ಭಾರತದಲ್ಲಿ ಬಿಡುಗಡೆಗೊಂಡ ಎಂಐ ಪೇ- ಶಿಯೋಮಿ ಫೋನ್ ಗೆಲ್ಲುವ ಅವಕಾಶ

By Gizbot Bureau
|

ಕಳೆದ ಕೆಲವು ದಿನಗಳಿಂದ ಬೆಟಾ ಕಾರ್ಯಾಕ್ರಮವನ್ನು ಟೆಸ್ಟ್ ಮಾಡಿದ ಶಿಯೋಮಿ ಇದೀಗ ಅಂತಿಮವಾಗಿ ತನ್ನ ಎಂಐ ಪೇ ಪೇಮೆಂಟ್ ಆಪ್ ನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.ಈ ಆಪ್ ಯುಪಿಐ ಟೆಕ್ನಾಲಜಿ ಆಧಾರಿತವಾಗಿದೆ ಮತ್ತು ಎಂಐ ಸ್ಟೋರ್ ಆಪ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.ಸದ್ಯಕ್ಕೆ ಯಾವೆಲ್ಲ ಶಿಯೋಮಿ ಫೋನ್ ಗಳು ಎಂಐಯುಐ ನಲ್ಲಿ ರನ್ ಆಗುತ್ತದೋ ಅವುಗಳಲ್ಲಿ ಮಾತ್ರವೇ ಎಂಐ ಪೇ ಕಾರ್ಯನಿರ್ವಹಿಸುತ್ತದೆ.

ಪೇಟಿಎಂಗೆ ಸ್ಪರ್ಧೆಯೊಡ್ಡಲು ಬರುತ್ತಿದೆ ಶಿಯೋಮಿಯ ಎಂಐ ಪೇ

ನ್ಯಾಷನಲ್ ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾದಿಂದ ಎಂಐ ಪೇ ಸರ್ಟಿಫೈಡ್ ಆಗಿದೆ ಎಂದು ಶಿಯೋಮಿ ತಿಳಿಸಿದ್ದು ಡಿಜಿಟಲ್ ಪೇಮೆಂಟ್ ಗೆ ಇದು ಸುಭದ್ರವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಎಂಐ ಫೋನ್ ಗಳಲ್ಲಿ ಎಕ್ಸ್ ಕ್ಲೂಸೀವ್:

ಎಂಐ ಫೋನ್ ಗಳಲ್ಲಿ ಎಕ್ಸ್ ಕ್ಲೂಸೀವ್:

ಈಗಾಗಲೇ ಹೇಳಿರುವಂತೆ ಎಂಐ ಪೇ ಯುಪಿಐ(ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಆಧಾರಿತವಾಗಿದ್ದು ಭಾರತದಲ್ಲಿ ಸದ್ಯ ಇರುವ ಪೇಟಿಎಂ ಮತ್ತು ಇತರೆ ಪಾವತಿ ಆಪ್ ಗಳು ಇದನ್ನೇ ಬಳಕೆ ಮಾಡುತ್ತಿವೆ. ಸದ್ಯಕ್ಕೆ ಎಂಐ ಪೇ MIUI-ಆಧಾರಿತ ಶಿಯೋಮಿ ಸ್ಮಾರ್ಟ್ ಫೋನ್ ಗಳ ಬಳಕೆದಾರರಿಗೆ ಎಕ್ಸ್ ಕ್ಲೂಸೀವ್ ಆಗಿ ಲಭ್ಯವಾಗುತ್ತದೆ ಮತ್ತು ಇದು ಸ್ಮಾರ್ಟ್ ಇಂಟಿಗ್ರೇಷನ್ ಫೀಚರ್ ಗಳನ್ನು ಆಫರ್ ಮಾಡುತ್ತದೆ.

ಪಾವತಿ ಆಯ್ಕೆಗಳು:

ಪಾವತಿ ಆಯ್ಕೆಗಳು:

ಪೇಟಿಎಂ ಸೇರಿದಂತೆ ಇತರೆ ಪಾವತಿ ಆಯ್ಕೆಗಳಲ್ಲಿ ನಡೆಸುವಂತಹ ಟ್ರಾನ್ಸ್ಯಾಕ್ಷನ್ ನ್ನು ಎಂಐ ಪೇನಲ್ಲೂ ಕೂಡ ನಡೆಸಲು ಸಾಧ್ಯವಾಗುತ್ತದೆ. ಎಂಐ ಪೇ ಕೂಡ ಪೇಟಿಎಂನಂತೆಯೇ ಕೆಲಸ ಮಾಡುತ್ತದೆ. ಬಳಕೆದಾರರು ಇತರೆ ಎಂಐ ಪೇ ಬಳಕೆದಾರರಿಗೂ ಕೂಡ ಪಾವತಿ ಮಾಡಬಹುದು. ಎಲೆಕ್ಟ್ರಿಸಿಟಿ, ಗ್ಯಾಸ್,ಟೆಲಿಫೋನ್ ಮತ್ತು ರೀಚಾರ್ಜ್ ಸೇರಿದಂತೆ ಹಲವು ಕೆಲಸಗಳಿಗಾಗಿ ಪಾವತಿಯನ್ನು ಮಾಡಲು ಇದರಲ್ಲಿ ಅವಕಾಶವಿರುತ್ತದೆ. ಅಸ್ಸಾಂ ಪವರ್, ಬೆಸ್ಟ್ ಮುಂಬೈ(BEST Mumbai), BSES ರಾಜಧಾನಿ ಮತ್ತು ಯಮುನಾ ಗಳು ಎಂಐ ಪೇ ನಲ್ಲಿ ಬೆಂಬಲಿತವಾಗಿವೆ.

ಬ್ರಾಡ್ ಬ್ಯಾಂಡ್ ಸೇವೆಗಳ ಬಿಲ್ ಪಾವತಿ:

ಬ್ರಾಡ್ ಬ್ಯಾಂಡ್ ಸೇವೆಗಳ ಬಿಲ್ ಪಾವತಿ:

ಪ್ರಮುಖ ಬ್ರಾಡ್ ಬ್ಯಾಂಡ್ ಸೇವೆಗಳಾಗಿರುವ ಹ್ಯಾಥ್ ವೇ, ಏಷಿಯಾ ನೆಟ್ ಮತ್ತು ನೆಕ್ಸ್ಟ್ರಾ ಬ್ರಾಡ್ ಬ್ಯಾಂಡ್ ಬಿಲ್ ಗಳನ್ನು ಇದರಲ್ಲಿ ಪಾವತಿಸಬಹುದು. ಕ್ಯೂಆರ್ ಕೋಡ್ ಬಳಸಿ ಕೂಡ ಪಾವತಿ ಮಾಡುವುದಕ್ಕೆ ಎಂಐ ಪೇ ನಲ್ಲಿ ಬಳಕೆದಾರರಿಗೆ ಅವಕಾಶವಿರುತ್ತದೆ.

ಚೀನಾ ಸರ್ವರ್ ನಲ್ಲಿ ಡಾಟಾ ಸೇವ್ ಆಗುವುದಿಲ್ಲ:

ಐಸಿಐಸಿಐ ಬ್ಯಾಂಕ್ ನ್ನು ಶಿಯೋಮಿ ಸದ್ಯ ಪೇಮೆಂಟ್ ಸರ್ವೀಸ್ ಪ್ರೊವೈಡರ್ ಆಗಿ ಬಳಸುತ್ತಿದೆ. ಇನ್ನು ಡಾಟಾ ಭಾರತದಲ್ಲಿರುವ ಸರ್ವರ್ ನಲ್ಲಿಯೇ ಸ್ಟೋರ್ ಆಗಿರುತ್ತದೆಯೇ ಹೊರತು ಚೀನಾದಲ್ಲಿ ಅಲ್ಲ ಎಂದು ಶಿಯೋಮಿ ತಿಳಿಸಿದೆ.

ಶಿಯೋಮಿ ಫೋನ್ ಗಳಲ್ಲಿ ಎಂಐ ಪೇಯನ್ನು ಇಂಟಿಗ್ರೇಟ್ ಮಾಡಲಾಗಿದ್ದು ಅಧ್ಬುತವಾಗಿ ಪೇಮೆಂಟ್ ಸೇವೆಯನ್ನು ಗ್ರಾಹಕರಿಗೆ ನೀಡುವ ನಿರೀಕ್ಷೆ ಇದೆ. ಇತರೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಎಂಐ ಪೇ ಲಭ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಶಿಯೋಮಿ ಇದುವರೆಗೂ ಯಾವುದೇ ಮಾಹಿತಿಯನ್ನೂ ನೀಡಿಲ್ಲ.

ಲಕ್ಕಿ ಗ್ರಾಹಕರಿಗೆ ಫೋನ್ ಗೆಲ್ಲುವ ಅವಕಾಶ:

ಎಂಐ ಪೇಯನ್ನು ಅಧ್ಬುತವಾಗಿ ಆರಂಭಿಸುವ ನಿಟ್ಟಿನಲ್ಲಿ ಶಿಯೋಮಿ ಪ್ರಾರಂಭಿಕವಾಗಿ ಅಧ್ಬುತ ಆಫರ್ ಗಳನ್ನು ಬಳಕೆದಾರರಿಗೆ ನೀಡುವ ಸಾಧ್ಯತೆ ಇದೆ.ಎಂಐ ಪೇ ಬಿಡುಗಡೆಗೊಂಡ ನಂತರ ಯಾರು ಬಳಕೆ ಮಾಡುತ್ತಾರೋ ಅವರಿಗೆ 100 ರೆಡ್ಮಿ ನೋಟ್ 7 ಫೋನ್ ಗಳು ಮತ್ತು 50 ಎಂಐ ಎಸ್ಇಡಿ ಟಿವಿ 4ಎ ಪ್ರೋ 32 ಫೋನ್ ಗಳನ್ನು ಗೆಲ್ಲುವ ಅವಕಾಶವಿರುತ್ತದೆ.

ದೊಡ್ಡ ಸ್ಪರ್ಧೆ:

ಭಾರತದಲ್ಲಿರುವ ಇತರೆ ಪೇಮೆಂಟ್ ಆಪ್ ಗಳಾಗಿರುವ ಪೇಟಿಎಂ, ಫೋನ್ ಪೇ, ಮೊಬಿಕ್ ವಿಕ್ ಮತ್ತು ಗೂಗಲ್ ಪೇ ಗಳಿಂದ ಎಂಐ ಪೇ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ವಾಟ್ಸ್ ಆಪ್ ನ ಇನ್-ಬಿಲ್ಟ್ ಪೇಮೆಂಟ್ ಸೇವೆಯಿಂದಲೂ ಕೂಡ ಸ್ಪರ್ಧೆ ಎದುರಿಸಬೇಕಾಗುತ್ತದೆ. ಇದು ಕೂಡ ಯುಪಿಐ ಆಧಾರಿತವಾಗಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವ ಪೇಮೆಂಟ್ ಆಪ್ ಗೆ ಗ್ರಾಹಕ ಮನ್ನಣೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

Best Mobiles in India

Read more about:
English summary
Mi Pay launched in India to challenge Paytm; Xiaomi offers free 100 Redmi Note 7, 50 Mi TVs to Mi Pay users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X