Subscribe to Gizbot

ಜನಸಾಮಾನ್ಯರಿಗೆ ವರದಾನವಾದ "ಲೀಗಲ್‌' ಮೊಬೈಲ್‌ ಆಪ್‌!! ಏಕೆ ಗೊತ್ತಾ?

Written By:

ಹೈಕೋರ್ಟ್‌ ಸೇರಿ ವಿವಿಧ ನ್ಯಾಯಾಲಯ ತೀರ್ಪುಗಳ ಮಾಹಿತಿ ಮತ್ತು ರಾಜ್ಯದಲ್ಲಿನ ವಕೀಲರ ಮೊಬೈಲ್‌ ಹಾಗೂ ದೂರವಾಣಿ ಸಂಖ್ಯೆ ಒದಗಿಸುವ "ಲೀಗಲ್‌' ಮೊಬೈಲ್‌ ಆಪ್‌ ಸಾಮಾನ್ಯರಿಗೆ ವರವಾದಂತಿದೆ.! ಕಾನೂನು ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ.!!

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಬಿಡುಗಡೆಗೊಳಿಸಿದ್ದ "ಲೀಗಲ್‌' ಮೊಬೈಲ್‌ ಆಪ್‌ ಮೂಲಕ ತಂತ್ರಜ್ಞಾನ ದಿಂದ ಕಾನೂನು ಹಾಗೂ ನ್ಯಾಯಾಂಗ ಕ್ಷೇತ್ರದಲ್ಲಿ ಕೂತಲ್ಲೇ ಕೆಲಸ ಕಾರ್ಯನಿರ್ವಹಿಸಲು ಇಂದು ಸಾಧ್ಯವಾಗಿದೆ.! ಬಹುತೇಕ ಎಲ್ಲಾ ಕಾನೂನು ಸೇವೆಗಳು ಜನರಿಗೆ ಆಪ್‌ ಮೂಲಕ ತಲುಪುತ್ತಿವೆ.!!

ಜನಸಾಮಾನ್ಯರಿಗೆ ವರದಾನವಾದ

ಈಗಾಗಲೇ 5000 ಕ್ಕಿಂತ ಹೆಚ್ಚು ಜನರು "ಲೀಗಲ್‌' ಮೊಬೈಲ್‌ ಆಪ್‌ ಸೇವೆಯನ್ನು ಬಳಕೆ ಮಾಡುತ್ತಿದ್ದು, ಆಪ್‌ ಡೌನ್‌ಲೋಡ್ ಮಾಡುವವರ ಸಂಖ್ಯೆಯೂ ಕೂಡ ಬಹಳಷ್ಟು ಹೆಚ್ಚಾಗುತ್ತಿದೆ.!! ಈ ಆಪ್‌ ಮೂಲಕ ವಕೀಲರು, ಕಕ್ಷಿದಾರರು ಹಾಗೂ ಕೋರ್ಟ್‌ಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ.

ಜನಸಾಮಾನ್ಯರಿಗೆ ವರದಾನವಾದ

ಪ್ರಸ್ತುತ ಸಮಾಜದಲ್ಲಿ ಪ್ರತಿ ಕ್ಷೇತ್ರವೂ ತಂತ್ರಜ್ಞಾನ ಅಳವಡಿಸಿಕೊಂಡು ತನ್ನ ಸೇವೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬೇಕು ಎಂದು ಎನ್‌.ಸಂತೋಷ್‌ ಹೆಗ್ಡೆ ಸಲಹೆ ಮಾಡಿದ್ದು, www.legall.co.in ಲಿಂಕ್ ಮೂಲಕ ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

English summary
Want to hire a lawyer to handle your case in a different location, or need legal help to set up a start-up? to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot