ಎಂಆಧಾರ್‌ ಆಪ್‌ ಅಪ್‌ಡೇಟ್‌ ಮಾಡಿ, ಹೆಚ್ಚಿನ ಸೇವೆ ಆನಂದಿಸಿ..!

By Gizbot Bureau
|

ಆಧಾರ್‌ ಪ್ರಾಧಿಕಾರ (ಯುಐಡಿಎಐ) ಇತ್ತೀಚೆಗೆ ಬಳಕೆದಾರರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ಎಂಆಧಾರ್ ಆಪ್‌ನ್ನು ಡಿಲೀಟ್‌ ಮಾಡಿ, ಹೊಸ ಆವೃತ್ತಿಯನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಲು ಹೇಳಿದೆ. ಹೊಸ ಆವೃತ್ತಿ ಹೆಚ್ಚು ಸುರಕ್ಷಿತ ಮತ್ತು ವೈಶಿಷ್ಟ್ಯಗಳಿಂದ ಸಮೃದ್ಧವಾಗಿದೆ ಎನ್ನಲಾಗಿದೆ. ಹೊಸ ಬಳಕೆದಾರರ ಇಂಟರ್‌ಫೇಸ್‌ನ್ನು ಹೊಂದಿದ್ದು, ಮೈ ಆಧಾರ್‌ ಮತ್ತು ಸೇವೆಗಳು ಎಂಬ ಎರಡು ಭಾಗಗಳಾಗಿ ಇಂಟರ್‌ಫೇಸ್‌ ವಿಂಗಡಿಸಲ್ಪಟ್ಟಿದೆ.

ಮೈ ಆಧಾರ್‌

ಮೈ ಆಧಾರ್‌

ಮೊದಲ ವಿಭಾಗವು ನಾಲ್ಕು ಅಂಕಿಯ ಪಿನ್‌ನೊಂದಿಗೆ ಸುರಕ್ಷಿತವಾಗಿದೆ, ಆಧಾರ್ ಹೊಂದಿರುವವರಿಗೆ ಬಯೋಮೆಟ್ರಿಕ್ ದೃಢೀಕರಣದಿಂದ ಲಾಕ್ ಅಥವಾ ಅನ್ಲಾಕ್ ಮಾಡಲು, ಆಫ್‌ಲೈನ್‌ನಲ್ಲಿ ಇಕೆವೈಸಿಯನ್ನು ಹಂಚಿಕೊಳ್ಳಲು, ಒಟಿಪಿ ಸೃಷ್ಟಿಸಲು ಹಾಗೂ ಇನ್ನಿತರ ಫೀಚರ್‌ಗಳನ್ನು ಹೊಂದಿದೆ.

ಸೇವೆಗಳು

ಸೇವೆಗಳು

ಸೇವೆಗಳ ವಿಭಾಗದಲ್ಲಿ ಆಧಾರ್ ಡೌನ್‌ಲೋಡ್ ಮಾಡಲು, ವಿಳಾಸ ನವೀಕರಿಸಲು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್‌, ಆಧಾರ್ ಮರುಮುದ್ರಣ ಮತ್ತು ಇಮೇಲ್ ಅಥವಾ ಫೋನ್ ಸಂಖ್ಯೆ ಪರಿಶೀಲಿಸಲು ಅನುಮತಿಸುತ್ತದೆ. ಇದು ಬಳಕೆದಾರರಿಗೆ ಹತ್ತಿರದ ಆಧಾರ್ ದಾಖಲಾತಿ ಕೇಂದ್ರಗಳನ್ನು ಪತ್ತೆಹಚ್ಚಲು ಮತ್ತು ಅವರ ಅಪ್ಲಿಕೇಶನ್‌ನ ಸೇವಾ ಸ್ಥಿತಿಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಆಧಾರ್‌ ಕಡ್ಡಾಯವಲ್ಲ

ಆಧಾರ್‌ ಕಡ್ಡಾಯವಲ್ಲ

ಎಂ ಆಧಾರ್‌ ಆಪ್‌ ಬಳಸಲು ಆಧಾರ್‌ ಕಾರ್ಡ್‌ ಹೊಂದಿರುವುದು ಕಡ್ಡಾಯವೇನಲ್ಲ. ಆದರೆ, ಬಳಕೆದಾರರು ವೈಯಕ್ತಿಕಗೊಳಿಸಿದ ಆಧಾರ್ ಸೇವೆಗಳನ್ನು ಪಡೆಯಲು ಅಪ್ಲಿಕೇಶನ್‌ನಲ್ಲಿ ಆಧಾರ್ ಪ್ರೊಫೈಲ್‌ನ್ನು ನೋಂದಾಯಿಸಿಕೊಳ್ಳಬೇಕು. ಬಳಕೆದಾರರು ಆಪ್‌ನಲ್ಲಿ ಮೂರು ಆಧಾರ್ ಪ್ರೊಫೈಲ್‌ಗಳ ವಿವರಗಳನ್ನು ಉಳಿಸಬಹುದು. ಆದರೆ, ಇವುಗಳನ್ನು ಒಂದೇ ಮೊಬೈಲ್ ಫೋನ್ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿರಬೇಕು.

ಭದ್ರತೆಗೆ ಬಯೋಮೆಟ್ರಿಕ್

ಭದ್ರತೆಗೆ ಬಯೋಮೆಟ್ರಿಕ್

ಅಪ್ಲಿಕೇಶನ್ ಹೆಚ್ಚು ಸುರಕ್ಷಿತವಾಗಲು ಆಧಾರ್ ಸಂಬಂಧಿತ ಪರಿಶೀಲನೆಯನ್ನು ದೃಢೀಕರಿಸಲು ಯುಐಡಿಎಐ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್ ಅಥವಾ ಇನ್ನಾವುದೇ ಬಯೋಮೆಟ್ರಿಕ್ ಪ್ರಕ್ರಿಯೆ ಸೇರಿಸಬೇಕು.

ಆಂಡ್ರಾಯ್ಡ್, ಆಪ್‌ ಸ್ಟೋರ್‌ನಲ್ಲಿ ಲಭ್ಯ

ಆಂಡ್ರಾಯ್ಡ್, ಆಪ್‌ ಸ್ಟೋರ್‌ನಲ್ಲಿ ಲಭ್ಯ

ಎಂಆಧಾರ್‌ ಆಪ್‌ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್‌ಗೆ ಲಭ್ಯವಿದೆ. ಆಂಡ್ರಾಯ್ಡ್ 5.0 ಲಾಲಿಪಾಪ್ ಅಥವಾ ಹೆಚ್ಚಿನದರಲ್ಲಿ ಕಾರ್ಯನಿರ್ವಹಿಸುತ್ತದೆ. ಐಫೋನ್‌ ಮತ್ತು ಐಪ್ಯಾಡ್‌ಗಳ ಐಒಎಸ್ 10 ಅಥವಾ ಹೆಚ್ಚಿನದರಲ್ಲಿ ಕಾರ್ಯನಿರ್ವಹಿಸುತ್ತದೆ.

13 ಭಾಷೆಗಳ ಬೆಂಬಲ

13 ಭಾಷೆಗಳ ಬೆಂಬಲ

ಎಂಆಧಾರ್‌ ಅಪ್ಲಿಕೇಶನ್ ಈಗ ಬಂಗಾಳಿ, ಒಡಿಯಾ, ಉರ್ದು, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ, ಪಂಜಾಬಿ, ಮರಾಠಿ ಮತ್ತು ಅಸ್ಸಾಮಿ ಸೇರಿ 13 ಭಾಷೆಗಳನ್ನು ಬೆಂಬಲಿಸುತ್ತದೆ.

Most Read Articles
Best Mobiles in India

Read more about:
English summary
mAadhar App Update Allows Users To Add Three Profiles: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X