Home
Apps

ಆನ್‌ಲೈನ್‌ನಲ್ಲಿ ಜೀವನ ಸಂಗಾತಿ ಹುಡುಕುತ್ತಿದ್ದರೆ ಹುಷಾರ್‌..!

ನಿಮ್ಮ ಮನಸ್ಸಿನಲ್ಲಿ ಮದುವೆಯ ಬಗ್ಗೆ ಯೋಚನೆ ಬಂದಿದ್ದು, ಆನ್‌ಲೈನ್‌ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ವರ ಅಥವಾ ವಧುವನ್ನು ಹುಡುಕುತ್ತಿದ್ದರೆ ಖಂಡಿತ ಈ ಸ್ಟೋರಿ ಓದಬೇಕಿರುವುದು ಅತ್ಯವಶ್ಯಕ. ಹೌದು, ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ಗಳಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಗತ್ಯ ಇದೆ. ಇತ್ತೀಚೆಗೆ, ಪುಣೆ ಮೂಲದ ಟೆಕ್ಕಿ ಒಬ್ಬ ಮ್ಯಾಟ್ರಿನೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಹುಡುಗಿಯಿಂದ 10 ಲಕ್ಷ ರೂ. ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳ ಪ್ರಮಾಣ ಹೆಚ್ಚುತ್ತಿದ್ದು, ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಪರಿಣಾಮ ಬೀರುತ್ತಿದೆ.

ಗೃಹ ಸಚಿವಾಲಯ

ಗೃಹ ಸಚಿವಾಲಯ ತನ್ನ ಸೈಬರ್ ಸುರಕ್ಷತೆ ಮತ್ತು ಸೈಬರ್‌ ಭದ್ರತಾ ಹ್ಯಾಂಡಲ್ ಸೈಬರ್ ದೋಸ್ತ್ ಮೂಲಕ ವೈವಾಹಿಕ ವೆಬ್‌ಸೈಟ್‌ಗಳಲ್ಲಿ ತಮ್ಮ ಜೀವನ ಸಂಗಾತಿ ಹುಡುಕುವವರಿಗೆ ಕೆಲವು ಸಲಹೆಗಳನ್ನು ನೀಡಿದೆ. ವೈವಾಹಿಕ ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಲು ಹೊಸ ಇಮೇಲ್ ಐಡಿ ರಚಿಸಿ ಮತ್ತು ಅದನ್ನು ಸಂವಹನದ ಮೂಲವಾಗಿ ಬಳಸಿ. ಹಾಗೂ ನಿಮ್ಮ ಫೋಟೋ, ಫೋನ್ ಸಂಖ್ಯೆ, ವಿಳಾಸ ಇತ್ಯಾದಿಯಂತಹ ವೈಯಕ್ತಿಕ ಡೇಟಾವನ್ನು ವೈವಾಹಿಕ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳಬೇಡಿ ಎಂದು ಸಚಿವಾಲಯ ಅಧಿಕೃತ ಸೈಬರ್ ದೋಸ್ತ್ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.

ವೆಬ್‌ಸೈಟ್‌ನಲ್ಲಿ

ವೈವಾಹಿಕ ವೆಬ್‌ಸೈಟ್‌ನಲ್ಲಿ ನೋಂದಾಯಿಸುವ ಮೊದಲು, ವೆಬ್‌ಸೈಟ್‌ನ ಸತ್ಯಾಸತ್ಯತೆ ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ ಎಂದು ಸರ್ಕಾರ ಸೂಚಿಸುತ್ತಿದೆ. ವೆಬ್‌ಸೈಟ್‌ನ ವಿಶ್ವಾಸಾರ್ಹತೆಯ ಬಗ್ಗೆ ತಿಳಿಯಲು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಸಂಪರ್ಕಿಸಿ. ಸಾಧ್ಯವಾದರೆ, ಆನ್‌ಲೈನ್ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ಜೀವನ ಸಂಗಾತಿಯನ್ನು ಹುಡುಕಿಕೊಂಡ ಜನರೊಂದಿಗೆ ಮಾತನಾಡಲು ಪ್ರಯತ್ನಿಸಿ ಎಂದು ಸಲಹೆ ನೀಡಿದೆ.

ತಪ್ಪಿಸಲು

ವೈವಾಹಿಕ ವಂಚನೆಗಳನ್ನು ತಪ್ಪಿಸಲು, ಜನರು ವಧು ಅಥವಾ ವರನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುಟುಂಬ, ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು, ಸಹವರ್ತಿಗಳು ಅಥವಾ ಕೆಲಸದ ಸ್ಥಳದಲ್ಲಿ ಸಂಪರ್ಕಿಸಲು ಪ್ರಯತ್ನಿಸಬೇಕು. ಹಾಗೂ ನಿಮ್ಮ ಕುಟುಂಬದೊಂದಿಗೆ ನಿರೀಕ್ಷಿತ ಹೊಂದಾಣಿಕೆ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ಗೃಹ ಸಚಿವಾಲಯ ಸಲಹೆ ನೀಡಿದೆ.

ಹೇಗೆ ವಂಚನೆ..?

ಹೇಗೆ ವಂಚನೆ..?

ವೈವಾಹಿಕ ವಂಚನೆಯಲ್ಲಿ ಹುಡುಗಿ ಅಥವಾ ಹುಡುಗ ಕೆಲವು ಸಮಸ್ಯೆಗಳ ನೆಪದಲ್ಲಿ ಹಣವನ್ನು ಅನೇಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸಂತ್ರಸ್ತರ ಮನವೊಲಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಸಂತ್ರಸ್ತ ತಮ್ಮ ಭವಿಷ್ಯದ ಸಂಗಾತಿಯಿಂದ ದುಬಾರಿ ಉಡುಗೊರೆ ಬಂದಿದೆ, ಗಿಫ್ಟ್‌ ಪಡೆಯಲು ವಿವಿಧ ಬ್ಯಾಂಕ್ ಖಾತೆಗಳಿಗೆ ತೆರಿಗೆ ಹಣ ಪಾವತಿಸಬೇಕು ಎಂದು ಕಸ್ಟಮ್ ಅಧಿಕಾರಿಗಳಿಂದ ಕರೆಗಳನ್ನು ಪಡೆಯುತ್ತಾರೆ. ಇತರ ಸಂದರ್ಭಗಳಲ್ಲಿ, ವಂಚಕ ಹಣ ಪಡೆಯಲು ಆರೋಗ್ಯ ಸಮಸ್ಯೆಗಳನ್ನು ಹೇಳಬಹುದು. ವಂಚಕರ ಪ್ರಮುಖ ಗುರಿ ಟೆಕ್ಕಿಗಳು, ಎನ್‌ಆರ್‌ಐಗಳು ಅಥವಾ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಾಗಿದ್ದಾರೆ.

Best Mobiles in India

English summary
The government is also suggesting that prior to registering on a matrimonial website, check authenticity and reviews of the website. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+