'ಲಿಂಕ್‌ಡ್‌ಇನ್ ಲೈಟ್' ಲಿಂಕ್‌ಡ್‌ಇನ್‌ನ ಹೊಸ ಅಪ್ಲಿಕೇಶನ್ ಲಾಂಚ್

ಲಿಂಕ್‌ಡ್‌ಇನ್ 'ಲಿಂಕ್‌ಡ್‌ಇನ್ ಲೈಟ್' ಎಂಬ ಹೊಸ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ಇದು ನಿಮ್ಮ ಕನಸಿನ ಉದ್ಯೋಗವನ್ನು ಕೈಗೆಟಕುವಂತೆ ಮಾಡಲಿದೆ.

By Shwetha Ps
|

ವೃತ್ತಿಪರ ನೆಟ್‌ವರ್ಕಿಂಗ್ ದೈತ್ಯ ಲಿಂಕ್‌ಡ್‌ಇನ್ ಹೆಚ್ಚು ವೇಗವಾಗಿರುವ ಮತ್ತು ಸುಲಲಿತವಾಗಿರುವ ಅಪ್ಲಿಕೇಶನ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು ಇದರ ಹೆಸರು 'ಲಿಂಕ್‌ಡ್‌ಇನ್ ಲೈಟ್' ಎಂದಾಗಿದೆ. ಆಂಡ್ರಾಯ್ಡ್ ಓಎಸ್ ಆಧರಿಸಿರುವ ಲಿಂಕ್‌ಡ್‌ಇನ್ ಲೈಟ್ ಅಪ್ಲಿಕೇಶನ್ ಬಳಕೆದಾರರಿಗೆ ಅನನ್ಯವಾಗಿರುವ ಮತ್ತು ಅದ್ಭುತ ಅನುಭವವನ್ನು ನೀಡಲಿದೆ.

'ಲಿಂಕ್‌ಡ್‌ಇನ್ ಲೈಟ್' ಲಿಂಕ್‌ಡ್‌ಇನ್‌ನ ಹೊಸ ಅಪ್ಲಿಕೇಶನ್ ಲಾಂಚ್

ಭಾರತದಲ್ಲಿ ಹೆಚ್ಚು ಕಡಿಮೆ 97 ಶೇಕಡಾದಷ್ಟು ಆಂಡ್ರಾಯ್ಡ್ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ತಮ್ಮ ಡಿವೈಸ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದ್ದು, ಇದನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸರಳವಾಗಿ ರನ್ ಆಗುವಂತೆ ಮತ್ತು ವೇಗವಾಗಿ ಬಳಕೆದಾರರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸುವಂತೆ ನಿರ್ಮಿಸಲಾಗಿದೆ. ಬರೇ ಐದೇ ಸೆಕೆಂಡ್‌ಗಳಲ್ಲಿ ಇದು ಮಾಹಿತಿಯನ್ನು ಲೋಡ್ ಮಾಡಿ ಬಳಕೆದಾರರಿಗೆ ನೀಡಲಿದೆ. ಈ ಅಪ್ಲಿಕೇಶನ್ ಲಾಂಚ್‌ನಿಂದ ಹೆಚ್ಚು ಜನರು ಲಿಂಕ್‌ಡ್‌ಇನ್‌ಗೆ ಭೇಟಿ ನೀಡುವುದು ಖಚಿತವಾಗಿದೆ.

ಈ ಲೈಟ್ ಅಪ್ಲಿಕೇಶನ್ ಹೆಚ್ಚು ವೈವಿಧ್ಯಮಯವಾಗಿರುವ ಫೀಚರ್‌ಗಳನ್ನು ಒದಗಿಸಲಿದ್ದು ಸುದ್ದಿ ಫೀಡ್, ಉದ್ಯೋಗಗಳು, ನೆಟ್‌ವರ್ಕ್, ಮೆಸೇಜಿಂಗ್, ಅಧಿಸೂಚನೆಗಳು ಮತ್ತು ಹುಡುಕಾಟವನ್ನು ಒದಗಿಸಲಿದೆ. ಇದು 1 ಎಮ್‌ಬಿಯಾಗಿದ್ದು ಡೇಟಾ ಬಳಕೆಯ 80 ಶೇಕಡಾವನ್ನು ಇದು ಕಡಿಮೆ ಮಾಡಲಿದೆ. ಈ ಅಪ್ಲಿಕೇಶನ್ ಅನ್ನು ಲಿಂಕ್‌ಡ್‌ಇನ್‌ನ ಆರ್‌ಏಂಡ್ ಡಿ ತಂಡವು ಅಭಿವೃದ್ಧಿಪಡಿಸಿದ್ದು ಬೆಂಗಳೂರಿನ ಶಾಖೆ ಇದಾಗಿದೆ.

ಭಾರತದಲ್ಲಿರುವ ಬಳಕೆದಾರರಿಗೆ ಕಂಪೆನಿಯು ಈ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದೆ. ಈ ಅಪ್ಲಿಕೇಶನ್ ಲಾಂಚ್ ಮಾಡಲು ಕಂಪೆನಿಗೆ ಪ್ರೇರಣೆಯಾಗಿರುವುದು ಲೈಟ್‌ವೈಟ್ ಮೊಬೈಲ್ ವೆಬ್‌ಸೈಟ್ ಆಗಿದ್ದು ಇದನ್ನು ಸಪ್ಟೆಂಬರ್ 2016 ರಲ್ಲಿ ಸ್ಥಾಪಿಸಲಾಗಿತ್ತು.

ಅದಾಗ್ಯೂ ಕಂಪೆನಿಯು ಮೊಬೈಲ್ ವೆಬ್ ಆವೃತ್ತಿ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು 60 ದೇಶಗಳಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಕಡಿಮೆ ನೆಟ್‌ವರ್ಕ್ ಪ್ರದೇಶ ಮತ್ತು ವೃತ್ತಿಪರ ಸ್ಥಳಗಳಲ್ಲಿ ಲಿಂಕ್‌ಡ್‌ಇನ್‌ನ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದ್ದು, ಆರ್ಥಿಕ ಅವಕಾಶವನ್ನು ಬಳಕೆದಾರರಿಗೆ ಒದಗಿಸಲಿದೆ ಎಂಬುದಾಗಿ ಭಾರತದ ಲಿಂಕ್‌ಡ್‌ಇನ್ ನಿರ್ವಾಹಕರಾಗಿರುವ ಅಕ್ಷಯ್ ಕೊಥಾರಿ ತಿಳಿಸಿದ್ದಾರೆ. ಉದ್ಯೋಗಿಗಳಿಗೆ ತಮ್ಮ ಕನಸಿನ ಉದ್ಯೋಗವನ್ನು ಪಡೆದುಕೊಳ್ಳಲು, ತಮ್ಮ ನೆಟ್‌ವರ್ಕ್‌ಗಳನ್ನು ಸುಧಾರಿಸಲು ಇನ್ನಷ್ಟು ಹೆಚ್ಚು ಯಶಸ್ಸನ್ನು ಪಡೆದುಕೊಳ್ಳಲು ಈ ಅಪ್ಲಿಕೇಶನ್ ನೆರವನ್ನೀಯಲಿದೆ.

ಲಿಂಕ್‌ಡ್‌ಇನ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನಿಮಗೆ ಡೌನ್‌ಲೋಡ್ ಮಾಡಬಹುದಾಗಿದೆ.

Best Mobiles in India

Read more about:
English summary
The LinkedIn Lite has all the key features like news feed, jobs, profile, network, messaging, notifications and search.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X