ವಾಟ್ಸ್‌ಆಪ್‌ನಲ್ಲಿ ಫೇಕ್ ನ್ಯೂಸ್‌ಗಳ ಅಬ್ಬರಕ್ಕೆ ಪರಿಹಾರ ಈ ಫೀಚರ್

By Gizbot Bureau
|

ಭಾರತದಲ್ಲಿ ಎಲೆಕ್ಷನ್ ಹವಾ ಜೋರಾಗಿದ್ದು ಎಲ್ಲಾ ಪಕ್ಷದವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಲೋಕಸಭೆ ಚುನಾವಣೆಯ ಸಂದರ್ಬದಲ್ಲ ಮತದಾರರನ್ನು ಸೆಳೆಯಲು ಮತ್ತು ಅವರ ಹಾದಿ ತಪ್ಪಿಸುವುದಕ್ಕೆ ಜೊತೆಗೆ ಗೊಂದಲಕ್ಕೀಡುಮಾಡುವುದಕ್ಕಾಗಿ ಕೆಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಈ ಸುಳ್ಳು ಸುದ್ದಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವ ದೃಷ್ಟಿಯಿಂದ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಹೊಸದಾಗಿ ಕೆಲವು ಫೀಚರ್ ಗಳನ್ನು ಬಿಡುಗಡೆಗೊಳಿಸಿದೆ. ಈ ಹೊಸ ವೈಶಿಷ್ಟ್ಯತೆಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ 9 ಅಂಶಗಳು ಇಲ್ಲಿವೆ ನೋಡಿ.

ವಾಟ್ಸ್‌ಆಪ್‌ನಲ್ಲಿ ಫೇಕ್ ನ್ಯೂಸ್‌ಗಳ ಅಬ್ಬರಕ್ಕೆ ಪರಿಹಾರ ಈ ಫೀಚರ್

“Checkpoint Tipline”,ಹೆಸರಿನಲ್ಲಿರುವುದಕ್ಕೆ ವಾಟ್ಸ್ ಆಪ್ ಬಳಕೆದಾರರು ತಾವು ರಿಸೀವ್ ಮಾಡಿದ ಗಾಸಿಪ್ ಬಗೆಗಿನ ಮಾಹಿತಿಗಳನ್ನು ಸಬ್ಮಿಟ್ ಮಾಡುವುದಕ್ಕೆ ಅವಕಾಶವಿರುತ್ತದೆ.

ಫೀಚರ್ ಹಿಂದೆ PROTO ಹೆಸರಿನ ಭಾರತೀಯ ಮೀಡಿಯಾ ಸ್ಕಿಲ್ಲಿಂಗ್ ಸ್ಟಾರ್ಟ್ ಅಪ್ ಇದೆ ಆದರೂ ಕೂಡ ಈ ಪ್ರೊಜೆಕ್ ನ್ನು ತಾಂತ್ರಿಕವಾಗಿ ನೋಡಿಕೊಳ್ಳುವುದು ಮತ್ತು ನಿಭಾಯಿಸುವುದು ವಾಟ್ಸ್ ಆಪೇ ಆಗಿರುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ: ಅನುಮಾನಾಸ್ಪದ ಮಾಹಿತಿಗಳನ್ನು ಬಳಕೆದಾರರು ಈ ನಂಬರ್ ಗೆ +91-9643-000-888 ಗೆ ವರದಿ ನೀಡಬಹುದು.


ಒಮ್ಮೆ ಮೆಸೇಜ್ ನ್ನು ಕಳುಹಿಸಿದ ನಂತರ PROTO’ ದಲ್ಲಿರುವ ವೆರಿಫಿಕೇಷನ್ ಕೇಂದ್ರವು ನೀವು ಕಳುಹಿಸಿದ ಮಾಹಿತಿಯನ್ನು ವೆರಿಫೈ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆ.

ರಿಪ್ಲೈ ನಲ್ಲಿ ಬಳಕೆದಾರರಿಗೆ ತಾವು ನೀಡಿದ ಮಾಹಿತಿಯು ನಿಜವೋ ಅಥವಾ ಸುಳ್ಳೋ? ನಿಮಗೆ ತಪ್ಪು ಮಾಹಿತಿ ನೀಡಿ ನಿಮ್ಮ ಹಾದಿತಪ್ಪಿಸುವ ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗುತ್ತದೆ.

ಬಳಕೆದಾರರು ತಾವು ರಿಸೀವ್ ಮಾಡಿದ ಪಿಕ್ಚರ್, ವೀಡಿಯೋ ಲಿಂಕ್, ಟೆಕ್ಸ್ಟ್ ನ್ನು ಕೂಡ ವೆರಿಫಿಕೇಷನ್ ಗೆ ಕಳುಹಿಸಿಕೊಡಬಹುದು.

ಮಾಹಿತಿಗಳನ್ನು ಐದು ಭಾಷೆಗಳಲ್ಲಿ ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.ಇಂಗ್ಲೀಷ್, ಹಿಂದಿ, ತೆಲುಗು, ಬಂಗಾಳಿ ಮತ್ತು ಮಳಯಾಳಂ.

ವಾಟ್ಸ್ ಆಪ್ ಮತ್ತು ಪ್ರೋಟೋ ಎರಡೂ ಕೂಡ ಭಾರತದ ಬೇರೆಬೇರೆ ಪ್ರದೇಶಗಳಲ್ಲಿ ಹರಿದುಬಿಡಲಾಗಿರುವ ವದಂತಿಗಳ ಬಗ್ಗೆ ಜನಸಾಮಾನ್ಯ ಸಂಸ್ಥೆಗಳನ್ನು ಕೇಳುತ್ತದೆ.

ಮೆಕ್ಸಿಕೋ ಮತ್ತು ಫ್ರಾನ್ಸ್ ನ ಎಲೆಕ್ಷನ್ ಸಂದರ್ಬದಲ್ಲೂ ಕೂಡ ಈ ಫೀಚರ್ ಗಳನ್ನು ಬಳಕೆ ಮಾಡಲಾಗಿತ್ತು.

Most Read Articles
Best Mobiles in India

Read more about:
English summary
Lok Sabha elections: 9 things to know about WhatsApp's new feature for voters

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X