ಎಂ ಆಧಾರ್ ಇನ್ನು ಮುಂದೆ ಅಧಿಕೃತ ಗುರುತೀನ ಚೀಟಿ
ರೈಲಿನಲ್ಲಿ ಪ್ರಯಾಣ ಮಾಡುವವರು ಇನ್ನು ಮುಂದೆ ಕೇವಲ ಎಂ ಆಧಾರ್ ಇಟ್ಟುಕೊಂಡರೆ ಸಾಕು, ಯಾವುದೇ ಓರ್ಜಿನಲ್ ಐಡಿ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಅಲ್ಲದೇ ಅವುಗಳನ್ನು ಮರೆತು ಹೋದರು ಸಹ ಮೊಬೈಲ್ ನಲ್ಲಿರುವ ಎಂ ಆಧಾರ್ ಅವರ ಸಹಾಯಕ್ಕೆ ಬರಲಿದೆ.
ಇದೇ ಜುಲೈ ತಿಂಗಳಲ್ಲಿ ಲಾಂಚ್ ಆಗಿದ್ದ ಎಂ ಆಧಾರ್ ಆಪ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿತ್ತು. ಕೇಂದ್ರ ಸರಕಾರವೂ ಈ ಆಪ್ ಅನ್ನು ಇನಷ್ಟು ಹೆಚ್ಚು ಜನರಿಗೆ ತಲುಪಿಸುವ ಸಲುವಾಗಿ ಎಂ ಆಧಾರ್ ಆಪ್ ಅನ್ನು ಐಡೆಂಟಿ ಫ್ರೂಫ್ ಆಗಿ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಟ್ರೈನಿನಲ್ಲಿ ಪ್ರಯಾಣ ಮಾಡುವವರಿಗೆ ಇದು ಸಹಾಯವಾಗಲಿದೆ.

ರೈಲಿನಲ್ಲಿ ಪ್ರಯಾಣ ಮಾಡುವವರು ಇನ್ನು ಮುಂದೆ ಕೇವಲ ಎಂ ಆಧಾರ್ ಇಟ್ಟುಕೊಂಡರೆ ಸಾಕು, ಯಾವುದೇ ಓರ್ಜಿನಲ್ ಐಡಿ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಅಲ್ಲದೇ ಅವುಗಳನ್ನು ಮರೆತು ಹೋದರು ಸಹ ಮೊಬೈಲ್ ನಲ್ಲಿರುವ ಎಂ ಆಧಾರ್ ಅವರ ಸಹಾಯಕ್ಕೆ ಬರಲಿದೆ.
ಈ ಆಪ್ ಅನ್ನು UIDAI ಲಾಂಚ್ ಮಾಡಿದ್ದು, ಆಧಾರ್ ಕಾರ್ಡ್ ಡಿಜಿಟಲ್ ರೂಪ ಇದಾಗಿದೆ. ಅಲ್ಲದೇ ಇದು ಕ್ಯಾರಿ ಮಾಡಲು ಸುಲಭವಾಗಿದೆ. ಮೊಬೈಲ್ ನಲ್ಲಿಯೇ ಆಧಾರ್ ಇದ್ದ ಹಾಗೇ ಇರಲಿದೆ.
ಈ ಆಪ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಶೀಘ್ರವೇ ಐಓಎಸ್ ಬಳಕೆದಾರರಿಗೂ ಈ ಆಪ್ ಬಳಕೆಗೆ ಮುಕ್ತವಾಗಲಿದೆ. ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಫೋನಿನಲ್ಲಿರುವ ಎಂ ಆಧಾರ್ ಅನ್ನು ಬಯೋಮೆಟ್ರಿಕ್ ಇಲ್ಲವೇ ಓಟಿಪಿ ಸಹಾಯದಿಂದ ಓಪನ್ ಮಾಡಿ ತೋರಿಸಬಹುದಾಗಿದೆ.
ಇದಕ್ಕಾಗಿ ರೈಲ್ವೆ ಇಲಾಖೆಯ ಆದೇಶವನ್ನು ನೀಡಿದ್ದು, ಪ್ರಯಾಣದ ಸಮಯದಲ್ಲ ಎಂ ಆಧಾರ್ ಅನ್ನು ತೋರಿಸಿದರೆ ಅದನ್ನು ಅಧಿಕೃತ ಗುರುತೀನ ಚೀಟಿ ಎಂದು ಭಾವಿಸುವಂತೆ ತಿಳಿಸಿದೆ. ಆಧಾರ್ ಕಾರ್ಡ್ ನೋಡಲು ಯಾವ ರೀತಿಯಲ್ಲಿ ಇರಲಿದೆಯೋ ಅದೇ ಮಾದರಿಯಲ್ಲಿ ಆಪ್ ನಲ್ಲೂ ಕಾಣಿಸಲಿದೆ.


Click it and Unblock the Notifications








