ಮೈಕ್ರೋಸಾಫ್ಟ್ ಕೃತಕ ಬುದ್ದಿಮತ್ತೆಯ ಆಪ್ ಬಿಡುಗಡೆ!!..ಏನೆಲ್ಲಾ ಉಪಯೋಗ ಗೊತ್ತಾ?
ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಹೊಸದೊಂದು ಕೃತಕ ಬುದ್ದಿಮತ್ತೆಯ ಆಪ್ ಅನ್ನು ಅಭಿವೃದ್ದಿ ಮಾಡಿದೆ.
ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಹೊಸದೊಂದು ಕೃತಕ ಬುದ್ದಿಮತ್ತೆಯ ಆಪ್ ಅನ್ನು ಅಭಿವೃದ್ದಿ ಮಾಡಿದೆ. ಅತ್ಯುತ್ತಮ ತಂತ್ರಜ್ಞಾನ ಬುದ್ದಿಮತ್ತೆಯ ಕ್ಷಮತೆಯನ್ನು ಹೊಂದಿರುವ ಈ ಆಪ್ ದೃಷ್ಠಿ ವೈಫಲ್ಯ ಹೊಂದಿರುವವರಿಗೆ ಬಹಳ ಉಪಯೋಗವಾಗಲಿದ್ದು, ಉಚಿತವಾಗಿ ಲಭ್ಯವಿರುವ ಈ ಆಪ್ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.!!
ದೃಷ್ಠಿ ವೈಫಲ್ಯ ಹೊಂದಿರುವವರು ಈ ಆಪ್ ಮೂಲಕ ತಮ್ಮ ದೈನಂದಿಕ ಕಾರ್ಯಗಳನ್ನು ಸರಾಗವಾಗಿ ನಡೆಸಬಹುದಾಗಿದ್ದು, ದೃಷ್ಠಿ ವೈಫಲ್ಯ ಹೊಂದಿರುವವರ ಜೊತೆಗೆ ವಯಸ್ಸಾದವರೂ ಕೂಡ ಕಣ್ಣು ಮಂಜಾದ ಕಾಲದಲ್ಲ ಈ ಆಪ್ ಬಳಕೆ ಮಾಡಬಹುದಾಗಿದೆ.! ಹಾಗಾದರೆ, ಮೈಕ್ರೋಸಾಫ್ಟ್ ಅಭಿವೃದ್ದಿಪಡಿಸಿರುವ ಆ ಆಪ್ ಯಾವುದು? ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ.? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಸೀಯಿಂಗ್ ಏಐ( Seeing AI) ಆಪ್
ಅತ್ಯುತ್ತಮ ತಂತ್ರಜ್ಞಾನ ಬುದ್ದಿಮತ್ತೆ ಹೊಂದಿರುವ ಸೀಯಿಂಗ್ ಏಐ( Seeing AI) ಎಂಬ ಆಪ್ ಅನ್ನು ಮೈಕ್ರೋಸಾಫ್ಟ್ ಅಭಿವೃದ್ದಿಪಡಿಸಿದೆ. ಕೃತಕ ಬುದ್ದಿಮತ್ತೆಯ ಮೂಲಕ ಮಾನವರ ಫೇಸ್ ಎಕ್ಸ್‌ಪ್ರೆಷನ್ ಗುರುತಿಸುವ ಫೀಚರ್ ಹೊಂದಿರುವ ಈ ಆಪ್ ಉಚಿತವಾಗಿ ಲಭ್ಯವಿದೆ.!!

ಹೇಗೆ ಕಾರ್ಯನಿರ್ವಹಿಸುತ್ತದೆ ಸೀಯಿಂಗ್ ಏಐ( Seeing AI)?
ಕ್ಯಾಮೆರಾ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಸೀಯಿಂಗ್ ಏಐ( Seeing AI) ಆಪ್ ದೃಷ್ಠಿವೈಫಲ್ಯ ಹೊಂದಿರುವವರಿಗೆ ನಡೆಯುವಾಗ ತಮ್ಮ ಮುಂದೆ ನಡೆಯುತ್ತಿರುವ ದೃಶ್ಯವನ್ನು ವಿವರಿಸುತ್ತದಂತೆ. ಜನರ ಮುಖಭಾವವನ್ನು ಅರಿತು ಅವರ ಭಾವನೆಗಳನ್ನು ತಿಳಿಸುತ್ತದೆ.!!

ಮಾಹಿತಿ ನೀಡುತ್ತದೆ.
ನೀವು ಯಾವುದೇ ವಸ್ತವನ್ನು ಖರೀದಿಸಬೇಕಾದರೆ ಆ ವಸ್ತುವಿನ ಬಗ್ಗೆ ತಿಳಿಸುಕೊಳ್ಳುತ್ತಿರಾ ಅಲ್ಲವೇ?. ಹಾಗಾಗಿಯೇ, ಪ್ರತಿಯೊಂದು ವಸ್ತುವಿನ ಬಗ್ಗೆ ಮಾಹಿತಿ ನೀಡುವ ಕೃತಕ ಬುದ್ದಿಮತ್ತೆಯನ್ನು ಈ ಆಪ ಹೊಂದಿದೆ. ಹಾಗಾಗಿ, ದೃಷ್ಠಿ ಮಂಜಾದವರು ಸಹ ಈ ಆಪ್ ಮೂಲಕ ಎಲ್ಲಾ ವಸ್ತುಗಳ ಮಾಹಿತಿ ಪಡೆಯಬಹುದು.!!

ಬಿಲ್ ಓದಿ ಹೇಳುತ್ತೆ.!!
ಯಾವುದೇ ಬಿಲ್ ನೋಡಿ ಇಷ್ಟೇ ಆಗಿದೆ ಎಂದು ಹೇಳುವ ಸೌಲಭ್ಯವನ್ನು ಈ ಆಪ್ ಹೊಂದಿದೆ. ಇದರಿಂದ ದೃಷ್ಠಿವೈಫಲ್ಯ ಹೊಂದಿರುವವರು ಹೋಟೆಲ್, ಬ್ಯಾಂಕ್ ಎಲ್ಲೆಡೇ ವ್ಯವಹಾರ ನಡೆಸಲು ಬಹಳ ಸಹಕಾರಿಯಾಗಿದೆ.!!

ಆಂಡ್ರಾಯ್ಡ್‌ಗೆ ಈಗಲೇ ಲಭ್ಯವಿಲ್ಲಾ.!!
ಪ್ರಸ್ತುತ ಈ ಆಪ್ IOS ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಲಭ್ಯವಿದ್ದು, ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಈಗಲೇ ಲಭ್ಯವಿಲ್ಲಾ.!! ಆದರೆ, ನಂತರದ ದಿವಸಗಳಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ ಆಪ್ ಪಡೆಯಬಹುದು.!!

ಏನಿದು ಇಂಟೆಲಿಜೆಂಟ್ ಕ್ಯಾಮರಾ?!!
ಮೈಕ್ರೋಸಾಫ್ಟ್ ಇಂಟೆಲಿಜೆಂಟ್ ಕ್ಯಾಮರಾ ಮೂಲಕ ಇಂತಹ ಆಯ್ಕೆ ತಂದಿದ್ದು, ಬಹುತೇಕ ದಿಗ್ಗಜ ಕಂಪೆನಿಗಳು ಸಹ ಇಂತಹ ಪ್ರಯೋಜನಕಾರಿ ಇಂಟೆಲಿಜೆಂಟ್ ಕ್ಯಾಮರಾ ಅಭಿವೃದ್ದಿಯಲ್ಲಿ ನಿರತವಾಗಿವೆ. ಹಾಗಾಗಿ, ಮುಂದಿನ ದಿನದಲ್ಲಿ ಈ ತಂತ್ರಜ್ಞಾನ ಮತ್ತಷ್ಟು ಬೆಳೆಯಲಿದೆ.!!


Click it and Unblock the Notifications








