ಮೈಕ್ರೋಸಾಫ್ಟ್ ಸ್ಕೈಪ್ ಲೈಟ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆ
ಇದಲ್ಲದೇ ಈ ಆಪ್ ನಲ್ಲಿ ಕೃತಕ ಬುದ್ದಿಮತ್ತೆಯನ್ನು ಅಳವಡಿಸಿದೆ ಎನ್ನಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಆಪ್ ಗಳಿಗಿಂತೂ ಭಿನ್ನವಾಗಿ ಇದು ಕಾರ್ಯನಿರ್ವಹಿಸಲಿದೆ.
ಮೈಕ್ರೋ ಸಾಫ್ಟ್ ಇತ್ತೀಚೆಗೆ ಲಾಂಚ್ ಮಾಡಿದ್ದ ಸ್ಕೈಪ್ ಲೈಟ್ ವಿಡಿಯೋ ಕಾಲಿಂಗ್ ಆಪ ಅನ್ನು ಮತ್ತಷ್ಟು ಬಳಕೆದಾರರ ಸ್ನೇಹಿಯನ್ನಾಗಿಸಲು ಮುಂದಾಗಿದೆ. ಈ ಆಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ನೀಡಲು ಮುಂದಾಗಿದೆ.

ಇದಲ್ಲದೇ ಈ ಆಪ್ ನಲ್ಲಿ ಕೃತಕ ಬುದ್ದಿಮತ್ತೆಯನ್ನು ಅಳವಡಿಸಿದೆ ಎನ್ನಲಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಆಪ್ ಗಳಿಗಿಂತೂ ಭಿನ್ನವಾಗಿ ಇದು ಕಾರ್ಯನಿರ್ವಹಿಸಲಿದೆ. ಈಗಾಗಲೇ ಸ್ಕೈಪ್ ಲೈಟ್ ಆಪ್ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಂಪಾಗಿ ವಿಡಿಯೋ ಚಾಟಿಂಗ್ ಮಾಡಲು ಹೇಳಿ ಮಾಡಿಸಿದಂತಹ ಆಪ್ ಆಗಿದೆ ಎನ್ನಲಾಗಿದೆ. ಸ್ಕೈಪ್ ಆಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡವರು ಚಾಟ್ ನಲ್ಲಿ ಕಾಣಿಸಿಕೊಳ್ಳಬಹುದಾಗಿದೆ.
ಇದಲ್ಲದೇ ಈ ಆಪ್ ನಲ್ಲಿ ರೂಹ ಎನ್ನುವ ಕೃತಕ ಬುದ್ದಿಮತ್ತೆ ಆಧಾರಿತ ಚಾಟ್ ಬೂಟ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಬಳಕೆದಾರರು ಗ್ರೀಟಿಂಗ್ ಗಳನ್ನು ಕಳುಹಿದಬಹುದಾಗಿದೆ. ಸ್ಟೀಕರ್ ಗಳನ್ನು ಮತ್ತು ಎಮೋಷನ್ ಗಳನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.
ಈಗಾಗಲೇ ಮಾರುಟ್ಟೆಯಲ್ಲಿ ಗೂಗಲ್ ಡಿಯೋ, ವಾಟ್ಸ್ ಆಪ್ ಮತ್ತು ಮೇಸೆಂಜರ್ ಆಪ್ ಗಳು ಸಗ ವಿಡಿಯೋ ಕಾಲಿಂಗ್ ಸೇವೆಯನ್ನು ನೀಡುತ್ತಿದೆ. ಇದೇ ಈ ಆಪ್ ಗಳ ಮಾದರಿಯಲ್ಲಿ ಸ್ಕೈಪ್ ಆಪ್ ಸಹ ಮೇಸೆಜ್ ಮಾಡುವ ಅವಕಾಶವನ್ನು ನೀಡುತ್ತಿದೆ.


Click it and Unblock the Notifications








