ಶಿಯೋಮಿ ರೆಡ್ಮಿ ನೋಟ್ 5 ಗೆ ಪ್ರತಿಸ್ಪರ್ಧಿಯಂತೆ ಲೆನೋವೋ S5!

By Tejaswini P G
|

ಕೆಲದಿನಗಳ ಹಿಂದೆ ಲೆನೋವೋ ಗ್ರೂಪ್ ನ ವಿಪಿ ಮತ್ತು ಜುಕ್ ಬ್ರ್ಯಾಂಡ್ ನ ಮಾಜಿ CEO ಆದ ಚ್ಯಾಂಗ್ ಚೆಂಗ್ ಅವರು ಲೆನೋವೋ S5 ಸ್ಮಾರ್ಟ್ಫೋನ್ ನ ಅಸ್ತಿತ್ವವನ್ನು ದೃಢೀಕರಿಸಿದ್ದಾರೆ. ನೂತನ ಲೆನೋವೋ S5 ಸ್ಮಾರ್ಟ್ಫೋನ್ ಮಾರ್ಚ್ 20ರಂದು ಸಂಸ್ಥೆಯ ಸ್ಥಳೀಯ ಮಾರುಕಟ್ಟೆಯಾದ ಚೀನಾದಲ್ಲಿ ಬಿಡುಗಡೆಯಾಗಲಿರುವುದಾಗಿ ಅವರು ವೇಯ್ಬೋ ನಲ್ಲಿ ತಿಳಿಸಿದ್ದಾರೆ. ಈಗ ಅದೇ ಮೂಲಗಳಿಂದ ಈ ಮೊಬೈಲ್ ಕುರಿತಾಗಿ ಹೆಚ್ಚಿನ ಮಾಹಿತಿಗಳು ತಿಳಿದುಬಂದಿವೆ.

ಶೀಘ್ರದಲ್ಲಿಯೇ ಚೀನಾದಲ್ಲಿ ಬಿಡುಗಡೆಯಾಗಲಿರುವ ಶಿಯೋಮಿ ರೆಡ್ಮಿ ನೋಟ್ 5 ಗಿಂತ ಲೆನೋವೋ S5 ನ ಕಾರ್ಯಕ್ಷಮತೆ ಬಹಳ ಉತ್ತಮವಾಗಿದೆ ಎಂದು ಚ್ಯಾಂಗ್ ಚೆಂಗ್ ಅವರು ವೇಯ್ಬೋ ನಲ್ಲಿ ತಿಳಿಸಿದ್ದಾರೆ.ಶಿಯೋಮಿ ಯ CEO ಲೇ ಜುನ್ ಅವರು ರೆಡ್ಮಿ ನೋಟ್ 5 ಸ್ನ್ಯಾಪ್ಡ್ರಾಗನ್ 636 SoC ಮತ್ತು 6GB RAM ನೊಂದಿಗೆ ಉತ್ತಮ ಕಾರ್ಯಕ್ಷಮತೆ ತೋರಲಿದೆ ಎಂದು ತಿಳಿಸುವ ಟೀಸರ್ ಒಂದನ್ನು ಬಿಡುಗಡೆಮಾಡಿದ ಬೆನ್ನಲ್ಲೇ ಚ್ಯಾಂಗ್ ಚೆಂಗ್ ಲೆನೋವೋ S5 ಕುರಿತು ಈ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.

ಜುನ್ ಅವರು ವೇಯ್ಬೋ ನಲ್ಲಿ ರೆಡ್ಮಿ ನೋಟ್ 5 ನ RAM ಮತ್ತು ಚಿಪ್ಸೆಟ್ ವಿವರಗಳನ್ನು ದೃಢೀಕರಿಸಿದ ನಂತರ ಲೆನೋವೋ ಗ್ರೂಪ್ ನ ವಿಪಿ ಅವರು ಜುನ್ ಅವರ ವೇಯ್ಬೋ ಪೋಸ್ಟ್ ಅನ್ನು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸದರು. ಅಲ್ಲದೆ ಮಾರ್ಚ್ 20ರಂದು ಬಿಡುಗಡೆಯಾಗಲಿರುವ ಲೆನೋವೋ S5 ಸ್ಮಾರ್ಟ್ಫೋನ್ ನ ಕಾರ್ಯಕ್ಷಮತೆ ರೆಡ್ಮಿ ನೋಟ್ 5 ಗಿಂತ ಉತ್ತಮವಾಗಿರಲಿದೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

Bike-Car ಜಾತಕ ಹೇಳುವ ಆಪ್..!

ಈ ವಾರದ ಆರಂಭದಲ್ಲಿ ಅವರು ಮಾಡಿದ ವೇಯ್ಬೋ ಪೋಸ್ಟ್ನಲ್ಲಿ ಚೆಂಗ್ ಅವರು ಈ ನೂತನ ಲೆನೋವೋ ಸ್ಮಾರ್ಟ್ಫೋನ್ ಜುಕ್ ಸ್ಮಾರ್ಟ್ಫೋನ್ ಗಳಲ್ಲಿ ಇರುವ ಜುಕ್ ಆಂಡ್ರಾಯ್ಡ್ ಸ್ಕಿನ್ ಅನ್ನೇ ಹೊಂದಿರುವುದಾಗಿ ಹೇಳಿದ್ದರು. ಅಲ್ಲದೆ ಈ ಸ್ಮಾರ್ಟ್ಫೋನ್ ನಲ್ಲಿ ಹಾರ್ಡ್ವೇರ್ ಸೆಕ್ಯೂರಿಟಿ ಚಿಪ್ ಒಂದು ಇರಲಿರುವುದಾಗಿ ಅವರು ತಿಳಿಸಿದ್ದರು. ಟೀಸರ್ ನೊಂದಿಗೆ ಲಭ್ಯವಿರುವ ಚಿತ್ರದ ಅನುಸಾರ ಈ ಹೊಸ ಸ್ಮಾರ್ಟ್ಫೋನ್ ರಿಫ್ಲೆಕ್ಟಿವ್ ಮೆಟಲ್ ಬಾಡಿ ಮತ್ತು ಕರ್ವ್ಡ್ ವಿನ್ಯಾಸ ಹೊಂದಿರುವ ಸಾಧ್ಯತೆಗಳಿವೆ. ಸಧ್ಯಕ್ಕೆ ಈ ಮೊಬೈಲ್ ಕುರಿತು ಇದಲ್ಲದೆ ಬೇರೆ ಯಾವ ಮಾಹಿತಿಯೂ ಲಭ್ಯವಿಲ್ಲ.

ಜುಕ್ ಸಹ ಬ್ರ್ಯಾಂಡ್ ಅನ್ನು ಮುಚ್ಚಿದ ನಂತರ ಲೆನೋವೋ ಸಂಸ್ಥೆಯು ತಾನು ವಶಪಡಿಸಿಕೊಂಡ ಮೋಟೋರೋಲಾ ಸಂಸ್ಥೆಯ ಮೋಟೋ ಬ್ರ್ಯಾಂಡ್ ನ ಸ್ಮಾರ್ಟ್ಫೋನ್ ನತ್ತ ಹೆಚ್ಚಿನ ಗಮನ ಹರಿಸಿತ್ತು. ಆದರೆ ಚೀನೀ ಮಾರುಕಟ್ಟೆಯಲ್ಲಿ ಮೋಟೋ ಸ್ಮಾರ್ಟ್ಫೋನ್ ಗಳು ಅಷ್ಟಾಗಿ ಜನಪ್ರಿಯವಾಗದ ಕಾರಣ ಲೆನೋವೋ ಸಂಸ್ಥೆಯು ತನ್ನ ಲೆನೋವೋ S5 ಸ್ಮಾರ್ಟ್ಫೋನ್ ನೊಂದಿಗೆ ತನ್ನದೇ ಸ್ವಂತ ಬ್ರ್ಯಾಂಡ್ ನ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವತ್ತ ಗಮನಹರಿಸುತ್ತಿದೆ.

ಲೆನೋವೋ S5 ನ ಇತ್ತೀಚಿನ ಟೀಸರ್ ಒಂದರಲ್ಲಿ ಆ ಸಾಧನದ ರೆಡ್ ಆವೃತ್ತಿಯೊಂದನ್ನು ಕಾಣಬಹುದಾಗಿದ್ದು, ಅದರ ರೇರ್ ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು LED ಫ್ಲ್ಯಾಶ್ ಇರುವ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ.ಈ ಟೀಸರ್ ನ ಚಿತ್ರದಲ್ಲಿ ಮೊಬೈಲ್ ನ ಹಿಂಭಾಗವನ್ನು ಸ್ಪಷ್ಟವಾಗಿ ಕಾಣಬಹುದಾಗಿದ್ದು ಅದು ಮೆಟಲ್ ಯುನಿಬಾಡಿ ವಿನ್ಯಾಸ ಹೊಂದಿರುವುದನ್ನು ಗಮನಿಸಬಹುದಾಗಿದೆ.

Best Mobiles in India

English summary
Lenovo S5 touted to be Xiaomi Redmi Note 5 rival. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X