot