Home
Apps

ಮಿಜು 16 ಸ್ಮಾರ್ಟ್‌ಫೋನ್ ಬಿಡುಗಡೆ..! ಅಗ್ಗದ ದರದಲ್ಲಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್..!

By Gizbot Bureau

ಮಿಜು ಕಂಪೆನಿ ಮಿಜು 16 ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿದ್ದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಇರುವ ಅತೀ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಇದಾಗಿದೆ. ಮಿಜು 16 ಜೊತೆಗೆ ಮಿಜು 16 ಪ್ಲಸ್ ಕೂಡ ಬಿಡುಗಡೆಗೊಳಿಸಿದ್ದು, ಮಿಜು 16 ಗಿಂತ ಸ್ವಲ್ಪ ದೊಡ್ಡದಾದ ಬ್ಯಾಟರಿ ಮತ್ತು ದೊಡ್ಡ ಬ್ಯಾಟರಿಯನ್ನು ಇದು ಹೊಂದಿದೆ. ಆದರೆ ಒಂದೇ ರೀತಿಯ ಡಿಸೈನ್ ಇದೆ.

ಮಿಜು 16 ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿರುವ ಅತ್ಯಂತ ಒಳ್ಳೆಯ ಫೋನ್ ಇದಾಗಿದೆ. ಮಿಜು 16 ಮತ್ತು ಮಿಜು 16 ಪ್ಲಸ್ ಎರಡೂ ಕೂಡ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಹೊಂದಿದೆ. ಮಿಜು ಸಂಸ್ಥೆಯೇ ತಿಳಿಸುವಂತೆ ಈ ಎರಡೂ ಸೆನ್ಸರ್ ಗಳ ಆಕ್ಯುರಿಸಿ 99.12% ಆಗಿದೆ..

ಮಿಜು 16 ಬಿಡುಗಡೆ..! ಅಗ್ಗದ ದರದಲ್ಲಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್.

ಬೆಲೆ ಮತ್ತು ಲಭ್ಯತೆ

• ಮಿಜು16 - 6 ಜಿಬಿ ಮೆಮೊರಿ ಮತ್ತು 64 ಜಿಬಿ ಸ್ಟೋರೇಜ್ ನ ಬೆಲೆ 2698 Yuan (ರುಪಾಯಿ 27,000)

• ಮಿಜು 16 - 6 ಜಿಬಿ ಮೆಮೊರಿ ಮತ್ತು 128 ಜಿಬಿ ಸ್ಟೋರೇಜ್ ನ ಬೆಲೆ 2998 Yuan (ರುಪಾಯಿ 30,000)

• ಮಿಜು 16 -8 ಜಿಬಿ ಮೆಮೊರಿ ಮತ್ತು 128 ಜಿಬಿ ಸ್ಟೋರೇಜ್ ನ ಬೆಲೆ 3298 Yuan (ರುಪಾಯಿ 33,000)

• ಮಿಜು 16 ಪ್ಲಸ್ - 6 ಜಿಬಿ ಮೆಮೊರಿ ಮತ್ತು 64 ಜಿಬಿ ಸ್ಟೋರೇಜ್ ನ ಬೆಲೆ 3198 Yuan (ರುಪಾಯಿ 32,000)

• ಮಿಜು 16 ಪ್ಲಸ್ - 8 ಜಿಬಿ ಮೆಮೊರಿ ಮತ್ತು 128 ಜಿಬಿ ಸ್ಟೋರೇಜ್ ನ ಬೆಲೆ 3498 Yuan (ರುಪಾಯಿ 35,000)

• ಮಿಜು 16 ಪ್ಲಸ್ - 8 ಜಿಬಿ ಮೆಮೊರಿ ಮತ್ತು 256 ಜಿಬಿ ಸ್ಟೋರೇಜ್ ನ ಬೆಲೆ 3998 Yuan (ರುಪಾಯಿ 40,000)

ಸದ್ಯಕ್ಕೆ ಎಲ್ಲಾ ಮಿಜು 16 ಮತ್ತು ಮಿಜು 16 ಪ್ಲಸ್ ನ ಮಾಡೆಲ್ ಗಳು ಚೀನಾದಲ್ಲಿ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಾಗುತ್ತಿದೆ. ಭಾರತದಲ್ಲಿ ಬಿಡುಗಡೆಗೊಳ್ಳುವ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ವಲ

ಮಿಜು 16, ಮಿಜು 16 ಪ್ಲಸ್ ವೈಶಿಷ್ಟ್ಯತೆಗಳು

ಮಿಜು 16 ಬಿಡುಗಡೆ..! ಅಗ್ಗದ ದರದಲ್ಲಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್.

ಒಂದು ವೇಳೆ ನೀವು ಮಿಜು 16 ಮತ್ತು ಮಿಜು 16 ಪ್ಲಸ್ ನಲ್ಲಿನ ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲದಲ್ಲಿದ್ದರೆ, ಮಿಜು 16 6-ಇಂಚಿನ OLED ಡಿಸ್ಪ್ಲೇಯನ್ನು 18:9 ಅನುಪಾತದಲ್ಲಿ ಹೊಂದಿದೆ ಮತ್ತು narrow bezels ಕೂಡ ಇದೆ. ಮಿಜು 16 ಪ್ಲಸ್ ನಲ್ಲಿ 6.5- ಇಂಚಿನ OLED ಡಿಸ್ಪ್ಲೆಯು 18:9 ಅನುಪಾತವನ್ನು ಹೊಂದಿದ್ದು 91.6% ಸ್ಕ್ರೀನ್ ಟು ಬಾಡಿ ಅನುಪಾತವಿದೆ.

ಮಿಜು 16 ನಲ್ಲಿ 3010 mAh ಬ್ಯಾಟರಿ ಇದೆ. ಅದೇ ಮಿಜು 16 ಪ್ಲಸ್ 3640 mAh Li-ion ಬ್ಯಾಟರಿಯನ್ನು ಒಳಗೊಂಡಿದೆ. ಎರಡೂ ಡಿವೈಸ್ ಗಳು ಯುಎಸ್ ಬಿ ಟೈಪ್ ಸಿ ಪೋರ್ಟ್ ಮೂಲಕ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲವನ್ನು ಸೂಚಿಸುತ್ತದೆ.

ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಇದೆ. 12 MP ಸೋನಿ IMX380 ಪ್ರೈಮರಿ ಸೆನ್ಸರ್ ಜೊತೆಗೆ f/1.8 ದ್ಯುತಿರಂಧ್ರ ಮತ್ತು 12 MP ಟೆಲಿಫೋಟೋ ಸೋನಿ IMX350 ಲೆನ್ಸ್ ನ್ನು ಹೊಂದಿದೆ, 2x ಆಪ್ಟಿಕಲ್ ಝೂಮ್ ಮತ್ತು ಪೋಟ್ರೈಟ್ ಮೋಡ್ ಗೆ ಇದು ಬೆಂಬಲ ನೀಡುತ್ತದೆ. ಮುಂಭಾಗದಲ್ಲಿ 20 MP ಫ್ರಂಟ್ ಫೇಸಿಂಗ್ ಸೆಲ್ಫೀ ಕ್ಯಾಮರಾವಿದ್ದು ಅದ ದ್ಯುತಿರಂಧ್ರ f/2.0 ಆಗಿದೆ. ಇದು ಫೇಸ್ ಅನ್ ಲಾಕ್ ತಂತ್ರಜ್ಞಾನಕ್ಕೂ ಬೆಂಬಲವನ್ನು ನೀಡುತ್ತದೆ.

Best Mobiles in India

English summary
Meizu 16 officially launched for Rs 27,000: The cheapest phone with an in-screen fingerprint sensor. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+