Home
Apps

ಗೂಗಲ್‌ಗೆ ಸೆಡ್ಡು ಹೊಡೆದ ಮೈಕ್ರೋಸಾಫ್ಟ್..! ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಹೊಸ ಆಪ್‌..!

By Gizbot Bureau

ಮೈಕ್ರೋಸಾಫ್ಟ್‌ ಕಂಪನಿ ವರ್ಡ್, ಎಕ್ಸೆಲ್ ಮತ್ತು ಪವರ್‌ ಪಾಯಿಂಟ್ ಬಳಕೆದಾರರಿಗಾಗಿ ಮೈಕ್ರೋಸಾಫ್ಟ್ ಆಫೀಸ್ ಅಪ್ಲಿಕೇಶನ್ ಎಂಬ ಹೊಸ ಆಲ್ ಇನ್ ಒನ್ ಆಪ್‌ನ್ನು ಬಿಡುಗಡೆಗೊಳಿಸಿದೆ. ಈ ಅಪ್ಲಿಕೇಶನ್ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಗೂಗಲ್‌ಗೆ ಸೆಡ್ಡು ಹೊಡೆದ ಮೈಕ್ರೋಸಾಫ್ಟ್!ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಹೊಸ ಆಪ್‌!

ಆಂಡ್ರಾಯ್ಡ್ ಪೊಲೀಸ್‌ ವರದಿಯ ಪ್ರಕಾರ, ಈ ಮೈಕ್ರೋಸಾಫ್ಟ್ ಆಫೀಸ್ ಅಪ್ಲಿಕೇಶನ್ 2019ರ ಆರಂಭದಲ್ಲಿಯೇ ಪರೀಕ್ಷೆಗೆ ಒಳಪಟ್ಟಿತು. ಹಾಗೂ ನವೆಂಬರ್‌ನಲ್ಲಿ ಸಾರ್ವಜನಿಕ ವಿಮರ್ಶೆಯನ್ನು ತಲುಪಿತು. ಈ ಅಪ್ಲಿಕೇಶನ್‌ನೊಂದಿಗೆ, ಮೈಕ್ರೋಸಾಫ್ಟ್ ಗೂಗಲ್‌ನ ಗೂಗಲ್‌ ಡ್ರೈವ್‌ಗೆ ಸ್ಪರ್ಧೆ ನೀಡಲಿದೆ. ಡಾಕ್ಯುಮೆಂಟ್‌ ಸಂಪಾದನೆಗೆ ಆರಂಭದಲ್ಲಿ ಗೂಗಲ್‌ ಡ್ರೈವ್‌ ಸಾಮಾನ್ಯ ಅಪ್ಲಿಕೇಶನ್ ಹೊಂದಿತ್ತು. ಆದರೆ, ಕಂಪನಿಯು ನಂತರ ಅನೇಕ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿ, ಬಳಕೆದಾರರಿಗೆ ಅಗತ್ಯವಿರುವ ಏಕೈಕ ಅಪ್ಲಿಕೇಶನ್‌ಗಳನ್ನು ಸ್ಥಾಪಿಸುವ ಆಯ್ಕೆಯನ್ನು ನೀಡುತ್ತದೆ.

ಮೈಕ್ರೋಸಾಫ್ಟ್ ಹೊಸದಾಗಿ ಪ್ರಾರಂಭಿಸಿರುವ ಆಫೀಸ್ ಅಪ್ಲಿಕೇಶನ್ ಈಗಿನಂತೆ ಟ್ಯಾಬ್ಲೆಟ್‌ಗಳು ಅಥವಾ ಕ್ರೋಮ್‌ಬುಕ್‌ಗಳಿಗೆ ಬೆಂಬಲವನ್ನು ನೀಡುವುದಿಲ್ಲ. ಇದು ಮೈಕ್ರೋಸಾಫ್ಟ್‌ನ ವರ್ಡ್, ಎಕ್ಸೆಲ್ ಮತ್ತು ಪವರ್‌ ಪಾಯಿಂಟ್‌ಗಳ ಸಂಯೋಜನೆಯಾಗಿದೆ. ಒಂದೇ ಅಪ್ಲಿಕೇಶನ್ ಬಳಸಿ ಬಳಕೆದಾರರು ಡಾಕ್ಯುಮೆಂಟ್‌ಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರೆಸೆಂಟೆರ್‌ಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಮೈಕ್ರೋಸಾಫ್ಟ್ ಆಫೀಸ್ ಅಪ್ಲಿಕೇಶನ್‌ನ ಹೆಚ್ಚುವರಿ ವೈಶಿಷ್ಟ್ಯಗಳೆಂದರೆ, ಡಾಕ್ಯುಮೆಂಟ್‌ನ ಚಿತ್ರ ಕ್ಲಿಕ್ ಮಾಡುವ ಮತ್ತು ಅದನ್ನು ಸಂಪಾದಿಸಬಹುದಾದ ವರ್ಡ್ ಫೈಲ್ ಆಗಿ ಪರಿವರ್ತಿಸಬಹುದಾಗಿದೆ. ಟೇಬಲ್‌ನ್ನು ಎಕ್ಸೆಲ್ ಸ್ಪ್ರೆಡ್‌ಶೀಟ್ ಆಗಿಯೂ ಪರಿವರ್ತಿಸಬಹುದಾಗಿದೆ. ಇದು ತನ್ನ ಬಳಕೆದಾರರಿಗೆ ಹತ್ತಿರದ ಸಾಧನಗಳಿಗೆ ಫೈಲ್‌ಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಹಾಗೂ ಲಿಂಕ್‌ಗಳನ್ನು ಒಪನ್‌ ಮಾಡಲು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತದೆ.

ಮೈಕ್ರೋಸಾಫ್ಟ್ ಅಕೌಂಟ್‌ (ಒನ್‌ಡ್ರೈವ್ ಅಥವಾ ಶೇರ್‌ಪಾಯಿಂಟ್‌ಗಾಗಿ) ಅಥವಾ ಥರ್ಡ್‌ ಪಾರ್ಟಿ ಕ್ಲೌಡ್ ಶೇಖರಣಾ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಲು ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಲಾಗಿನ್ ಆಗುವ ಅಗತ್ಯವಿರುತ್ತದೆ. ಆಫೀಸ್ 365 ಚಂದಾದಾರಿಕೆಗೆ ಸಂಪರ್ಕ ಹೊಂದಿದ ವೈಯಕ್ತಿಕ, ಕೆಲಸ ಅಥವಾ ಶಾಲೆಯ ಮೈಕ್ರೋಸಾಫ್ಟ್ ಖಾತೆಯೊಂದಿಗೆ ಲಾಗ್ ಇನ್ ಮಾಡುವವರು, ಪ್ರೀಮಿಯಂ ವೈಶಿಷ್ಟ್ಯಗಳನ್ನು ಅನ್‌ಲಾಕ್‌ ಮಾಡಬಹುದಾಗಿದೆ.

Best Mobiles in India

English summary
Microsoft Releases All New Microsoft Office App For Android Users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+