Home
Apps

ಕಳೆದು ಹೋದ ಡಿವೈಸ್ ನಲ್ಲಿರುವ ಗೂಗಲ್ ಅಕೌಂಟ್ ನ್ನು ಡಿಲೀಟ್ ಮಾಡುವುದು ಹೇಗೆ?

By Gizbot Bureau

ನೀವು ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್ ಟಾಪ್ ನ್ನು ಕಳೆದುಕೊಂಡು ಬಿಟ್ಟಿದ್ದೀರಾ? ಅದರಲ್ಲಿ ನಿಮ್ಮ ಗೂಗಲ್ ಖಾತೆಯ ಮಾಹಿತಿ ಇದ್ದಿದ್ದರೆ ಏನು ಮಾಡುವುದು? ನಿಮ್ಮ ವಯಕ್ತಿಕ ಮಾಹಿತಿಗಳು ಮತ್ತು ನಿಮ್ಮ ಕೆಲಸಗಳಿಗೆ ಸಂಬಂಧಿಸಿದ ಮಾಹಿತಿಗಳು ಕಳೆದು ಹೋದ ಸಿಸ್ಟಮ್ ನಲ್ಲಿ ಇದ್ದಿದ್ದರೆ ಏನು ಮಾಡುವುದು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ? ತಲೆ ಬಿಸಿ ಮಾಡಿಕೊಳ್ಳಬೇಡಿ. ಕಳೆದು ಹೋದ ಡಿವೈಸ್ ನಲ್ಲಿರುವ ನಿಮ್ಮ ಗೂಗಲ್ ಖಾತೆಯ ಮಾಹಿತಿಗಳನ್ನು ರಿಮೂವ್ ಮಾಡುವುದಕ್ಕೆ ಅಥವಾ ಡಿಲೀಟ್ ಮಾಡುವುದಕ್ಕೆ ಅಥವಾ ಲಾಗ್ ಔಟ್ ಮಾಡುವುದಕ್ಕೆ ನಿಮಗೆ ಗೂಗಲ್ ಅವಕಾಶ ನೀಡುತ್ತದೆ.

ಕಳೆದು ಹೋದ ಡಿವೈಸ್ ನಲ್ಲಿರುವ ಗೂಗಲ್ ಅಕೌಂಟ್ ನ್ನು ಡಿಲೀಟ್ ಮಾಡುವುದು ಹೇಗೆ?

ಯಾವುದೇ ಕನೆಕ್ಟ್ ಆಗಿರುವ ಡಿವೈಸ್ ನಿಂದ ನೀವು ಗೂಗಲ್ ಮಾಹಿತಿಗಳನ್ನು ರಿಮೂವ್ ಮಾಡುವದಕ್ಕೆ ಗೂಗಲ್ ಪ್ರೈವೆಸಿ ಫೀಚರ್ ನಲ್ಲಿ ಅವಕಾಶವಿರುತ್ತದೆ.

1.ಯಾವುದೇ ಬ್ರೌಸರ್ ನಿಂದ www.google.com ಗೆ ತೆರಳಿ.

2.ಪ್ರೊಫೈಲ್ ಐಕಾನ್ ನ್ನು ಕ್ಲಿಕ್ಕಿಸಿ ಮತ್ತು ಮ್ಯಾನೇಜ್ ಯುವರ್ ಗೂಗಲ್ ಅಕೌಂಟ್ ಆಯ್ಕೆಗೆ ತೆರಳಿ

3.ಸೆಕ್ಯುರಿಟಿ ಟ್ಯಾಬ್ ಗೆ ತೆರಳಿ ಮತ್ತು ಯುವರ್ ಡಿವೈಸ್ ಸೆಕ್ಷನ್ ನಲ್ಲಿರುವ ಮ್ಯಾನೇಜ್ ಡಿವೈಸ್ ಗೆ ತೆರಳಿ.

4.ನೀವು ಸೈನ್ ಔಟ್ ಮಾಡಬೇಕು ಎಂದುಕೊಂಡಿರುವ ಡಿವೈಸ್ ಗೆ ತೆರಳಿ ಮತ್ತು ಮೂರು ಡಾಟ್ ಗಳನ್ನು ಚೆಕ್ ಮಾಡಿ ಕ್ಲಿಕ್ಕಿಸಿ.ಇದು ನಿಮ್ಮ ಡಿವೈಸಿನ ಬಲಭಾಗದ ಮೇಲಿರುತ್ತದೆ.ಅಲ್ಲಿರುವ ಸೈನ್ ಔಟ್ ಆಯ್ಕೆಯನ್ನು ಕ್ಲಿಕ್ಕಿಸಿ.

5.ಪುನಃ ಕನ್ಫರ್ಮ್ ಮಾಡಲು ನಿಮಗೆ ಹೊಸ ಪರದೆ ತೆರೆದುಕೊಳ್ಳುತ್ತದೆ.ಸೈನ್ ಔಟ್ ಆಯ್ಕೆಯನ್ನು ಖಾತ್ರಿಗೊಳಿಸಿ.

ಅಂತರ್ಜಾಲಕ್ಕೆ ಪುನಃ ನಿಮ್ಮ ಕಳೆದು ಹೋದ ಡಿವೈಸ್ ಕನೆಕ್ಟ್ ಆಗುತ್ತಿದ್ದಂತೆ ನಿಮ್ಮ ಗೂಗಲ್ ಖಾತೆ ಆ ಡಿವೈಸ್ ನಿಂದ ಸೈನ್ ಔಟ್ ಆಗಿರುತ್ತದೆ.

Best Mobiles in India

English summary
Lost Your Smartphone? Here's How To Remove, Delete Google Account From Lost Device
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+