ಮೈಕ್ರೊಸಾಫ್ಟ್ನಿಂದ 'ಫೇಸ್ ಸ್ವಾಪ್' ಆಪ್ ಬಿಡುಗಡೆ..ಏನಿದು? ಏನು ಉಪಯೋಗ?
ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ಆಪ್ ಬಳಸಬಹುದಾಗಿದೆ.!!
ಬೇರೆ ಬೇರೆ ದೃಶ್ಯಗಳಿಗೆ ಮತ್ತು ವಿಭಿನ್ನ ಚಿತ್ರಗಳಿಗೆ ನಿಮ್ಮ ಮುಖವನ್ನು ಅಂಟಿಸಿಕೊಳ್ಳುವ ಹೊಸದೊಂದು ಆಪ್ ಅನ್ನು ಮೈಕ್ರೊಸಾಫ್ಟ್ ಸಂಸ್ಥೆ ಬಿಡುಗಡೆ ಮಾಡಿದೆ. ಮೈಕ್ರೊಸಾಫ್ಟ್ ಸಂಸ್ಥೆಯ ಬಿಂಗ್ ಸರ್ಚ್ ತಂತ್ರಜ್ಞಾನವನ್ನು ಬಳಸುವ ಹೊಸ ಆಪ್ ಫೇಸ್ ಕೊಲಾಜ್‌ಗೆ ಅತ್ಯದ್ಬುತ ತಂತ್ರಜ್ಞಾನವನ್ನು ಹೊಂದಿದೆ.!!
ಪ್ರಪಂಚದ ಎಲ್ಲಾ ಸ್ಟಾರ್ ವ್ಯಕ್ತಿಗಳ ಮುಖಗಳನ್ನು ಬದಲಿಸಲು ಅವಕಾಶ ನೀಡುವ ಈ ಆಪ್ ಹೆಸರು 'ಫೇಸ್ ಸ್ವಾಪ್' ಎಂದಾಗಿದ್ದು, ಸದ್ಯಕ್ಕೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ. ಅಂದರೆ ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ಆಪ್ ಬಳಸಬಹುದಾಗಿದೆ.!!

'ಫೇಸ್ ಸ್ವಾಪ್' ಮೂಲಕ ಸ್ಟಾರ್ ವ್ಯಕ್ತಿಗಳ ಮುಖಗಳನ್ನು ಬದಲಿಸಿಕೊಳ್ಳಲು ಸೆಲ್ಫಿ ಬಳಸಿ ಫೋಟೋ ಕ್ಲಿಕ್ ಮಾಡಬೇಕಿದೆ. ನಂತರ 'ಫೇಸ್ ಸ್ವಾಪ್' ಆಪ್ ಅದರಿಂದ ಮುಖವನ್ನು ಬೇರ್ಪಡಿಸಿ, ಇತರ ಚಿತ್ರಗಳಿಗೆ ಅಥವಾ ವ್ಯಕ್ತಿಗಳಿಗೆ ಅದನ್ನು ಅಂಟಿಸಲು ನೆರವಾಗುತ್ತದೆ.

ಇಷ್ಟೇ ಅಲ್ಲದೆ ಅಂತರ್ಜಾಲದಲ್ಲಿ ವಿವಿಧ ಫೋಟೋಗಳನ್ನು ಸರ್ಚ್ ಮಾಡುವ ಅವಕಾಶವನ್ನು ಸಹ 'ಫೇಸ್ ಸ್ವಾಪ್' ಆಪ್‌ನಲ್ಲಿ ನೀಡಲಾಗಿದೆ. ಇವುಗಳನ್ನು ಡೌನ್‌ಲೋಡ್ ಮಾಡಿ ಮುಖ ಬದಲಿಸಿ, ಫೋಟೋ ಉಳಿಸಿಕೊಳ್ಳುವ ಅಥವಾ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅವಕಾಶವನ್ನು ಸಹ ಆಪ್ ಹೊಂದಿದೆ.!!


Click it and Unblock the Notifications








