ಸ್ನ್ಯಾಪ್ ಚಾಟ್ ನ ಸ್ಟೋರೀಸ್ ನಲ್ಲಿ ಮ್ಯೂಸಿಕಲ್ ಟಚ್

By Gizbot Bureau
|

ಮ್ಯೂಸಿಕ್ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಹೌದು ಈಗೆಲ್ಲ ಒಂದು ಹಾಡು ಫೇಮಸ್ ಆಗೋದೆ ಸೋಷಿಯಲ್ ಮೀಡಿಯಾದಲ್ಲಿ. ಹಾಗಾಗಿ ಹೆಚ್ಚಿನ ಹಾಡುಗಳ ಸಂಯೋಜಕರು ತಮ್ಮ ಹಾಡುಗಳನ್ನು ಸಾಮಾಜಿಕ ಜಾಲದಲ್ಲಿ ಪಬ್ಲಿಷ್ ಮಾಡ್ತಾರೆ . ಒಂದು ಹಾಡು ಪ್ರಸಿದ್ಧವಾಗುವುದಕ್ಕೆ ಇದೀಗ ಸಾಮಾಜಿಕ ಜಾಲದಲ್ಲಿ ಹಲವಾರು ಫ್ಲ್ಯಾಟ್ ಫಾರ್ಮ್ ಗಳಿವೆ.

ಮ್ಯೂಸಿಕ್ ಪೋಸ್ಟ್ ಮಾಡಲು ಅವಕಾಶ:

ಮ್ಯೂಸಿಕ್ ಪೋಸ್ಟ್ ಮಾಡಲು ಅವಕಾಶ:

ಫೋಟೋ ಮೆಸೇಜಿಂಗ್ ಆಪ್ ಆಗಿದ್ದ ಸ್ನ್ಯಾಪ್ ಚಾಟ್ ನಲ್ಲಿ ಇನ್ನು ಮುಂದೆ ಮ್ಯೂಸಿಕ್ ಕೂಡ ಪೋಸ್ಟ್ ಮಾಡುವುದಕ್ಕೆ ಅವಕಾಶ ಸಿಗುತ್ತಿದೆ. ಹೌದು ಇನ್ಸ್ಟಾಗ್ರಾಂನಂತೆ ಇನ್ನು ಮುಂದೆ ಸ್ನ್ಯಾಪ್ ಚಾಟ್ ನಲ್ಲೂ ಕೂಡ ನಿಮ್ಮ ಹಾಡುಗಳನ್ನು ಹಂಚಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಇನ್ಸ್ಟಾಗ್ರಾಂಗೆ ಆ ಮೂಲಕ ಸ್ನ್ಯಾಪ್ ಚಾಟ್ ಸ್ಪರ್ಧೆಯೊಡ್ಡುವುದಕ್ಕೆ ಮುಂದಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹಕ್ಕು ಪಡೆಯುವುದು ಅವಕಾಶ:

ಹಕ್ಕು ಪಡೆಯುವುದು ಅವಕಾಶ:

ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ, ಯುನಿವರ್ಸಲ್ ಮ್ಯೂಸಿಕ್ ಗ್ರೂಪ್, ಸೋನಿ ಮ್ಯೂಸಿಕ್ ಎಂಟರ್ ಟೈನ್ ಮೆಂಟ್ ಮತ್ತು ವಾರ್ನರ್ ಮ್ಯೂಸಿಕ್ ಗ್ರೂಪ್ ಮೂಲಕ ಕಂಪೆನಿಯು ಗ್ರೂಪಿನ ಕೆಟಲಾಗ್ ಗಳಿಗೆ ಹಕ್ಕುಗಳನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಸಿಎನ್ಇಟಿ ವರದಿ ಮಾಡಿದೆ. ಅಂದರೆ ಒಂದು ವೇಳೆ ನಿಮ್ಮ ಹಾಡುಗಳನ್ನು ಇತರರು ತಮ್ಮ ಯಾವುದೇ ಕೆಲಸಗಳಿಗೆ ಬಳಸುವುದಾದರೆ ನಿಮ್ಮ ಅನುಮತಿ ಪಡೆಯಬೇಕಾಗುತ್ತದೆ. ಪಡೆಯದೇ ಇದ್ದಲ್ಲಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ಅಧಿಕೃತವಾಗಿ ಪ್ರಕಟವಾಗಿಲ್ಲ!

ಅಧಿಕೃತವಾಗಿ ಪ್ರಕಟವಾಗಿಲ್ಲ!

ಇದುವರೆಗೂ ಈ ಡೀಲ್ ನ ಬಗ್ಗೆ ಯಾವುದೇ ಖಚಿತತೆ ಆಗಿಲ್ಲ ಆದರೆ ಕಂಪೆನಿಯು ತನ್ನ ಪ್ರಯತ್ನವನ್ನು ಈ ನಿಟ್ಟಿನಲ್ಲಿ ಮುಂದುವರಿಸಿದೆ ಎಂದು ತಿಳಿದುಬಂದಿದೆ. ಇನ್ಸ್ಟಾಗ್ರಾಂ, ಟಿಕ್ ಟಾಕ್ ಸೇರಿದಂತೆ ಇತರೆ ಹಲವು ಆಪ್ ಗಳು ಈಗಾಗಲೇ ಬಳಕೆದಾರರಿಗೆ ತಮ್ಮ ಮ್ಯೂಸಿಕ್ ಸೇರಿಸುವುದಕ್ಕೆ ಆಪ್ ನಲ್ಲಿ ಆವಕಾಶ ನೀಡುತ್ತವೆ. ಅದೇ ರೀತಿ ಇನ್ನು ಮುಂದೆ ಸ್ನ್ಯಾಪ್ ಚಾಟ್ ಕೂಡ ಅವಕಾಶ ನೀಡಲಿದೆ.

2017-2018 ರಲ್ಲಿ ಪ್ರಮುಖ ಮ್ಯೂಸಿಕ್ ಕಂಪೆನಿಗಳ ಜೊತೆಗೆ ಫೇಸ್ ಬುಕ್ ಕೂಡ ಲೇಬಲ್ ಗಳನ್ನು ಬಳಸಿ ಹಾಡುಗಳ ವೀಡಿಯೋ ಅಪ್ ಲೋಡ್ ಮತ್ತು ಶೇರ್ ಮಾಡುವ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ. ಸ್ನ್ಯಾಪ್ ಚಾಟ್ ಈ ವಿಚಾರದ ಬಗ್ಗೆ ಇದುವರೆಗೂ ಅಧಿಕೃತವಾಗಿ ಏನನ್ನೂ ಪ್ರಕಟಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Best Mobiles in India

Read more about:
English summary
Magic of melody: Soon, Snapchat will let you add a musical touch to Stories

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X