Home
Apps

ಗೂಗಲ್ ಅನ್ನು ಮೋಸಗೊಳಿಸಿರುವ ಈ ಆಪ್‌ಗಳು ನಿಮ್ಮ ಸ್ಮಾರ್ಟ್‌ಫೋನಿನಲ್ಲಿವೆ!!

ಗೂಗಲ್ ಎಷ್ಟೇ ಸುರಕ್ಷತಾ ವ್ಯವಸ್ಥೆಯನ್ನು ಕೈಗೊಂಡರೂ ಕೂಡ ಖದೀಮರು ಗೂಗಲ್‌ಗೂ ಮರೆಮಾಚಿ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.!!

By Bhaskar N J

ನಿಮ್ಮ ಖಾಸಾಗಿ ಮಾಹಿತಿಯನ್ನು ಕಳವು ಮಾಡುವ ಸುಮಾರು 100ಕ್ಕೂ ಹೆಚ್ಚು ಆಪ್‌ಗಳು ಪ್ಲೇಸ್ಟೋರ್‌ನಲ್ಲಿ ಸಕ್ರಿಯವಾಗಿರುವ ಬಗ್ಗೆ ವರದಿಯಾಗಿದೆ.! ಗೂಗಲ್ ಎಷ್ಟೇ ಸುರಕ್ಷತಾ ವ್ಯವಸ್ಥೆಯನ್ನು ಕೈಗೊಂಡರೂ ಕೂಡ ಖದೀಮರು ಗೂಗಲ್‌ಗೂ ಮರೆಮಾಚಿ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.!!

ಬಳಕೆದಾರರ ಗೂಗಲ್ ಅಥವಾ ಫೇಸ್‌ಬುಕ್ ಖಾತೆಯೊಂದಿಗೆ ಲಾಗಿನ್ ಆಗಲು ಕೇಳಿ ಮೋಸ ಮಾಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದ್ದು, ಗೂಗಲ್‌ನ ಅಧಿಕೃತ ಅಪ್ಲಿಕೇಶನ್ ಸ್ಟೋರ್ ಮೂಲಕವೇ ಇಂತಹ ಮೋಸದ ಜಾಲದ ಅಪ್ಲಿಕೇಷನ್‌ಗಳು ಲಕ್ಷಕ್ಕಿಂತ ಹೆಚ್ಚು ಡೌನ್‌ಲೋಡ್ ಅನ್ನು ಕಂಡಿರುವುದಾಗಿ ವರದಿಯಲ್ಲಿ ತಿಳಿಸಿದೆ.!!

ಗೂಗಲ್ ಅನ್ನು ಮೋಸಗೊಳಿಸಿರುವ ಈ ಆಪ್‌ಗಳು ನಿಮ್ಮ ಸ್ಮಾರ್ಟ್‌ಫೋನಿನಲ್ಲಿವೆ!!

ರಷ್ಯನ್ ಸರ್ಕಾರದೊಂದಿಗೆ ಸಂಶಯಾಸ್ಪದ ಸಂಪರ್ಕಗಳನ್ನು ಹೊಂದಿದೆ ಎಂದು ಅಮೆರಿಕದಲ್ಲಿ ನಿಷೇಧವಾಗಿರುವ ಪ್ರಸಿದ್ಧ ಭದ್ರತಾ ಸಂಸ್ಥೆ ಕ್ಯಾಸ್ಪರ್ಸ್ ಸ್ಕಿ ಸಂಸ್ಥೆ ಕೂಡ ಈ ದುರ್ಬಲತೆಯನ್ನು ಕಂಡುಹಿಡಿದಿದೆ.! ಹಾಗಾದರೆ, ಆಪ್‌ಗಳನ್ನು ಡೌನ್‌ಲೋಡ್ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಆಂಡ್ರಾಯ್ಡ್‌ನಲ್ಲಿ ಭದ್ರತಾ ಸಮಸ್ಯೆಗಳು

ಆಂಡ್ರಾಯ್ಡ್‌ನಲ್ಲಿ ಭದ್ರತಾ ಸಮಸ್ಯೆಗಳು

ಸೈಬರ್ ಅಪರಾಧಿಗಳು ತಂಡಗಳು ಟೆಕ್ ದೈತ್ಯ ಗೂಗಲ್‌ನ ಸುರಕ್ಷತಾ ವ್ಯವಸ್ಥೆಗೆ ಸಿಕ್ಕಿಹಾಕಿಕೊಳ್ಳದೆ ಎರಡು ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಹಲವು ಸಂಸ್ಥೆಗಳು ವರದಿಯಲ್ಲಿ ತಿಳಿಸಿದ್ದವು. ಗೂಗಲ್ ಚಾಪೆಯ ಕೆಳಗೆ ತೂರಿದರೆ ಖದೀಮರು ರಂಗೋಲಿ ಕೆಳಗೆ ತೂರುತ್ತಿದ್ದು, ಆಂಡ್ರಾಯ್ಡ್‌ನಲ್ಲಿ ಭದ್ರತಾ ಸಮಸ್ಯೆಗಳು ಎದ್ದು ಕಾಣುತ್ತಿವೆ.!!

ರಿವ್ಯೂ ನೋಡಿ ಆಪ್‌ ಡೌನ್‌ಲೋಡ್ ಮಾಡಿ.!!

ರಿವ್ಯೂ ನೋಡಿ ಆಪ್‌ ಡೌನ್‌ಲೋಡ್ ಮಾಡಿ.!!

ಗೂಗಲ್ ತನ್ನ ಅಧೀಕೃತ ಪ್ಲೇ ಸ್ಟೋರ್‌ನಲ್ಲಿರುವ ಆಪ್‌ಗಳನ್ನು ಸುರಕ್ಷಿತವಾಗಿವೆಯೇ ಎಂದು ಪರೀಕ್ಷಿಸುತ್ತಿರುತ್ತದೆ. ಆದರೆ, ಮೊದಲೇ ಹೇಳಿದಂತೆ ಖದೀಮರು ಗೂಗಲ್‌ ಕಣ್ಣಿಗೂ ಮಣ್ಣೆರಚಿ ಆಪ್‌ಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.! ಹಾಗಾಗಿ, ಆಪ್‌ಸ್ಟೋರ್‌ನಲ್ಲಿ ರಿವ್ಯೂ ನೋಡಿ ಆಪ್‌ ಡೌನ್‌ಲೋಡ್ ಮಾಡಿ.!!

ಜನಪ್ರಿಯ ಆಪ್‌ಗಳು ಬೆಸ್ಟ್!!

ಜನಪ್ರಿಯ ಆಪ್‌ಗಳು ಬೆಸ್ಟ್!!

ಆಪ್‌ಸ್ಟೋರ್‌ನಲ್ಲಿ ಲಕ್ಷಾಂತರ ಆಪ್‌ಗಳಿವೆ. ಅವುಗಳಲ್ಲಿ ಜನಪ್ರಿಯ ಆಪ್‌ಗಳು ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ಸಫಲವಾಗಿವೆ.! ಹಾಗಾಗಿ, ಆಪ್‌ ಜಗತ್ತಿನಲ್ಲಿ ಹೆಚ್ಚು ಜನಪ್ರಿಯ ಹಾಗೂ ನಿಮಗೆ ತಿಳಿದಿರುವ ಆಪ್‌ಗಳನ್ನು ಬಳಸಿ.!ಇಮೇಲ್, ಮೆಸೇಜ್‌ಗಳ ಮೂಲಕ ಬಂದ ಲಿಂಕ್‌ಗಳಿಂದ ಯಾವುದೇ ಆಪ್‌ ಡೌನ್‌ಲೋಡ್ ಬೇಡ.!!

ನೇರವಾಗಿ ಲಾಗಿನ್ ಆಗಿ.!!

ನೇರವಾಗಿ ಲಾಗಿನ್ ಆಗಿ.!!

ಹಲವು ಆಪ್‌ಗಳು ನಿಮ್ಮ ಲಾಗಿನ್ ಪ್ರಕ್ರಿಯೆಯನ್ನು ಗೂಗಲ್ ಅಥವಾ ಫೇಸ್‌ಬುಕ್ ಅಕೌಂಟ್‌ಗಳಿಂದ ನಡೆಸಲು ಕೇಳಿಕೊಳ್ಳುತ್ತವೆ.! ಕೆಲವು ಹೆಸರಾಂತ ಆಪ್‌ಗಳಲ್ಲಿಯೂ ಇಂತಹ ವ್ಯವಸ್ಥೆ ಇದ್ದರೂ ಕೂಡ ನಿಮಗೆ ತಿಳಿಯದ ಆಪ್‌ಗಳಿಗೆ ಗೂಗಲ್ ಅಥವಾ ಫೇಸ್‌ಬುಕ್ ಅಕೌಂಟ್ ನೀಡಿ ಲಾಗಿನ್ ಆಗುವುದು ಒಳ್ಳೆಯದಲ್ಲ.!!

Best Mobiles in India

English summary
Recently, the tech giant Google has removed from its well-known app store for Android.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+